AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಗಿಂತ ಹೆಚ್ಚು ಆದಾಯವಿದ್ದರೂ ಜೀವನಾಂಶ ಕೇಳಿದ ಮಹಿಳೆಗೆ ಹೈಕೋರ್ಟ್ ಶಾಕ್

ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದ ಮಹಿಳೆಯ ಜೀವನಾಂಶ ಅರ್ಜಿಯನ್ನು ವಜಾಗೊಳಿಸಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೆಳವಣಿಗೆಯಿಂದ ಪತಿಯ ಐಟಿ ಉದ್ಯೋಗಕ್ಕೆ ಅಪಾಯವಿದೆ ಎಂದು ನ್ಯಾಯಾಲಯ ಹೇಳಿದೆ. ಸ್ವಾವಲಂಬಿ ಸಂಗಾತಿಗೆ ಜೀವನಾಂಶ ನೀಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಭಾರತೀಯ ಕುಟುಂಬ ಕಾನೂನಿನ ಅಡಿಯಲ್ಲಿ ಮಹತ್ವದ ನಿರ್ಧಾರವಾಗಿದೆ.

ಪತಿಗಿಂತ ಹೆಚ್ಚು ಆದಾಯವಿದ್ದರೂ ಜೀವನಾಂಶ ಕೇಳಿದ ಮಹಿಳೆಗೆ ಹೈಕೋರ್ಟ್ ಶಾಕ್
ನ್ಯಾಯಾಲಯ
ನಯನಾ ರಾಜೀವ್
|

Updated on: Jul 26, 2026 | 7:59 AM

Share

ಮುಂಬೈ, ಜುಲೈ 26: ತನ್ನ ಪತಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿರುವ ಮಹಿಳೆಯೊಬ್ಬರ ಮಧ್ಯಂತರ ಜೀವನಾಂಶ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಪ್ರಸ್ತುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಪತಿಯ ಐಟಿ ಉದ್ಯೋಗವೇ ಅಪಾಯದಲ್ಲಿದೆ ಎಂದು ನ್ಯಾಯಾಲಯ ಮುಖ್ಯವಾಗಿ ಉಲ್ಲೇಖಿಸಿದೆ.

ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸುತ್ತಿರುವ ಈ ಮಹಿಳೆ ತಿಂಗಳಿಗೆ ಸುಮಾರು 8 ಲಕ್ಷ ರೂ. ಗಳಿಸುತ್ತಿದ್ದಾರೆ. ಇದು ಅವರ ಪತಿಯ ಆದಾಯಕ್ಕಿಂತ ಹೆಚ್ಚಾಗಿದೆ. ಮಹಿಳೆಯು ತನಗೆ ಜೀವನಾಂಶವಾಗಿ ತಿಂಗಳಿಗೆ 1 ಲಕ್ಷ ರೂ. ನೀಡಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿದೇಶದಲ್ಲಿದ್ದರೆ ಜೀವನ ವೆಚ್ಚ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕೃತಕ ಬುದ್ಧಿಮತ್ತೆಯ (AI) ವೇಗದ ಬೆಳವಣಿಗೆ ಮತ್ತು ಐಟಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಪತಿಯ ಕೆಲಸ ಯಾವಾಗ ಬೇಕಾದರೂ ಅಪಾಯಕ್ಕೆ ಸಿಲುಕಬಹುದು ಎಂದು ಕೋರ್ಟ್ ಗಮನಿಸಿದೆ.

ಮತ್ತಷ್ಟು ಓದಿ: ಡಿವೋರ್ಸ್‌ ಪ್ರಕರಣಗಳಲ್ಲಿ ಕೋರ್ಟ್ ಜೀವನಾಂಶದ ಮೊತ್ತವನ್ನು ಹೇಗೆ ನಿರ್ಧರಿಸುತ್ತವೆ? ಪುರುಷರು ಜೀವನಾಂಶ ಪಡೆಯಬಹುದೇ?

ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ಜೀವನಾಂಶ ಅರ್ಜಿಯನ್ನು ತಿರಸ್ಕರಿಸಿ, ಮೊಕದ್ದಮೆ ವೆಚ್ಚವಾಗಿ ಪತಿಗೆ 25,000 ರೂ. ನೀಡಲು ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ದಂಪತಿಯ ಹಿರಿಯ ಮಗು ತಂದೆಯ ಬಳಿ ಹಾಗೂ ಕಿರಿಯ ಮಗು ತಾಯಿಯ ವಶದಲ್ಲಿದೆ.

ಕಾಯ್ದೆಯಡಿ ನಿಯಮ: ಭಾರತೀಯ ಕುಟುಂಬ ಕಾನೂನುಗಳ ಪ್ರಕಾರ (ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24), ಮಧ್ಯಂತರ ಜೀವನಾಂಶವನ್ನು ಸ್ವಂತ ಆದಾಯವಿಲ್ಲದ ಅಥವಾ ಜೀವನ ನಡೆಸಲು ಸಾಕಷ್ಟಿಲ್ಲದ ಸಂಗಾತಿಗೆ ನೀಡಲಾಗುತ್ತದೆ. ಸಂಗಾತಿಯೇ ಸ್ವಾವಲಂಬಿಯಾಗಿದ್ದು, ಉತ್ತಮ ಆದಾಯ ಹೊಂದಿದ್ದರೆ ಜೀವನಾಂಶಕ್ಕೆ ಅರ್ಹರಾಗುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಭಾರತದ ವಿವಿಧ ಹೈಕೋರ್ಟ್‌ಗಳು ಮತ್ತು ಸರ್ವೋಚ್ಚ ನ್ಯಾಯಾಲಯವು ‘ಉತ್ತಮ ಶಿಕ್ಷಣ ಪಡೆದು ಕೆಲಸ ಮಾಡಲು ಸಾಮರ್ಥ್ಯವಿರುವ ಹಾಗೂ ಸ್ವತಂತ್ರ ಆದಾಯವಿರುವ ಸಂಗಾತಿಗೆ ಜೀವನಾಂಶ ನೀಡುವುದು ಕಡ್ಡಾಯವಲ್ಲ’ ಎಂದು ಹಲವು ತೀರ್ಪುಗಳಲ್ಲಿ ಸ್ಪಷ್ಟಪಡಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕಾಗಿ ಒಂದಾಗುತ್ತಿದೆ ಇಡೀ ಕನ್ನಡ ಚಿತ್ರರಂಗ
ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕಾಗಿ ಒಂದಾಗುತ್ತಿದೆ ಇಡೀ ಕನ್ನಡ ಚಿತ್ರರಂಗ
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ