AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

U-18 Hockey Asia Cup 2026: ಚಿನ್ನ ಗೆದ್ದ ಪುರುಷರ ತಂಡ; ಕಂಚಿಗೆ ಮುತ್ತಿಕ್ಕಿದ ಮಹಿಳಾ ಪಡೆ

Hockey U-18 Asia Cup 2026: ಜಪಾನ್‌ನಲ್ಲಿ ನಡೆದ U18 ಪುರುಷರ ಹಾಕಿ ಏಷ್ಯಾಕಪ್‌ ಫೈನಲ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಯುವ ಭಾರತ ತಂಡ ಜಪಾನ್‌ ಅನ್ನು 4-1 ಗೋಲುಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು. ಆಶಿಶ್ ತಾನಿ ಪೂರ್ಣಿ ಹ್ಯಾಟ್ರಿಕ್ ಗೋಲು ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮಹಿಳಾ ತಂಡ ಕಂಚು ಗೆದ್ದಿದ್ದು, ಹಾಕಿ ಇಂಡಿಯಾ ಎರಡೂ ತಂಡಗಳಿಗೆ ನಗದು ಬಹುಮಾನ ಘೋಷಿಸಿದೆ.

U-18 Hockey Asia Cup 2026: ಚಿನ್ನ ಗೆದ್ದ ಪುರುಷರ ತಂಡ; ಕಂಚಿಗೆ ಮುತ್ತಿಕ್ಕಿದ ಮಹಿಳಾ ಪಡೆ
Hockey U 18 Asia Cup 2026
ಪೃಥ್ವಿಶಂಕರ
|

Updated on:Jun 06, 2026 | 9:26 PM

Share

ಜಪಾನ್‌ನ ಕಾಕಮಿಗಹರಾದಲ್ಲಿ ನಡೆದ 2026 ರ ಪುರುಷರ 18 ವರ್ಷದೊಳಗಿನವರ ಹಾಕಿ ಏಷ್ಯಾಕಪ್‌ (Hockey U-18 Asia Cup 2026) ಫೈನಲ್‌ ಪಂದ್ಯದಲ್ಲಿ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಭಾರತದ ಯುವ ಹಾಕಿ ಪಡೆ ಅದ್ಭುತ ಪ್ರದರ್ಶನ ನೀಡಿ, ಆತಿಥೇಯ ಜಪಾನ್ ತಂಡವನ್ನು ಅವರದೇ ಅಂಗಳದಲ್ಲಿ 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ತಂಡದ ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಶಿಶ್ ತಾನಿ ಪೂರ್ಣಿ, ಫೈನಲ್‌ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ತಂಡವನ್ನು ಚಾಂಪಿಯನ್ ಮಾಡಿದರು.

ಆರಂಭದಲ್ಲೇ ಒತ್ತಡ ಹೇರಿದ ಭಾರತ

ಪಂದ್ಯದ ಆರಂಭದಿಂದಲೂ ಭಾರತ ತಂಡವು ಆತಿಥೇಯರ ಮೇಲೆ ಒತ್ತಡ ಹೇರುತ್ತಲೇ ಇತ್ತು. ಪಂದ್ಯದ ಎರಡನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು, ಅದನ್ನು ಆಶಿಶ್ ತಾನಿ ಪೂರ್ಣಿ (2′) ಗೋಲಾಗಿ ಪರಿವರ್ತಿಸಿ ಭಾರತಕ್ಕೆ ಆರಂಭದಲ್ಲಿ 1-0 ಮುನ್ನಡೆ ಒದಗಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ಜಪಾನ್ ಮತ್ತೆ ಚೇತರಿಸಿಕೊಳ್ಳಲು ಪ್ರಯತ್ನಿಸಿತ್ತಾದರೂ ಭಾರತದ ರಕ್ಷಣಾ ಪಡೆ ಪ್ರತಿ ದಾಳಿಯನ್ನು ವಿಫಲಗೊಳಿಸಿತು. ಎರಡನೇ ಕ್ವಾರ್ಟರ್‌ನ ಕೊನೆಯ ನಿಮಿಷಗಳಲ್ಲಿ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

28ನೇ ನಿಮಿಷದಲ್ಲಿ, ಆಶಿಶ್ ತಾನಿ ಪೂರ್ಣಿ ತಮ್ಮ ಎರಡನೇ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 2-0 ಗೆ ವಿಸ್ತರಿಸಿದರು. ಕೇವಲ ಎರಡು ನಿಮಿಷಗಳ ನಂತರ, ಅಂದರೆ ಪಂದ್ಯದ 30ನೇ ನಿಮಿಷದಲ್ಲಿ ನಾಯಕ ಕೇತನ್ ಕುಶ್ವಾಹ, ಪ್ರಹ್ಲಾದ್ ರಾಜ್‌ಭರ್ ನೀಡಿದ ಅದ್ಭುತ ಪಾಸ್‌ನಲ್ಲಿ ಅದ್ಭುತ ಫೀಲ್ಡ್ ಗೋಲು ಬಾರಿಸಿದರು. ಈ ಮೂಲಕ ಭಾರತ ತಂಡ ಪಂದ್ಯದ ಅರ್ಧಾವಧಿಯಲ್ಲಿ 3-0 ಮುನ್ನಡೆಯನ್ನು ಪಡೆದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿಯೂ ಭಾರತದ ಪ್ರಾಬಲ್ಯ ಮುಂದುವರೆಯಿತು. 34ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಆಶಿಶ್ (34′) ಗೋಲಾಗಿ ಪರಿವರ್ತಿಸಿದರು, ಇದರಿಂದಾಗಿ ಸ್ಕೋರ್ 4-0ಗೆ ತಲುಪಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ, ಜಪಾನ್‌ನ ನುಮಾಡಾ ಗಕು (52′) ಪೆನಾಲ್ಟಿ ಸ್ಟ್ರೋಕ್‌ ಮೂಲಕ ತಂಡದ ಪರ ಏಕೈಕ ಗೋಲು ದಾಖಲಿಸಿದರು. ಆದರೆ ಆ ಹೊತ್ತಿಗೆ ಭಾರತದ ಗೆಲುವು ಖಚಿತವಾಗಿತ್ತು.

ಬಹುಮಾನ ಘೋಷಿಸಿದ ಹಾಕಿ ಇಂಡಿಯಾ

ಪುರುಷರ ತಂಡದ ಜೊತೆಗೆ, ಮಹಿಳಾ ತಂಡವೂ ಕಂಚಿನ ಪದಕ ಗೆದ್ದಿತು. ಈ ಅದ್ಭುತ ಪ್ರದರ್ಶನದ ನಂತರ, ಹಾಕಿ ಇಂಡಿಯಾ ಎರಡೂ ತಂಡಗಳಿಗೆ ನಗದು ಬಹುಮಾನವನ್ನು ಘೋಷಿಸಿದೆ. ಚಿನ್ನದ ಪದಕ ಗೆದ್ದ ಭಾರತೀಯ ಅಂಡರ್ -18 ಪುರುಷರ ಹಾಕಿ ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 3 ಲಕ್ಷ ಮತ್ತು ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯನಿಗೆ ತಲಾ 1.5 ಲಕ್ಷ ನಗದು ಬಹುಮಾನವನ್ನು ನೀಡಿದೆ. ಭಾರತೀಯ ಅಂಡರ್ -18 ಮಹಿಳಾ ಹಾಕಿ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೆ ತಲಾ 1 ಲಕ್ಷ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 50,000 ನಗದು ಬಹುಮಾನವನ್ನು ಘೋಷಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Sat, 6 June 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಆ ಒಂದು ಮಾತು ನನ್ನ ನಿರ್ಧಾರ ಬದಲಿಸಿದೆ ಎಂದ ರಾಮಲಿಂಗಾರೆಡ್ಡಿ
ಆ ಒಂದು ಮಾತು ನನ್ನ ನಿರ್ಧಾರ ಬದಲಿಸಿದೆ ಎಂದ ರಾಮಲಿಂಗಾರೆಡ್ಡಿ
‘ಮ್ಯಾಂಗೊ ಪಚ್ಚ’ ಕಟೌಟ್​​ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?
‘ಮ್ಯಾಂಗೊ ಪಚ್ಚ’ ಕಟೌಟ್​​ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?
ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು
ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು
ರಾಜೀನಾಮೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ
ರಾಜೀನಾಮೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ
ಕ್ಲಿಯರ್ ಔಟ್ ಆಗಿದ್ದರೂ... ನಾಟಕವಾಡಿ ಬಚಾವಾದ ಕೆಎಲ್ ರಾಹುಲ್!
ಕ್ಲಿಯರ್ ಔಟ್ ಆಗಿದ್ದರೂ... ನಾಟಕವಾಡಿ ಬಚಾವಾದ ಕೆಎಲ್ ರಾಹುಲ್!
ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದ್ದಕ್ಕೆ ಕೆಕೆಆರ್​ಟಿಸಿ ಬಸ್ ಜಪ್ತಿ
ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದ್ದಕ್ಕೆ ಕೆಕೆಆರ್​ಟಿಸಿ ಬಸ್ ಜಪ್ತಿ
‘ಮ್ಯಾಂಗೋ ಪಚ್ಚ’ ರಿಲೀಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಸುದ್ದಿಗೋಷ್ಠಿ
‘ಮ್ಯಾಂಗೋ ಪಚ್ಚ’ ರಿಲೀಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಸುದ್ದಿಗೋಷ್ಠಿ
ಕೆಸಿಇಟಿ ಫಲಿತಾಂಶ ಪ್ರಕಟ: ಸಚಿವರ ಸುದ್ದಿಗೋಷ್ಠಿ ನೇರಪ್ರಸಾರ
ಕೆಸಿಇಟಿ ಫಲಿತಾಂಶ ಪ್ರಕಟ: ಸಚಿವರ ಸುದ್ದಿಗೋಷ್ಠಿ ನೇರಪ್ರಸಾರ
2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದತ್ತ 'ಲಾರ್ಡ್ಸ್'​ ಟೆಸ್ಟ್
2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದತ್ತ 'ಲಾರ್ಡ್ಸ್'​ ಟೆಸ್ಟ್
ಬರ್ತ್ ಡೇ ಪಾರ್ಟಿ ವೇಳೆ ಕುಸಿದು ಬಿದ್ದ ಕಟ್ಟಡ: 15 ಯುವಕರು ಜಸ್ಟ್ ಮಿಸ್
ಬರ್ತ್ ಡೇ ಪಾರ್ಟಿ ವೇಳೆ ಕುಸಿದು ಬಿದ್ದ ಕಟ್ಟಡ: 15 ಯುವಕರು ಜಸ್ಟ್ ಮಿಸ್