ಇಂದಿನ ಡಿಜಿಟಲ್ ಯುಗದಲ್ಲಿ ಸ್ಕ್ಯಾಮರ್‌ಗಳು (Scam) ಎಗ್ಗಿಲ್ಲದೆ ಅಮಾಯಕರ ಹಣ ಎಗರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿ ದಿನ ಒಂದಲ್ಲ ಒಂದು ವರದಿ ಆಗುತ್ತಲೇ ಇದೆ. ಬ್ಯಾಂಕುಗಳು ಕಳುಹಿಸುವ ಸಂದೇಶದಂತೆ ಫೇಕ್ ಮೆಸೇಜ್ಗಳನ್ನು (Fake Message) ಕಳುಹಿಸಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈರೀತಿಯ ಪ್ರಕರಣ ಹೆಚ್ಚುತ್ತಿದೆ. ಇದೀಗ ಫೇಸ್ಬುಕ್ನಲ್ಲಿ ನಡೆಯುತ್ತಿರುವ ದೊಡ್ಡ ಸ್ಕ್ಯಾಮ್ ಒಂದು ಹೊರಬಿದ್ದಿದೆ. ಹ್ಯಾಕರ್ಗಳು ಫೇಸ್ಬುಕ್ನಲ್ಲಿ (Facebook) ಸ್ವಲ್ಪವೂ ಅನುಮಾನ ಬರದ ರೀತಿಯಲ್ಲಿ ಬಳಕೆದಾರರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ನಲ್ಲಿ ನಡೆಯುತ್ತಿರುವ ಹೊಸ ಸ್ಕ್ಯಾಮ್ನ ಹೆಸರು “look who just died” ಎಂದು. ಫೇಸ್ಬುಕ್ನಲ್ಲಿ ಹ್ಯಾಕರ್ಗಳು ಅಮಾಯಕ ಬಳಕೆದಾರರ ಖಾತೆಗೆ ನೇರವಾಗಿ ಒಂದು ಮೆಸೇಜ್ ಕಳುಹಿಸುತ್ತಾರೆ. ಇದರಲ್ಲಿ ನಿಮ್ಮ ಫೇಸ್ಬುಕ್ನ ಆತ್ಮಿಯರು ನಿಧನ ಹೊಂದಿರುವ ಸುದ್ದಿ ಇರುತ್ತದೆ. ಜೊತೆಗೆ ಈ ವ್ಯಕ್ತಿ ನಿಮಗೆ ಗೊತ್ತು, ನಿಮ್ಮ ತುಂಬಾ ಆತ್ಮೀಯರು ನಿಧನರಾಗಿದ್ದಾರೆ ಎಂದು ಬರೆದು ಕಳುಹಿಸುತ್ತಾರೆ. ಈ ಸುದ್ದಿಯನ್ನು ಓದಲು ನಿಮ್ಮ ಫೇಸ್‌ಬುಕ್ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನಮೋದಿಸಿ ಎಂದು ಕೇಳಲಾಗುತ್ತಿದೆ. ಅದರಂತೆ ನೀವು ಸುದ್ದಿ ಓದಲು ಪಾಸ್ವವರ್ಡ್ ಮತ್ತು ಐಡಿ ಹಾಕಿದರೆ ಮುಗಿಯಿತು. ನಿಮ್ಮ ಖಾತೆ ಹ್ಯಾಕ್.
iQoo Z7s 5G: ಸೂಪರ್ ಸ್ಪೀಡ್ ಫೋನ್ ಕ್ರೇಜಿ ಬೆಲೆಗೆ ಲಭ್ಯ
ಹ್ಯಾಕರ್ ನಿಮ್ಮ ಖಾತೆಯ ಮಾಹಿತಿ ಪಡೆದುಕೊಂಡು ಲಾಗಿನ್ ಆಗಿ, ನಿಮ್ಮ ಫ್ರೆಂಡ್ ಲಿಸ್ಟ್ನಲ್ಲಿ ಇರುವ ಇತರರಿಗೂ ಈ ಮೆಸೇಜ್ ಕಳುಹಿಸುತ್ತಾರೆ. ಬಳಿಕ ಅವರ ಖಾತೆಯನ್ನೂ ಹ್ಯಾಕ್ ಮಾಡುತ್ತಾರೆ. ಅಲ್ಲದೆ ನಿಮ್ಮ ಖಾತೆಯಲ್ಲಿರುವ ಮೊಬೈಲ್ ನಂಬರ್, ಜನ್ಮ ದಿನಾಂಕ, ವೈಯಕ್ತಿಕ ಮೆಸೇಜ್ ಅನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯ ಫೇಕ್ ಮೆಸೇಜ್, ಹ್ಯಾಕರ್ಗಳಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳಲು ಈ ಕೆಳಗಿನ ಸೂತ್ರ ನೆನಪಿನಲ್ಲಿಡಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ