‘ಒಲಿಂಪಿಕ್ ಚಾಂಪಿಯನ್‌ನಿಂದ ವಿಶ್ವ ಚಾಂಪಿಯನ್’; ಚಿನ್ನ ಗೆದ್ದ ನೀರಜ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅಭಿನಂದನೆ
Anurag Thakur: ಜಾವೆಲಿನ್ ಎಸೆತದಲ್ಲಿ ನೀರಜ್ ಒಲಿಂಪಿಕ್ ಚಾಂಪಿಯನ್‌ನಿಂದ ವಿಶ್ವ ಚಾಂಪಿಯನ್ ಆಗಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮಾತ್ರವಲ್ಲದೆ ನೀರಜ್ ಇನ್ನೂ ಅನೇಕ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ ಗೆದ್ದಿದ್ದಾರೆ. ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಭಾರತಕ್ಕೆ ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಅನುರಾಗ್ ಠಾಕೂರ್ ಬಣ್ಣಿಸಿದ್ದಾರೆ.

ಜಾವೆಲಿನ್ ಎಸೆತದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿರುವ ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ (Neeraj Chopra) ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ವಿಶ್ವ ಅಥ್ಲೀಟಿಕ್ ಚಾಂಪಿಯನ್ಶಿಪ್ನ (World Athletics Championships) ಜಾವೆಲಿನ್ ವಿಭಾಗದಲ್ಲಿ 88.17 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದಿರುವ ನೀರಜ್ಗೆ ಭಾರತ ಸೇರಿದಂತೆ ವಿಶ್ವದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇಂದು ಮುಂಜಾನೆಯೇ ಚಿನ್ನ ಗೆದ್ದ ನೀರಜ್ಗೆ ಪ್ರಧಾನಿ ಮೋದಿಯವರಿಂದ (PM Narendra Modi) ಹಿಡಿದು, ಕೇಂದ್ರ ಸಚಿವರು, ಇತರ ಕ್ರೀಡಾ ತಾರೆಯರು ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದರು. ವಿಶೇಷವಾಗಿ ನೀರಜ್ ಸಾಧನೆಯನ್ನು ಕೊಂಡಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur), ನೀರಜ್ ಸಾಧನೆಯನ್ನು ಹಾಡಿ ಹೊಗಳಿದ್ದಾರೆ.
ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ದೊಡ್ಡ ಸಾಧನೆ
ಇಂದು ಮುಂಜಾನೆಯೇ ನೀರಜ್ ಸಾಧನೆಯ ಬಗ್ಗೆ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಜಾವೆಲಿನ್ ಎಸೆತದಲ್ಲಿ ನೀರಜ್ ಒಲಿಂಪಿಕ್ ಚಾಂಪಿಯನ್‌ನಿಂದ ವಿಶ್ವ ಚಾಂಪಿಯನ್ ಆಗಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮಾತ್ರವಲ್ಲದೆ ನೀರಜ್ ಇನ್ನೂ ಅನೇಕ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನ ಗೆದ್ದಿದ್ದಾರೆ. ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಭಾರತಕ್ಕೆ ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಬಣ್ಣಿಸಿದ್ದಾರೆ.
6 ಆಟಗಾರರ ಹೆಸರಿರುವುದು ಸಂತಸ ತಂದಿದೆ
ಇನ್ನು ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ‘ಏಷ್ಯನ್ ಗೇಮ್ಸ್‌ನಿಂದ ಹಿಡಿದು ಕಾಮನ್‌ವೆಲ್ತ್ ಗೇಮ್ಸ್, ಟೋಕಿಯೊ ಒಲಿಂಪಿಕ್ಸ್, ಚಾಂಪಿಯನ್ ಲೀಗ್ ಪ್ರಶಸ್ತಿ ಮತ್ತು ಅಂಡರ್-20 ವರೆಗೆ ನೀರಜ್ ಎಲ್ಲಾ ಸ್ಪರ್ಧೆಯಲ್ಲೂ ಪದಕ ಬೇಟೆಯಾಡಿದ್ದಾರೆ. ಇನ್ನು ವಿಶ್ವ ಅಥ್ಲೀಟಿಕ್ ಚಾಂಪಿಯನ್ಶಿಪ್ನ ಜಾವೆಲಿನ್ ವಿಭಾಗದ ಮೊದಲ 6 ಆಟಗಾರರಲ್ಲಿ ನಮ್ಮ ದೇಶದ ಮೂವರು ಆಟಗಾರರ ಹೆಸರು ಬಂದಿರುವುದು ಸಂತಸ ತಂದಿದೆ. ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದ ಕಿಶೋರ್ ಜೀನಾ ಮತ್ತು ಆರನೇ ಸ್ಥಾನ ಪಡೆದ ಮನು ಡಿಪಿ ಅವರೂ ಅದ್ಭುತ ಪ್ರದರ್ಶನ ನೀಡಿದ್ದಾರೆ’ ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ಠಾಕೂರ್,‘ಕಳೆದ ಕೆಲವು ತಿಂಗಳುಗಳಲ್ಲಿ ಮತ್ತು ಕಳೆದ ಕೆಲವು ವರ್ಷಗಳಲ್ಲಿ ಭಾರತವು ಒಂದರ ನಂತರ ಒಂದು ಕ್ರೀಡೆಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಒಂದು ಕಾಲದಲ್ಲಿ ಕುಸ್ತಿ, ಶೂಟಿಂಗ್, ಆರ್ಚರಿ, ಚೇಸ್ಗೆ ಮಾತ್ರ ಸೀಮಿತವಾಗಿದ್ದ ಭಾರತ ಈಗ ಜಾವೆಲಿನ್, ಅಥ್ಲೆಟಿಕ್ಸ್ನಲ್ಲೂ ಪ್ರಾಬಲ್ಯ ಮೆರೆಯುತ್ತಿದೆ. 4×400 ರಿಲೇ ಓಟದಲ್ಲೂ ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದಲ್ಲಿ ಕ್ರೀಡಾ ವಾತಾವರಣ ಹೇಗೆ ಸೃಷ್ಟಿಯಾಗಿದೆ ಎಂಬುದನ್ನು ಇದು ತೋರಿಸುತ್ತದೆ.
#WATCH | Mohali: Union Sports Minister Anurag Thakur congratulates Javelin thrower Neeraj Chopra for winning India's first gold medal at the World Athletics Championship 2023 in Budapest.
"Congratulations to Neeraj Chopra for winning gold at the World Athletics Championship… pic.twitter.com/ejPBWyWyMh
— ANI (@ANI) August 28, 2023
ಮೂರು ಬಾರಿ ಕ್ರೀಡಾ ಬಜೆಟ್ ಹೆಚ್ಚಳ
ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾ ಬಜೆಟ್ ಅನ್ನು ಮೂರು ಬಾರಿ ಹೆಚ್ಚಿಸಿದ್ದಾರೆ. ಇದರಿಂದಾಗಿ ಭಾರತದಲ್ಲಿ ಖೇಲೋ ಇಂಡಿಯಾ ಯೋಜನೆ, ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಾಯಿತು. ಇದರೊಂದಿಗೆ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಕೂಡ ಆರಂಭಿಸಲಾಯಿತು. ಇದರಿಂದ ಆಟಗಾರರಿಗೆ ಸೌಲಭ್ಯಗಳೂ ಹೆಚ್ಚಿದ್ದು, ಅದಕ್ಕೆ ಪ್ರತಿಫಲವಾಗಿ ಈಗ ದೇಶಕ್ಕೆ ಪದಕ ಲಭಿಸಿದೆ’ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ