ಅಂಡ್ರಾಯ್ಡ್ ಬಳಕೆದಾರರೇ ಎಚ್ಚರ! 19 ಸಾವಿರಕ್ಕೂ ಹೆಚ್ಚು ಆ್ಯಪ್​ಗಳಲ್ಲಿದೆ ನ್ಯೂನತೆ

| Updated By: ಝಾಹಿರ್ ಯೂಸುಫ್

Updated on: Sep 11, 2021 | 8:18 PM

Alert for android users: ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ, ಬಳಕೆದಾರರ ವಿಮರ್ಶೆಗಳನ್ನು ಓದಿ. ನಿಮ್ಮ ಮೊಬೈಲ್ ಫೋನ್‌ನಲ್ಲಿ ಉತ್ತಮ ಮತ್ತು ವಿಶ್ವಾಸಾರ್ಹ ಅ್ಯಂಟಿ-ವೈರಸ್ ಸಾಫ್ಟ್‌ವೇರ್ ಬಳಸಿ ಎಂದು ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್ ತಿಳಿಸಿದೆ.

ಅಂಡ್ರಾಯ್ಡ್ ಬಳಕೆದಾರರೇ ಎಚ್ಚರ! 19 ಸಾವಿರಕ್ಕೂ ಹೆಚ್ಚು ಆ್ಯಪ್​ಗಳಲ್ಲಿದೆ ನ್ಯೂನತೆ
ಸಾಂದರ್ಭಿಕ ಚಿತ್ರ
Follow us on

ಗೂಗಲ್ ಪ್ಲೇ ಸ್ಟೋರ್ (Google Play Store) ಅಂಡ್ರಾಯ್ಡ್​ ಸ್ಮಾರ್ಟ್‌ಫೋನ್‌ಗಳಿಗಾಗಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅತ್ಯಂತ ಸುರಕ್ಷಿತ ಮೂಲವೆಂದು ಪರಿಗಣಿಸಲಾಗಿದೆ. ಆದರೆ ನಿಮ್ಮ ಮೊಬೈಲ್ ಭದ್ರತೆಯನ್ನು ಅಪಾಯಕ್ಕೆ ತಳ್ಳುವಂತಹ ಹಲವು ಆ್ಯಪ್‌ಗಳು ಪ್ಲೇ ಸ್ಟೋರ್​ನಲ್ಲೇ ಇದೆ ಎಂಬ ವಿಚಾರ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಗೂಗಲ್ ತನ್ನ ಆ್ಯಪ್ ಸ್ಟೋರ್ ಅನ್ನು ಪರಿಶೀಲಿಸಲು ಕ್ರಮಕೈಗೊಳ್ಳುತ್ತಿದೆ. ಇತ್ತೀಚೆಗಷ್ಟೇ ಪ್ಲೇ ಸ್ಟೋರ್‌ನಲ್ಲಿರುವ ಕೆಲವು ಅಪಾಯಕಾರಿ ಆ್ಯಪ್‌ಗಳನ್ನು ಗೂಗಲ್ ನಿಷೇಧಿಸಿತ್ತು. ಬಳಕೆದಾರರನ್ನು ಬಲೆಗೆ ಬೀಳಿಸಲು ಮತ್ತು ವೈಯಕ್ತಿಕ ವಿವರಗಳನ್ನು ಕದಿಯಲು ಈ ಆ್ಯಪ್‌ಗಳನ್ನು ಹ್ಯಾಕರ್‌ಗಳು ಬಳಸುತ್ತಿದ್ದರು. ಅಂತಹ ಆ್ಯಪ್​ಗಳನ್ನು ಗೂಗಲ್ ಡಿಲೀಟ್ ಮಾಡಿದರೂ, ಮತ್ತಷ್ಟು ಅಪಾಯಕಾರಿ ಆ್ಯಪ್​ಗಳು ಪ್ಲೇ ಸ್ಟೋರ್​ನಲ್ಲಿದೆ ಎಂದು ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್ ಎಚ್ಚರಿಸಿದೆ.

ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್, ಇತ್ತೀಚೆಗೆ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವಂತಹ ಸಮಸ್ಯೆಗಳಿರುವ 19,000 ಆ್ಯಪ್​ಗಳನ್ನು ಪ್ಲೇಸ್ಟೋರ್​ನಲ್ಲಿ ಪತ್ತೆ ಹಚ್ಚಿದೆ. ಈ ಆ್ಯಪ್​ಗಳಲ್ಲಿ ಹಲವು ನ್ಯೂನತೆಗಳಿದ್ದು, ಇದರಿಂದ ಹ್ಯಾಕರುಗಳು ಸುಲಭವಾಗಿ ಬಳಕೆದಾರರ ಮಾಹಿತಿ ಕಲೆಹಾಕಬಹುದು ಎಂದು ತಿಳಿಸಿದೆ.

ಬಳಕೆದಾರರ ಡೇಟಾದ ಫೈರ್‌ಬೇಸ್ ತಪ್ಪಾದ ಕಾನ್ಫಿಗರೇಶನ್‌ನಿಂದಾಗಿ 19,300 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಹ್ಯಾಕರುಗಳು ಸುಲಭವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬಹುದು. ಹೀಗಾಗಿ ಅಂಡ್ರಾಯ್ಡ್​ ಆ್ಯಪ್​ ಬಳಕೆದಾರರು ಎಚ್ಚರದಿಂದ ಇರುವಂತೆ ಅವಾಸ್ಟ್ ತಿಳಿಸಿದೆ.

ಆ್ಯಪ್ ಡೌನ್​ಲೋಡ್ ಮಾಡುವ ಮುನ್ನ ಈ ವಿಷಯಗಳನ್ನು ನೆನಪಿನಲ್ಲಿಡಿ …
>> ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಪರಿಶೀಲಿಸದೆ ಡೌನ್‌ಲೋಡ್ ಮಾಡಬೇಡಿ. ಅಪ್ಲಿಕೇಶನ್‌ಗಳಲ್ಲಿ ನೀಡಿರುವ ವಿವರಗಳನ್ನು ಎಚ್ಚರಿಕೆಯಿಂದ ಓದಿ.

>> ಅಸುರಕ್ಷಿತ ಅಪ್ಲಿಕೇಶನ್‌ಗಳು ಒಂದು ಅಥವಾ ಎರಡು ಕಾಗುಣಿತ ತಪ್ಪುಗಳನ್ನು ಹೊಂದಿರಬಹುದು.

>> ಆಫರ್‌ಗಳು ಅಥವಾ ಬಹುಮಾನಗಳನ್ನು ನೀಡುವ ಅಪ್ಲಿಕೇಶನ್‌ಗಳನ್ನು ನಂಬಬೇಡಿ.

>> ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ, ಬಳಕೆದಾರರ ವಿಮರ್ಶೆಗಳನ್ನು ಓದಿ. ನಿಮ್ಮ ಮೊಬೈಲ್ ಫೋನ್‌ನಲ್ಲಿ ಉತ್ತಮ ಮತ್ತು ವಿಶ್ವಾಸಾರ್ಹ ಅ್ಯಂಟಿ-ವೈರಸ್ ಸಾಫ್ಟ್‌ವೇರ್ ಬಳಸಿ ಎಂದು ಡಿಜಿಟಲ್ ಸೆಕ್ಯುರಿಟಿ ಕಂಪನಿ ಅವಾಸ್ಟ್ ತಿಳಿಸಿದೆ.

ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್

ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಇದನ್ನೂ ಓದಿ: Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

 

(Alert for android users more than 19 thousand apps found with vulnerablities)