ವಿರಾಟ್ ಕೊಹ್ಲಿ ತಮ್ಮ ಯಶಸ್ವಿ ನಾಯಕತ್ವ ಹಾಗೂ ಅದ್ಭುತ ಬ್ಯಾಟಿಂಗ್ ಮೂಲಕ ಹೆಸರಾದವರು. ಅಷ್ಟೇ ಅಲ್ಲ, ಆಗಾಗ ತಮ್ಮ ಸಿಟ್ಟಿನ ಮೂಲಕ ಕೊಹ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ತುಂಬಾನೇ ಕಾಮ್ ಆಗಿದ್ದ ಅವರು, ಇಂದು ಮತ್ತೆ ತಮ್ಮ ರೌದ್ರರೂಪ ತೋರಿದ್ದಾರೆ. ಬಹುಬೇಗ ಔಟ್ ಆಗಿದ್ದಕ್ಕೆ ಪೆವಿಲಿಯನ್ ಚೇರ್ಗಳನ್ನು ಬ್ಯಾಟ್ ಮೂಲಕ ಚೆಲ್ಲಾಪಿಲ್ಲಿ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡ ಚೆನ್ನೈನಲ್ಲಿ ಮುಖಾಮುಖಿ ಆಗಿವೆ. ಟಾಸ್ ಗೆದ್ದ ಎಸ್ಆರ್ಎಚ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 19 ರನ್ ಆದಾಗ ದೇವದತ್ ಪಡಿಕ್ಕಲ್ ಕ್ಯಾಚ್ಕೊಟ್ಟು ಪೆವಿಲಿಯನ್ ಸೇರಿದರು. ಶಹಬಾಜ್ ಅಹ್ಮದ್ ಕೂಡ ಹೆಚ್ಚು ಹೊತ್ತು ಕ್ರೀಜ್ನಲ್ಲಿ ನಿಲ್ಲಲಿಲ್ಲ.
ಎರಡು ವಿಕೆಟ್ ಪತನದ ನಂತರ ಆರ್ಸಿಬಿ ಉತ್ತಮ ಲಯಕಂಡುಕೊಳ್ಳುತ್ತಿತ್ತು. ಆದರೆ, ಹೋಲ್ಡರ್ ಬೌಲಿಂಗ್ ವೇಳೆ ಕೊಹ್ಲಿ ಸಿಕ್ಸ್ ಹೊಡೆಯುವ ಪ್ರಯತ್ನ ಮಾಡಿದರು. ಎಡ್ಜ್ ಆಗಿ ಅದು ಕ್ಯಾಚ್ ಆಗಿತ್ತು. ಈ ಮೂಲಕ ಕೊಹ್ಲಿ ಕೇವಲ 33 ರನ್ಗಳಿಗೆ ನಿರ್ಗಮಿಸಿದರು.
ಇಂದು ಕೊಹ್ಲಿ ಅದ್ಭುತವಾಗಿ ಆಡುವ ಸೂಚನೆ ನೀಡಿದ್ದರು. ನಾಲ್ಕು ಬೌಂಡರಿಗಳು ಕೂಡ ಅವರ ಬ್ಯಾಟ್ನಿಂದ ಸಿಡಿದಿದ್ದವು. ಆದರೆ, 33 ರನ್ಗೆ ಔಟ್ ಆಗಿದ್ದು, ಅವರಿಗೇ ಖುಷಿ ನೀಡಲಿಲ್ಲ. ಅಷ್ಟೇ ಅಲ್ಲ, ಈ ಬಗ್ಗೆ ಕೊಹ್ಲಿ ತುಂಬಾನೇ ಸಿಟ್ಟಾಗಿದ್ದರು. ಗ್ರೌಂಡ್ನಿಂದ ನಿರ್ಗಮಿಸುವವರೆಗೆ ತುಂಬಾನೇ ಕಾಮ್ ಆಗಿದ್ದಂತೆ ತೋರ್ಪಡಿಸಿದ ಅವರು, ಪೆವಿಲಿಯನ್ ಸೇರುತ್ತಿದ್ದಂತೆ ಅಲ್ಲಿದ್ದ ಕೂರ್ಚಿಗಳನ್ನು ಬ್ಯಾಟ್ನಿಂದ ಚೆಲ್ಲಾಪಿಲ್ಲಿ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
rohitians got one more reason to trend #makerohitcaptain#RCBvsSRH #ViratKohli #IPL2021 pic.twitter.com/MvsfgMCS9d
— geegee (@otherepisode) April 14, 2021
Virat Kohli was furious after his dismissal! #ViratKohli #RCBvsSRH pic.twitter.com/Ge2cQY2ALI
— crictoday (@crictoday) April 14, 2021
ಇನ್ನು, ಕೊಹ್ಲಿ ಔಟ್ ಆದ ವಿಚಾರ ಕೂಡ ತುಂಬಾ ಚರ್ಚೆ ಆಗುತ್ತಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ 29 ಬಾಲ್ಗಳಲ್ಲಿ 33 ರನ್ ಗಳಿಸಿದ್ದರು. ಅವರ ಬ್ಯಾಟ್ನಿಂದ ನಾಲ್ಕು ಬೌಂಡರಿ ಕೂಡ ಬಂದಿತ್ತು. ಅವರು ಔಟ್ ಆಗಿದ್ದು 13ನೇ ಓವರ್ನ ಮೊದಲ ಬಾಲ್ನಲ್ಲಿ. ಇಂದು ಕೂಡ ಸೇಮ್ ಪ್ಯಾಟರ್ನ್ ರಿಪೀಟ್ ಆಗಿದೆ.
Same to same ?#IPL2021 #SRHvRCB pic.twitter.com/TrsPu6slYD
— RVCJ Media (@RVCJ_FB) April 14, 2021
ಇದನ್ನೂ ಓದಿ: Virat Kohli: ಇನ್ನೂ ಸರಿಯಾಗಿಲ್ಲ ವಿರಾಟ್ ಕೊಹ್ಲಿ ಕಣ್ಣು; ಟಾಸ್ ವೇಳೆ ಬಹಿರಂಗವಾಯ್ತು ವಿಚಾರ