Battlegrounds Mobile India: ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆ ದಿನಾಂಕದ ಮಾಹಿತಿ ಮತ್ತೊಮ್ಮೆ ಸೋರಿಕೆ
ಪಬ್ಜಿ ಗೇಮ್ನ ಹೊಸ ಅವತಾರವಾದ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಬಿಡುಗಡೆ ದಿನಾಂಕದ ಮಾಹಿತಿ ಮತ್ತೊಮ್ಮೆ ಸೋರಿಕೆ ಆಗಿದೆ.
ಲಕ್ಷಾಂತರ ಮಂದಿ ಭಾರತೀಯರು ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದನ್ನು ಪಬ್ಜಿ ಮೊಬೈಲ್ ಇಂಡಿಯಾದ ಮತ್ತೊಂದು ವರ್ಷನ್ ಆಗಿ ನೋಡಲಾಗುತ್ತಿದೆ. ಮುಂಬರುವ ಗೇಮ್ನ ಬಿಡುಗಡೆ ದಿನಾಂಕ ಮತ್ತೊಮ್ಮೆ ಸೋರಿಕೆ ಆಗಿದೆ. ಸದ್ಯಕ್ಕೆ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾವು ಗೂಗಲ್ ಪ್ಲೇ ಸ್ಟೋರ್ನಲ್ಲಿ ಪ್ರೀ- ರಿಜಿಸ್ಟ್ರೇಷನ್ಗೆ ಲಭ್ಯವಿದೆ. ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದದ್ದು ಏನೆಂದರೆ, ಸೆಪ್ಟೆಂಬರ್ 4, 2020ರಲ್ಲಿ ಮಾಹಿತಿ ಸೋರಿಕೆ ಆತಂಕದಿಂದ ಭಾರತ ಸರ್ಕಾರವು ಪಬ್ಜಿ ಗೇಮ್ ನಿಷೇಧಿಸಿತ್ತು. ಇದೀಗ ಹತ್ತಿರಹತ್ತಿರ ವರ್ಷದ ನಂತರ ಗೇಮ್ ಡೆವಲಪರ್ ಆದ ಕ್ರಾಫ್ಟನ್ನಿಂದ ಗೇಮ್ ರೀಲಾಂಚ್ ಆಗುತ್ತಿದೆ. ಈ ಸಲ ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಅಂತ ಹೆಸರು ಬದಲಿಸಲಾಗಿದೆ. ಸದ್ಯದಲ್ಲೇ ಬಿಡುಗಡೆ ಆಗಲಿದೆ.
ಬ್ಯಾಟಲ್ಗ್ರೌಂಡ್ಸ್ ಇಂಡಿಯಾ ಮೊಬೈಲ್ಗೆ ಸಂಬಂಧಿಸಿದ ಆಂತರಿಕ ಮಾಹಿತಿಯ ಪ್ರಕಾರ, ಜೂನ್ ತಿಂಗಳ ಮೂರನೇ ವಾರದಲ್ಲಿ ಈ ಗೇಮ್ ಬಿಡುಗಡೆ ಆಗಲಿದೆ. ಅಭಿಜಿತ್ ಅಂಧರೆ ಅವರು ಊ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜೂನ್ ಮೂರನೇ ವಾರದಲ್ಲಿ ಬ್ಯಾಟಲ್ಗ್ರೌಂಡ್ಸ್ ಇಂಡಿಯಾ ಮೊಬೈಲ್ ಬಿಡುಗಡೆ ಆಗುತ್ತದೆ ಎಂದಿದ್ದಾರೆ. ಜೂನ್ 13ರಿಂದ 19ನೇ ತಾರೀಕಿನ ಮಧ್ಯೆ ಗೇಮ್ ಬಿಡುಗಡೆ ಮಾಡುವುದಕ್ಕೆ ಕ್ರಾಫ್ಟನ್ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ. ಇನ್ನಷ್ಟು ವರದಿಗಳು ಹೇಳಿಕೊಂಡಿರುವಂತೆ ಬ್ಯಾಟಲ್ಗ್ರೌಂಡ್ಸ್ ಗೇಮ್ ಜೂನ್ 18ನೇ ತಾರೀಕಿಗೆ ಬಿಡುಗಡೆ ಆಗಲಿದೆ. ಇನ್ನೂ ಕೆಲ ಈ ಗೇಮಿಂಗ್ನ ಅಭಿಮಾನಿಗಳು ಜೂನ್ 10ನೇ ತಾರೀಕು ಬಿಡುಗಡೆ ಆಗಲಿದೆ ಎಂದು ಹೇಳುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಕ್ರಾಫ್ಟನ್ನಿಂದ ಪೋಸ್ಟರ್ ಬಿಡುಗಡೆ ಆದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈ ಪೋಸ್ಟರ್ನಲ್ಲಿ ಸೂರ್ಯಗ್ರಹಣವನ್ನು ತೋರಿಸುವ ರೀತಿಯಲ್ಲಿ ರೂಪಿಸಲಾಗಿತ್ತು. ಮುಂದಿನ ಸೂರ್ಯ ಗ್ರಹಣ ಜೂನ್ 10ನೇ ತಾರೀಕಿಗೆ ಇದೆ. ಆದರೆ ಕ್ರಾಫ್ಟನ್ನಿಂದ ಅಧಿಕೃತವಾಗಿ ಯಾವುದೇ ಹೇಳಿಕೆ ಕೂಡ ಬಂದಿಲ್ಲ.
ಇದನ್ನೂ ಓದಿ: Battlegrounds Mobile India: ಅಧಿಕೃತವಾಗಿ ವಾಪಸ್ ಆದ PUBG; ಪ್ರೀ ರಿಜಿಸ್ಟ್ರೇಷನ್ ಹೇಗೆ?
(Krafton developed Battlegrounds mobile India game launch date in India leaked once again. Here is the details)