ಯೂರೋಪ್ನ ಜಾರ್ಜಿಯಾದಲ್ಲಿ ನಡೆದ FIDE ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ (World Cadets Chess) ಕರ್ನಾಟಕದ ಎ ಚಾರ್ವಿ (A Charvi) ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 8 ವರ್ಷದೊಳಗಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಾಸನದ ಪುಟ್ಟ ಪೋರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದರು. ವಿಶೇಷ ಎಂದರೆ ತನ್ನ ಈ ವಿಶ್ವ ಚಾಂಪಿಯನ್ ಗೆಲುವನ್ನು ಚಾರ್ವಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಅರ್ಪಿಸಿದ್ದಾರೆ.
ಅಪ್ಪಟ ‘ಅಪ್ಪು’ ಅಭಿಮಾನಿಯಾಗಿರುವ ಹಾಸನದ ಶ್ರವಣಬೆಳಗೊಳ ಮೂಲದ ಚಾರ್ವಿ ತನ್ನ ಗೆಲುವನ್ನು ತನ್ನ ನೆಚ್ಚಿನ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಮರ್ಪಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ತನ್ನ ಆಲ್ಟೈಮ್ ಫೇವರೇಟ್ ನಟನಿಗೆ ವಿಶ್ವ ಚಾಂಪಿಯನ್ ಪಟ್ಟದೊಂದಿಗೆ ಗೌರವ ಸೂಚಿಸಿದ್ದಾರೆ.
Little Charvi makes the country proud by winning gold at the World under-8 girls championship 2022. Experience the goosebumps as the Indian national anthem plays in Batumi, Georgia! pic.twitter.com/iBFerHgVwX
— ChessBase India (@ChessbaseIndia) September 27, 2022
ಈ ಸ್ಪರ್ಧೆಯಲ್ಲಿ 8 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಾರ್ವಿ 11 ಸುತ್ತುಗಳಿಂದ 9.5 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರು. ಚಾರ್ವಿ ಕೊನೆಯ ಮೂರು ಸುತ್ತುಗಳಲ್ಲಿ ಎರಡನೇ ಸ್ಥಾನ ಗಳಿಸಿದ ಬೋಧನ ಶಿವಾನಂದನ್ ( ಇಂಗ್ಲೆಂಡ್ ) ಅವರನ್ನು ಫಾಲೋ ಮಾಡಿದ್ದರು. ಆದರೆ ಇಬ್ಬರೂ 9.5 ಅಂಕಗಳೊಂದಿಗೆ ಚದುರಂಗದಾಟವನ್ನು ಕೊನೆಗೊಳಿಸಿದ್ದರು. ಆ ನಂತರ ಉತ್ತಮ ಟೈ-ಬ್ರೇಕ್ ಸ್ಕೋರ್ನಲ್ಲಿ ಬೋಧನ ಅವರನ್ನು ಹಿಂದಿಕ್ಕಿ ಚಾರ್ವಿ ಲಿಟಲ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಚಾರ್ವಿ ಅಲ್ಲದೆ, ಗಾಜಿಯಾಬಾದ್ ಮೂಲದ ಶುಭಿ ಗುಪ್ತಾ ಅವರು 12 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದರು. 11 ಸುತ್ತುಗಳಿಂದ 8.5 ಅಂಕಗಳನ್ನು ಗಳಿಸಿದ ಶುಭಿ ಗುಪ್ತಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.
Congratulations Charvi!! Rise of a new star https://t.co/mK8QpcJTTp
— Viswanathan Anand (@vishy64theking) September 28, 2022
ಕರ್ನಾಟಕದ ಕೀರ್ತಿ ಪಾತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಚಾರ್ವಿಯ ಈ ಸಾಧನೆಯನ್ನು 5 ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅಭಿನಂದಿಸಿದ್ದಾರೆ.
ರಾಜ್ಯ ಸರ್ಕಾರದಿಂದ 5 ಲಕ್ಷ ರೂ.:
ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ವಿಜೇತರಾಗಿರುವ ಹಾಸನ ಮೂಲದ ಚಾರ್ವಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕ್ರೀಡಾ ಸಚಿವ ನಾರಾಯಣಗೌಡ ಘೋಷಿಸಿದ್ದಾರೆ.
Published On - 11:02 am, Wed, 28 September 22