IPL 2021: ಐಪಿಎಲ್​ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್​ ಪ್ಲ್ಯಾನ್..!

| Updated By: ಝಾಹಿರ್ ಯೂಸುಫ್

Updated on: Jul 24, 2021 | 8:37 PM

ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ (CSK Team): ಎಂ.ಎಸ್.ಧೋನಿ (ನಾಯಕ / ವಿಕೆಟ್ ಕೀಪರ್), ಸುರೇಶ್ ರೈನಾ, ನಾರಾಯಣ್ ಜಗದೀಶನ್, ರುತುರಾಜ್ ಗಾಯಕ್ವಾಡ್, ಕೆ.ಎಂ.ಆಸಿಫ್, ಕರಣ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದೂಲ್ ಠಾಕೂರ್,

IPL 2021: ಐಪಿಎಲ್​ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್​ ಪ್ಲ್ಯಾನ್..!
ಇದಾಗ್ಯೂ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ತನ್ನ ನೂತನ ಅಧಿಕೃತ ಜೆರ್ಸಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಪ್ರಸ್ತುತ ಇರುವ ಜೆರ್ಸಿಯ ವಿನ್ಯಾಸದಲ್ಲೇ ಹೊಸ ಜೆರ್ಸಿ ಕೂಡ ಇರಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಮುಂದಿನ ಸೀಸನ್​ ಐಪಿಎಲ್​ಗಾಗಿ ಸಿಎಸ್​ಕೆ ತಂಡವು ಸಿದ್ಧತೆಗಳನ್ನು ಆರಂಭಿಸಿದ್ದು, ಅದರಂತೆ ಮೊದಲ ಒಪ್ಪಂದವನ್ನು ಕೂಡ ಕುದಿರಿಸಿಕೊಂಡಿದೆ.
Follow us on

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14 ಕೊರೋನಾ ಕಾರಣದಿಂದ ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ. ಏಪ್ರಿಲ್​ನಲ್ಲಿ ಆರಂಭವಾಗಿದ್ದ ಟೂರ್ನಿಯ 29ನೇ ಪಂದ್ಯದ ವೇಳೆ ಕೆಲ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಟೂರ್ನಿಯನ್ನು ಮುಂದೂಡಲಾಗಿತ್ತು. ಅದರಂತೆ ಇದೀಗ ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15ರವರಗೆ ಐಪಿಎಲ್​ನ ಉಳಿದ 31 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಆದರೆ ಟೂರ್ನಿ ಆರಂಭಕ್ಕೂ ಒಂದು ತಿಂಗಳು ಮುಂಚಿತವಾಗಿ ಯುಎಇನಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡಬೇಕೆಂದು ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಬಿಸಿಸಿಐಗೆ ಮನವಿ ಸಲ್ಲಿಸಿದೆ.

ಐಪಿಎಲ್​ನ ಉಳಿದ ಪಂದ್ಯಗಳಿಗಾಗಿ ಸಿಎಸ್​ಕೆ ತಂಡವು ಆಗಸ್ಟ್ 15 ರಿಂದ 20 ರೊಳಗೆ ಯುಎಇಗೆ ತೆರಳು ನಿರ್ಧರಿಸಿದ್ದು, ಇದಕ್ಕೆ ಅನುಮತಿ ನೀಡುವಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅನುಮತಿ ಕೋರಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಆಗಸ್ಟ್ ತಿಂಗಳಲ್ಲೇ ದುಬೈನತ್ತ ಪ್ರಯಾಣ ಬೆಳೆಸಲು ನಿರ್ಧರಿಸಿದೆ. ಟೂರ್ನಿ ಆರಂಭಕ್ಕೂ ಒಂದು ತಿಂಗಳು ಮುಂಚಿತವಾಗಿ ಮರಳು ಗಾಡಿನ ಮೈದಾನದಲ್ಲಿ ಅಭ್ಯಾಸ ನಡೆಸುವ ಸಲುವಾಗಿ ಈ ಎರಡು ತಂಡಗಳು ಅನುಮತಿ ಕೋರಿದ್ದು, ಈ ಬಗ್ಗೆ ಇನ್ನೂ ಕೂಡ ಬಿಸಿಸಿಐ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಆಗಸ್ಟ್​ನಲ್ಲಿ ಯುಎಇಗೆ ತೆರಳಲು ಅನುಮತಿ ಸಿಕ್ಕರೆ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಏಕೆಂದರೆ ಸಿಎಸ್​ಕೆ ತಂಡದಲ್ಲಿರುವ ಬಹುತೇಕ ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಇದೇ ಸಮಯದಲ್ಲಿ ಇತರೆ ತಂಡಗಳ ಆಟಗಾರ ರಾಷ್ಟ್ರೀಯ ತಂಡದ ಪರ ಆಡುತ್ತಿರುತ್ತಾರೆ. ಇತ್ತ ಸಿಎಸ್​ಕೆ ತಂಡದಲ್ಲಿರುವ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಇಮ್ರಾನ್ ತಾಹಿರ್, ಫಾಫ್ ಡುಪ್ಲೆಸಿಸ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಹಾಗೆಯೇ ರಾಬಿನ್ ಉತ್ತಪ್ಪ, ಕೃಷ್ಣಪ್ಪ ಗೌತಮ್, ರುತುರಾಜ್ ಗಾಯಕ್ವಾಡ್, ಹರಿಶಂಕರ್ ರೆಡ್ಡಿ, ಕರ್ಣ್ ಶರ್ಮಾ, ಶಾರ್ದುಲ್ ಠಾಕುರ್, ಸಾಯಿ ಕಿಶೋರ್ ಸೇರಿದಂತೆ ತಂಡದ ಪ್ರಮುಖ ಆಟಗಾರರು ಪ್ರಸ್ತುತ ರಾಷ್ಟ್ರೀಯ ತಂಡದಲ್ಲಿಲ್ಲ ಎಂಬುದು ವಿಶೇಷ.

ಹೀಗಾಗಿ ಸಿಎಸ್​ಕೆ ಸಂಪೂರ್ಣ ತಂಡವು ಒಂದು ತಿಂಗಳ ಮುಂಚಿತವಾಗಿ ಯುಎಇನಲ್ಲಿ ಅಭ್ಯಾಸವನ್ನು ಆರಂಭಿಸಿದರೆ, ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳಲು ಹೆಚ್ಚಿನ ಅನುಕೂಲವಾಗಲಿದೆ. ಇನ್ನು ಕಳೆದ ಸೀಸನ್​ನಲ್ಲಿ ಯುಎಇನಲ್ಲಿ ಮುಗ್ಗರಿಸಿದ್ದ ಸಿಎಸ್​ಕೆ ತಂಡವು ಈ ಬಾರಿ ಬೇಗನೆ ಅಭ್ಯಾಸ ಶಿಬಿರ ಆಯೋಜಿಸಿ ಸಂಪೂರ್ಣ ಲಾಭ ಪಡೆದುಕೊಳ್ಳುವ ಇರಾದೆಯಲ್ಲಿದೆ. ಇದೇ ಕಾರಣದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟೂರ್ನಿ ಆರಂಭಕ್ಕೂ ಒಂದು ತಿಂಗಳು ಮುಂಚಿತವಾಗಿ ಅಭ್ಯಾಸ ಆರಂಭಿಸಲು ಅನುಮತಿ ಕೋರಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಕಳೆದ ಬಾರಿ ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ 7ನೇ ಸ್ಥಾನ ಅಲಂಕರಿಸಿದ್ದ ಸಿಎಸ್​ಕೆ ಈ ಬಾರಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಪ್ರಶಸ್ತಿ ಗೆಲ್ಲುವ ಫೇವರೇಟ್ ತಂಡಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ:
ಎಂ.ಎಸ್.ಧೋನಿ (ನಾಯಕ / ವಿಕೆಟ್ ಕೀಪರ್), ಸುರೇಶ್ ರೈನಾ, ನಾರಾಯಣ್ ಜಗದೀಶನ್, ರುತುರಾಜ್ ಗಾಯಕ್ವಾಡ್, ಕೆ.ಎಂ.ಆಸಿಫ್, ಕರಣ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು ಪ್ಲೆಸಿಸ್, ಶಾರ್ದೂಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇಯ್ನ್ ಬ್ರಾವೋ, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಎಂ.ಹರಿಶಂಕರ್ ರೆಡ್ಡಿ, ಕೆ.ಭಗತ್ ವರ್ಮಾ, ಸಿ ಹರಿ ನಿಶಾಂತ್, ಆರ್ ಸಾಯಿ ಕಿಶೋರ್, ಜೇಸನ್ ಬೆಹ್ರೆಂಡೋರ್ಫ್

 

ಇದನ್ನೂ ಓದಿ: MS Dhoni: ಧೋನಿ ಕೋಚ್ ಆಗಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ..!

ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ