AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Chess Championship 2024: ಗುಕೇಶ್​ಗೆ ಸೋಲಿನ ಆಘಾತ; ರೋಚಕ ಘಟ್ಟದತ್ತ ಡಬ್ಲ್ಯುಸಿಸಿ ಫೈನಲ್

World Chess Championship 2024: ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 12 ನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಗುಕೇಶ್ ಸೋಲಿನೊಂದಿಗೆ ಮತ್ತೊಮ್ಮೆ ಉಭಯ ಆಟಗಾರರ ಶ್ರೇಯಾಂಕ ಸಮಬಲಗೊಂಡಿದ್ದು, ಪ್ರಸ್ತುತ ಇಬ್ಬರೂ ತಲಾ 6 ಅಂಕಗಳಿಂದ ಸಮಬಲ ಸಾಧಿಸಿದ್ದಾರೆ.

World Chess Championship 2024: ಗುಕೇಶ್​ಗೆ ಸೋಲಿನ ಆಘಾತ; ರೋಚಕ ಘಟ್ಟದತ್ತ ಡಬ್ಲ್ಯುಸಿಸಿ ಫೈನಲ್
ವಿಶ್ವ ಚೆಸ್ ಚಾಂಪಿಯನ್‌ಶಿಪ್
ಪೃಥ್ವಿಶಂಕರ
|

Updated on:Dec 12, 2024 | 8:33 PM

Share

ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ 11ನೇ ಗೇಮ್​ನಲ್ಲಿ ಗೆಲುವು ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ 1 ಅಂಕದ ಮುನ್ನಡೆ ಪಡೆದುಕೊಂಡಿದ್ದ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್, ಇಂದು ನಡೆದ 12ನೇ ಗೇಮ್​ನಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಎದುರು ಸೊಲೊಪ್ಪಿಕೊಂಡಿದ್ದಾರೆ. ಈ ಮೂಲಕ ಉಭಯ ಆಟಗಾರರು ತಲಾ 6 ಅಂಕಗಳನ್ನು ಹೊಂದಿದ್ದು, ಇದೀಗ ಉಳಿದಿರುವ 2 ಗೇಮ್​ಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಇಬ್ಬರ ಬಳಿ ಸಮಾನ ಅಂಕಗಳು

ವಾಸ್ತವವಾಗಿ ನವೆಂಬರ್ 25 ರಿಂದ ಆರಂಭವಾಗಿರುವ ಈ ಫೈನಲ್ ಪಂದ್ಯದ ಮೊದಲ ಗೇಮ್​ನಲ್ಲಿ ಗುಕೇಶ್ ಅವರನ್ನು ಲಿರೆನ್ 1.5-0.5 ರಿಂದ ಸೋಲಿಸಿದ್ದರು. ಆ ಬಳಿಕ ನಡೆದಿದ್ದ ಎರಡನೇ ಗೇಮ್​ ಡ್ರಾ ಆಗಿತ್ತು. ಮೂರನೇ ಗೇಮ್​ನಲ್ಲಿ ಗೆಲುವು ದಾಖಲಿಸುವ ಮೂಲಕ ಗುಕೇಶ್ ಜಯದ ಹಾದಿಗೆ ಮರಳಿದ್ದರು. ಆದರೆ ಆ ನಂತರ ನಡೆದಿದ್ದ ಸತತ 7 ಗೇಮ್​ಗಳಲ್ಲಿ ಇಬ್ಬರೂ ಆಟಗಾರರಿಗೆ ಗೆಲವು ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ 7 ಗೇಮ್​ಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಆದರೆ ಭಾನುವಾರ ಅಂದರೆ ನಿನ್ನೆ ನಡೆದ ಗೇಮ್​ನಲ್ಲಿ ಗೆಲುವು ಸಾಧಿಸುವ ಮೂಲಕ ಗುಕೇಶ್ ಮುನ್ನಡೆ ಸಾಧಿಸಿದ್ದರು. ಆದರೆ ಇಂದು ನಡೆದ 12 ಗೇಮ್​ನಲ್ಲಿ ಚೀನಾದ ಡಿಂಗ್ ಲಿರೆನ್ ಜಯ ಸಾಧಿಸುವುದರೊಂದಿಗೆ ಅಂಕಗಳಲ್ಲಿ ಸಮಬಲ ಸಾಧಿಸಿದ್ದಾರೆ.

2 ಗೇಮ್​ಗಳು ಇಬ್ಬರಿಗೂ ನಿರ್ಣಾಯಕ

ವಿಶ್ವ ಚೆಸ್ ಚಾಂಪಿಯನ್‌ಶಿಪ್​ನಲ್ಲಿ ಒಟ್ಟು 14 ಸುತ್ತುಗಳು ನಡೆಯಲಿವೆ. ಇದು ಡಿಸೆಂಬರ್ 12 ರವರೆಗೆ ನಡೆಯಲಿದೆ. ಅಗತ್ಯ ಬಿದ್ದರೆ ಡಿಸೆಂಬರ್ 13 ರಂದು ಟೈಬ್ರೇಕರ್ ಸುತ್ತು ನಡೆಯಲಿದೆ. ಚಾಂಪಿಯನ್‌ಶಿಪ್ ಗೆಲ್ಲಲು 7.5 ಅಂಕಗಳ ಅಗತ್ಯವಿದ್ದು, 14 ಸುತ್ತುಗಳ ನಂತರ ಸ್ಕೋರ್ ಟೈ ಆಗಿದ್ದರೆ, ಟೈಬ್ರೇಕರ್‌ ಮೂಲಕ ವಿಜೇತರನ್ನು ಘೋಷಿಸಲಾಗುತ್ತದೆ. ಇದೀಗ ಈ ಇಬ್ಬರು ತಲಾ 6 ಅಂಕಗಳನ್ನು ಸಂಪಾದಿಸಿದ್ದು, ಉಳಿದಿರುವ ಎರಡು ಗೇಮ್​ಗಳು ಇಬ್ಬರ ಪಾಲಿಗೆ ನಿರ್ಣಾಯಕವಾಗಿವೆ. ಈ ಎರಡು ಗೇಮ್​ಗಳಲ್ಲಿ ಇಬ್ಬರೂ ತಲಾ ಒಂದೊಂದು ಪಂದ್ಯವನ್ನು ಗೆದ್ದರೆ ಇಬ್ಬರ ಬಳಿ 7 ಅಂಕಗಳು ಇದ್ದಂತ್ತಾಗುತ್ತದೆ. ಒಂದು ವೇಳೆ ಈ ಎರಡೂ ಗೇಮ್​ಗಳನ್ನು ಗುಕೇಶ್​ ಗೆದ್ದುಕೊಂಡರೆ ಅವರಿಗೆ ವಿಶ್ವ ಚೆಸ್ ಚಾಂಪಿಯನ್‌ ಪಟ್ಟ ಒಲಿಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Mon, 9 December 24

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ