AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘರ್ ವಾಪ್ಸಿ: 20 ವರ್ಷಗಳ ಬಳಿಕ ಹಿಂದೂ ಧರ್ಮಕ್ಕೆ ಮರಳಿದ ವ್ಯಕ್ತಿ, ರಫೀಕ್ ಮತ್ತೆ ರಾಜ್‌ಕುಮಾರ್ ಆದ, ಪತ್ನಿ ಅಫ್ಸಾರಿ ಈಗ ಅನಿತಾ

ರಾಜಕುಮಾರ್ 20 ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡು ರಫೀಕ್ ಆಗಿ, ಮುಸ್ಲಿಂ ಪತ್ನಿ ಅಫ್ಸಾರಿ ಜೊತೆ ವಾಪಸಾಗಿದ್ದರು. ಝಾನ್ಸಿಯ ಜಿಲ್ಲಾಧಿಕಾರಿ ಅನುಮತಿ ಪಡೆದು, ಸಿದ್ಧೇಶ್ವರ ದೇವಾಲಯದಲ್ಲಿ ಶುದ್ಧೀಕರಣ ಪೂಜೆ ನಡೆಸುವ ಮೂಲಕ ಹಿಂದೂ ಧರ್ಮಕ್ಕೆ ಮರಳಿ ರಾಜಕುಮಾರ್ ಆದರು. ಅಫ್ಸಾರಿ, ಅನಿತಾ ಎಂಬ ಹೊಸ ಹೆಸರಿನಲ್ಲಿ ಹಿಂದೂ ಧರ್ಮ ಸ್ವೀಕರಿಸಿದರು. ಕುಟುಂಬದ ಸಾಮಾಜಿಕ ಒಪ್ಪಿಗೆಯೊಂದಿಗೆ ದಾಖಲೆಗಳ ತಿದ್ದುಪಡಿ ಪ್ರಕ್ರಿಯೆ ನಡೆಯುತ್ತಿದೆ.

ಘರ್ ವಾಪ್ಸಿ: 20 ವರ್ಷಗಳ ಬಳಿಕ ಹಿಂದೂ ಧರ್ಮಕ್ಕೆ ಮರಳಿದ ವ್ಯಕ್ತಿ, ರಫೀಕ್ ಮತ್ತೆ ರಾಜ್‌ಕುಮಾರ್ ಆದ, ಪತ್ನಿ ಅಫ್ಸಾರಿ ಈಗ ಅನಿತಾ
ರಾಜ್​ಕುಮಾರ್ Image Credit source: Screenshot x account Arun Chahal
ನಯನಾ ರಾಜೀವ್
|

Updated on: Sep 27, 2026 | 10:02 AM

Share

ಲಕ್ನೋ, ಸೆಪ್ಟೆಂಬರ್ 27: ಉತ್ತರ ಪ್ರದೇಶದ ಝಾನ್ಸಿ ಮೂಲದ ವ್ಯಕ್ತಿಯೊಬ್ಬರು ಸುಮಾರು ಎರಡು ದಶಕಗಳ ಹಿಂದೆ ಪಶ್ಚಿಮ ಬಂಗಾಳಕ್ಕೆ ತೆರಳಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ 20 ವರ್ಷಗಳ ನಂತರ ತಮ್ಮ ಮುಸ್ಲಿಂ ಪತ್ನಿಯೊಂದಿಗೆ ಹುಟ್ಟೂರಿಗೆ ಮರಳಿ, ಕಾನೂನುಬದ್ಧ ಪ್ರಕ್ರಿಯೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ.

ಝಾನ್ಸಿಯ ರಕ್ಸಾ ಠಾಣಾ ವ್ಯಾಪ್ತಿಯ ರಾಜಪುರ ಗ್ರಾಮದ ನಿವಾಸಿ ರಾಜ್‌ಕುಮಾರ್, 20 ವರ್ಷಗಳ ಹಿಂದೆ ಉದ್ಯೋಗ ಹುಡುಕಿಕೊಂಡು ಪಶ್ಚಿಮ ಬಂಗಾಳದ ಮಾಲ್ಡಾಗೆ ತೆರಳಿದ್ದರು. ಅಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೇಳೆ, ಒತ್ತಡಕ್ಕೆ ಮಣಿದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ‘ರಫೀಕ್’ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ನಂತರ ಅಲ್ಲಿಯ ಮಹಿಳೆ ಅಫ್ಸಾರಿ ಖಾತುನ್ ಅವರನ್ನು ವಿವಾಹವಾಗಿ, ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ಸರ್ಕಾರಿ ದಾಖಲೆಗಳನ್ನೂ ರಫೀಕ್ ಹೆಸರಿನಲ್ಲೇ ಪಡೆದುಕೊಂಡಿದ್ದರು. ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ.

ಇತ್ತೀಚೆಗೆ ರಾಜ್‌ಕುಮಾರ್ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸ್ವಗ್ರಾಮವಾದ ರಾಜಪುರಕ್ಕೆ ಮರಳಿದ್ದರು. ಆದರೆ, ಮುಸ್ಲಿಂ ಸಂಪ್ರದಾಯದೊಂದಿಗೆ ಬಂದಿದ್ದರಿಂದ ಆರಂಭದಲ್ಲಿ ಗ್ರಾಮಸ್ಥರು ಹಾಗೂ ಸ್ವಂತ ಸಂಬಂಧಿಕರು ಅವರನ್ನು ಕುಟುಂಬಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಇದರಿಂದ ಮನನೊಂದ ದಂಪತಿ, ಮರಳಿ ಹಿಂದೂ ಧರ್ಮ ಸ್ವೀಕರಿಸಲು ಅನುಮತಿ ಕೋರಿ ಝಾನ್ಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ (DM) ಔಪಚಾರಿಕ ಅರ್ಜಿ ಸಲ್ಲಿಸಿದ್ದರು.

ಮತ್ತಷ್ಟು ಓದಿ: ಪ್ರೇಮ ಸಂಬಂಧವೋ? ಲವ್​​ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?

ಸಿದ್ಧೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನ:

ಜಿಲ್ಲಾಡಳಿತ ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಝಾನ್ಸಿಯ ಐತಿಹಾಸಿಕ ಸಿದ್ಧೇಶ್ವರ ದೇವಸ್ಥಾನದಲ್ಲಿ ‘ಘರ್ ವಾಪ್ಸಿ’ ಸಮಾರಂಭವನ್ನು ಆಯೋಜಿಸಲಾಯಿತು. ಪ್ರಧಾನ ಅರ್ಚಕ ಪಂಡಿತ್ ರಾಜೀವ್ ಪಾಠಕ್ ನೇತೃತ್ವದಲ್ಲಿ ಶುದ್ಧೀಕರಣ ಪೂಜೆ ಮತ್ತು ಹವನ ನಡೆಸಲಾಯಿತು. ದಂಪತಿಗೆ ಗಂಗಾಜಲ ಹಾಗೂ ಪಂಚಗವ್ಯದ ಮೂಲಕ ಶುದ್ಧೀಕರಣ ವಿಧಿಗಳನ್ನು ಪೂರೈಸಿ, ರಾಜ್‌ಕುಮಾರ್‌ಗೆ ಯಜ್ಞೋಪವೀತ (ಜನಿವಾರ) ಧಾರಣೆ ಮಾಡಲಾಯಿತು.

ಪೂಜೆಯ ನಂತರ ರಾಜ್‌ಕುಮಾರ್ ತಮ್ಮ ಮೂಲ ಹೆಸರನ್ನು ಮರಳಿ ಪಡೆದರೆ, ಪತ್ನಿ ಅಫ್ಸಾರಿ ಖಾತುನ್ ಅವರು ‘ಅನಿತಾ’ ಎಂದು ಹೊಸ ಹಿಂದೂ ಹೆಸರನ್ನು ಸ್ವೀಕರಿಸಿದರು. ನನ್ನ ಪತಿಯ ಸಂತೋಷವೇ ನನ್ನ ಸಂತೋಷ, ಅವರೊಂದಿಗೆ ನೆಮ್ಮದಿಯಿಂದ ಬದುಕಲು ನಾನೇ ಸ್ವಯಂಪ್ರೇರಿತವಾಗಿ ಈ ನಿರ್ಧಾರ ತೆಗೆದುಕೊಂಡೆ ಎಂದು ಅನಿತಾ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ: ಉತ್ತರ ಪ್ರದೇಶದಲ್ಲಿ ಕಟ್ಟುನಿಟ್ಟಾದ ಮತಾಂತರ ವಿರೋಧಿ ಕಾಯ್ದೆ ಜಾರಿಯಲ್ಲಿದೆ. ಯಾವುದೇ ವ್ಯಕ್ತಿ ಧರ್ಮ ಬದಲಾಯಿಸಲು ಅಥವಾ ಮರಳಿ ಸ್ವಧರ್ಮಕ್ಕೆ ಮರಳಲು ಕನಿಷ್ಠ 60 ದಿನಗಳ ಮುನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಅವರಿಗೆ ಅಧಿಕೃತ ಘೋಷಣಾಪತ್ರ ಸಲ್ಲಿಸಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

ಸಾಮಾಜಿಕ ಒಪ್ಪಿಗೆ: ವಿಶ್ವ ಹಿಂದೂ ಪರಿಷತ್ (VHP) ಮತ್ತು ಸನಾತನ ಏಕತಾ ಸಂಘಟನೆಯ ಮುಖಂಡರು ಮಧ್ಯಪ್ರವೇಶಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ನಂತರ, ಗ್ರಾಮಸ್ಥರು ಕುಟುಂಬವನ್ನು ಯಾವುದೇ ಭೇದಭಾವವಿಲ್ಲದೆ ಗ್ರಾಮದ ಮುಖ್ಯವಾಹಿನಿಗೆ ಸೇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.

ದಾಖಲೆಗಳ ತಿದ್ದುಪಡಿ ಪ್ರಕ್ರಿಯೆ: ಧಾರ್ಮಿಕ ವಿಧಿವಿಧಾನಗಳ ಜತೆಗೆ, ದಂಪತಿ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಮಕ್ಕಳ ಶಾಲಾ ದಾಖಲೆಗಳಲ್ಲಿ ಹೆಸರು ಮತ್ತು ಧರ್ಮವನ್ನು ಬದಲಾಯಿಸಲು ಗೆಜೆಟ್ ಅಧಿಸೂಚನೆಗೆ ಅರ್ಜಿ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More