Video: ಬಾರ್ಬಡೋಸ್ ಬೀಚ್‌ನಲ್ಲಿ ವಾಲಿಬಾಲ್ ಆಡಿದ ಟೀಮ್ ಇಂಡಿಯಾ; ಕೊಹ್ಲಿ ಶರ್ಟ್‌ಲೆಸ್ ಲುಕ್‌ಗೆ ಫುಲ್ ಫಿದಾ
ಸದ್ಯ ನಡೆಯುತ್ತಿರುವ 2024 ರ ಟಿ20 ವಿಶ್ವಕಪ್ ಗ್ರೂಪ್ ಪಂದ್ಯಗಳು ಅಂತಿಮ ಹಂತವನ್ನು ತಲುಪಿದ್ದು, ಈ ಗುಂಪು ಹಂತದ ಪಂದ್ಯಗಳು ಮುಗಿದ ಬಳಿಕ, ಜೂನ್ 19 ಅಂದರೆ ನಾಳೆಯಿಂದ ಸೂಪರ್ 8 ಪಂದ್ಯಗಳು ಆರಂಭವಾಗಲಿದೆ. ಸೂಪರ್-8 ಬ್ಯಾಟಲ್‌ಗೆ ಟೀಮ್ ಇಂಡಿಯಾ ಅರ್ಹತೆಯನ್ನು ಪಡೆದಿದ್ದು, ಈ ಮಧ್ಯೆ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಟೀಮ್ ಇಂಡಿಯಾ ಕ್ರಿಕೆಟಿಗರು ಬೀಚ್ ನಲ್ಲಿ ವಾಲಿಬಾಲ್ ಆಡುತ್ತಾ ಮೋಜು ಮಸ್ತಿ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಕೊಹ್ಲಿ ಶರ್ಟ್‌ಲೆಸ್ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಮೆರಿಕಾ ಹಾಗೂ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿರುವ 2024 ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಗ್ರೂಪ್ ಪಂದ್ಯಗಳು ಅಂತಿಮ ಹಂತವನ್ನು ತಲುಪಿದ್ದು, ನಾಳೆಯಿಂದ (ಜೂನ್ 19) ಸೂಪರ್-8 ಪಂದ್ಯ ಆರಂಭವಾಗಲಿದೆ. ಸದ್ಯ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತವನ್ನು ಯಶಸ್ವಿಯಾಗಿ ದಾಟಿ ಗ್ರೂಪ್ ಟಾಪರ್ ಆಗಿರುವ ಟೀಮ್ ಇಂಡಿಯಾ ಸೂಪರ್ 8 ಬ್ಯಾಟಲ್‌ಗೆ ಅರ್ಹತೆ ಪಡೆದಿದೆ. ಇದೇ ಖುಷಿಯಲ್ಲಿ ಹ್ಯಾಪಿ ಮೂಡ್‌ನಲ್ಲಿರುವ ಟೀಮ್ ಇಂಡಿಯಾ ಆಟಗಾರರು ಬಾರ್ಬಡೋಸ್ ಬೀಚ್‌ನಲ್ಲಿ ವಾಲಿಬಾಲ್ ಆಟವನ್ನು ಆಡುತ್ತಾ ಸಖತ್ ಮೋಜು ಮಸ್ತಿ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರಿಂಕು ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಶರ್ಟ್ ಲೆಸ್ ಆಗಿ ವಾಲಿಬಾಲ್ ಆಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು BCCI ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಟೀಮ್ ಇಂಡಿಯಾ ಆಟಗಾರರು ಬಾರ್ಬಡೋಸ್ ಬೀಚ್‌ನಲ್ಲಿ ವಾಲಿಬಾಲ್ ಆಡುತ್ತಾ ಸಖತ್ ಎಂಜಾಯ್‌ಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸೂಪರ್ 8 ಸುತ್ತಿನಲ್ಲಿ 3 ಬಾರಿ ಎಡವಿರುವ ಟೀಂ ಇಂಡಿಯಾ..!
ವೈರಲ್ ವಿಡಿಯೋ ಇಲ್ಲಿದೆ:
📍 Barbados
Unwinding at the beach 🌊, the #TeamIndia way! #T20WorldCup pic.twitter.com/4GGHh0tAqg
— BCCI (@BCCI) June 17, 2024
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಟೀಮ್ ಇಂಡಿಯಾ ಆಟಗಾರರ ಮೋಜು ಮಸ್ತಿಯನ್ನು ನೋಡಿ ಖುಷಿ ಪಟ್ಟ ಅಭಿಮಾನಿಗಳು ಟಿ20 ವಿಶ್ವಕಪ್ ಪಂದ್ಯದಲ್ಲಿ ಟ್ರೋಫಿ ಗೆದ್ದು ಬನ್ನಿ ಎಂದು ಮನಸಾರೆ ಹರಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ