ಪ್ರತಿಷ್ಠಿತ ಮೀಡಿಯಾ ಕಪ್​: ಟಿವಿ9 ಕ್ರಿಕೆಟ್ ತಂಡಕ್ಕೆ ಅಮೋಘ ಗೆಲುವು

ಬೆಂಗಳೂರು: ಟಿವಿ9 ಕರ್ನಾಟಕ ತಂಡವು ಟಿ-10 ಮೀಡಿಯಾ ಕ್ರಿಕೆಟ್​ ಚಾಂಪಿಯನ್​ಶಿಪ್​​ನಲ್ಲಿ ಅಮೋಘ ಸಾಧನೆ ಮಾಡಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಬಿಟಿವಿ ಕ್ರಿಕೆಟ್​ ತಂಡವನ್ನು ಸುಲಭವಾಗಿ ಮಣಿಸಿ, ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಫೈನಲ್ಸ್​ನಲ್ಲಿ ಟಿವಿ9 ಕರ್ನಾಟಕ ತಂಡವು ನಿಗದಿತ10 ಓವರ್​​ಗಳಲ್ಲಿ 79 ರನ್ ಗಳಿಸಿ, ಎದುರಾಳಿ ಬಿಟಿವಿ ತಂಡಕ್ಕೆ 80 ರನ್​ಗಳ ಟಾರ್ಗೆಟ್​​ ನೀಡಿತು. ಬಿಟಿವಿ ಕ್ರಿಕೆಟ್​ ತಂಡವು 8 ವಿಕೆಟ್​ಗಳ ನಷ್ಟಕ್ಕೆ 52 ರನ್​ ಗಳಿಸಿ, ಸೋಲನ್ನೊಪ್ಪಿತು. ಕಿರಣ್​ ಹೆಚ್​ ವಿ ನಾಯಕತ್ವದಲ್ಲಿ ಟಿವಿ9 ತಂಡ […]

ಪ್ರತಿಷ್ಠಿತ ಮೀಡಿಯಾ ಕಪ್​: ಟಿವಿ9 ಕ್ರಿಕೆಟ್ ತಂಡಕ್ಕೆ ಅಮೋಘ ಗೆಲುವು
ಸಾಧು ಶ್ರೀನಾಥ್​

Updated on: Dec 25, 2019 | 7:07 PM

ಬೆಂಗಳೂರು: ಟಿವಿ9 ಕರ್ನಾಟಕ ತಂಡವು ಟಿ-10 ಮೀಡಿಯಾ ಕ್ರಿಕೆಟ್​ ಚಾಂಪಿಯನ್​ಶಿಪ್​​ನಲ್ಲಿ ಅಮೋಘ ಸಾಧನೆ ಮಾಡಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಬಿಟಿವಿ ಕ್ರಿಕೆಟ್​ ತಂಡವನ್ನು ಸುಲಭವಾಗಿ ಮಣಿಸಿ, ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ಫೈನಲ್ಸ್​ನಲ್ಲಿ ಟಿವಿ9 ಕರ್ನಾಟಕ ತಂಡವು ನಿಗದಿತ10 ಓವರ್​​ಗಳಲ್ಲಿ 79 ರನ್ ಗಳಿಸಿ, ಎದುರಾಳಿ ಬಿಟಿವಿ ತಂಡಕ್ಕೆ 80 ರನ್​ಗಳ ಟಾರ್ಗೆಟ್​​ ನೀಡಿತು. ಬಿಟಿವಿ ಕ್ರಿಕೆಟ್​ ತಂಡವು 8 ವಿಕೆಟ್​ಗಳ ನಷ್ಟಕ್ಕೆ 52 ರನ್​ ಗಳಿಸಿ, ಸೋಲನ್ನೊಪ್ಪಿತು. ಕಿರಣ್​ ಹೆಚ್​ ವಿ ನಾಯಕತ್ವದಲ್ಲಿ ಟಿವಿ9 ತಂಡ ಈ ಅಮೋಘ ಜಯ ದಾಖಲಿಸಿದೆ.

PCB-PES ಜಂಟಿ ಆಯೋಜನೆ
ಪ್ರತಿಷ್ಠಿತ ಟೂರ್ನಿಯನ್ನು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಪಿಇಎಸ್​ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಿತ್ತು. ಸೆಮಿಫೈನಲ್ಸ್​ನಲ್ಲಿ ಟಿವಿ9, ಬೆಂಗಳೂರು ಕ್ರೈಂ ರಿಪೋರ್ಟರ್ಸ್​ ತಂಡವನ್ನ ಸೋಲಿಸಿ, ಫೈನಲ್​ಗೆ ಪ್ರವೇಶಿಸಿತ್ತು. ಮತ್ತೊಂದು ಸೆಮಿಫೈನಲ್ಸ್​ನಲ್ಲಿ ಬಿಟಿವಿ ಕ್ರಿಕೆಟ್​ ತಂಡವು ನ್ಯೂಸ್​ 9 ತಂಡವನ್ನ ಸೋಲಿಸಿತ್ತು.

ಬಿಎಸ್​ವೈ-ವೀರೇಂದ್ರ ಹೆಗಡೆ ಅವರಿಂದ ಅರಮನೆ ಮೈದಾನದಲ್ಲಿ ಪ್ರಶಸ್ತಿ ವಿತರಣೆ
ಅರಮನೆ ಮೈದಾನದಲ್ಲಿ ಡಿಸೆಂಬರ್​ 31ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಪ್ರಶಸ್ತಿ ವಿತರಿಸಲಿದ್ದಾರೆ. ಪ್ರಜಾವಾಣಿ, ಟೈಮ್ಸ್​ ಆಫ್​​ ಇಂಡಿಯಾ, ಪಬ್ಲಿಕ್​ ಟಿವಿ, ಟಿವಿ 5, ಪ್ರೆಸ್​ ಕ್ಲಬ್​ ಸೇರಿದಂತೆ ಒಟ್ಟು 21 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.


Published On - 6:41 pm, Wed, 25 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us