iPhone 12: ಐಫೋನ್ ಮೇಲೆ ಬರೋಬ್ಬರಿ 25,500 ರೂ. ಡಿಸ್ಕೌಂಟ್: ಫ್ಲಿಪ್​ಕಾರ್ಟ್​ನಿಂದ ಹಿಂದೆಂದೂ ನೀಡಿರದ ಆಫರ್

Flipkart Big Billion Days Sale: ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಐಫೋನ್ ಎಸ್‌ಇ ಮೇಲೆ ಬರೋಬ್ಬರಿ 25,999 ರೂ. ಡಿಸ್ಕೌಂಟ್​ ನೀಡಿದೆ. 64GB ಸ್ಟೋರೇಜ್ ಮಾದರಿದ ಮೂಲಬೆಲೆ 39,900 ರೂ. ಆಗಿದೆ.

iPhone 12: ಐಫೋನ್ ಮೇಲೆ ಬರೋಬ್ಬರಿ 25,500 ರೂ. ಡಿಸ್ಕೌಂಟ್: ಫ್ಲಿಪ್​ಕಾರ್ಟ್​ನಿಂದ ಹಿಂದೆಂದೂ ನೀಡಿರದ ಆಫರ್
Apple iPhone 12
Follow us
TV9 Web
| Updated By: Vinay Bhat

Updated on: Oct 04, 2021 | 1:49 PM

ಭಾರತದ ಎರಡು ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಅತಿ ದೊಡ್ಡ ಮೇಳ ನಡೆಯುತ್ತಿವೆ. ಅಮೆಜಾನ್​ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival Sale) 2021 ಶುರುವಾಗಿದ್ದರೆ ಇತ್ತ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ 2021 ಸೇಲ್ (Flipkart Big Billion Days sale) ಭರ್ಜರಿ ಆಗಿ ಸಾಗುತ್ತಿದೆ. ಈ ಮೇಳದಲ್ಲಿ ಆ್ಯಪಲ್‌ ಕಂಪೆನಿಯ ಆಯ್ದ ಐಫೋನ್‌ಗಳಿಗೆ (Apple iPhone 12) ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 10 ರ ವರೆಗೆ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ 2021 ಎಲ್ಲಾ ಗ್ರಾಹಕರಿಗೂ ಲಭ್ಯವಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2021 ಪ್ಲಸ್ ಸೇಲ್ ಮುಗಿದ ನಂತರ ಎಲ್ಲಾ ಗ್ರಾಹಕರಿಗೂ ಫ್ಲಾಶ್ ಸೇಲ್ ಮಾರಾಟದಲ್ಲಿ ಹಲವು ಉತ್ಪನ್ನಗಳನ್ನು ಖರೀದಿಸುವ ಅವಕಾಶವನ್ನು ಫ್ಲಿಪ್‌ಕಾರ್ಟ್ ನೀಡಿದೆ.

ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಐಫೋನ್ ಎಸ್‌ಇ ಮೇಲೆ ಬರೋಬ್ಬರಿ 25,999 ರೂ. ಡಿಸ್ಕೌಂಟ್​ ನೀಡಿದೆ. 64GB ಸ್ಟೋರೇಜ್ ಮಾದರಿದ ಮೂಲಬೆಲೆ 39,900 ರೂ. ಆಗಿದ್ದು, ಭರ್ಜರಿ ರಿಯಾಯಿತಿ ​ ಬೆಲೆಗೆ ಸೇಲ್​ ಮಾಡುತ್ತಿದೆ. ಐಸಿಐಸಿಐ ಬ್ಯಾಂಕ್ ಆಕ್ಸಿಸ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,500 ರೂ. ಡಿಸ್ಕೌಂಟ್ ಕೂಡ ಇದೆ.

ಕಳೆದ ವರ್ಷ  128GB ಸ್ಟೋರೇಜ್ ಆಯ್ಕೆಗೆ ಐಫೋನ್​ ಎಸ್​ಇ ರೂ. 30,999 ಕ್ಕೆ ಮಾರಾಟ ಮಾಡಿತ್ತು. ಅಂತೆಯೇ 256GB ಆಯ್ಕೆಯ ಬೆಲೆ  40,999 ಆಗಿತ್ತು. ಇದೀಗ ಫ್ಲಿಪ್‌ಕಾರ್ಟ್ ಕಡಿಮೆ ಬೆಲೆ ಸೇಲ್​ ಮಾಡುತ್ತಿದೆ. ಅದರ ಜೊತೆಗೆ ಕರ್ಟೈನ್ ರೈಸರ್‌ನ ಒಂದು ಭಾಗವಾಗಿ ಆಯ್ದ ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳ ಮೇಲೂ ಕೊಡುಗೆಗಳನ್ನು ನೀಡಿದೆ. ಗಮನಾರ್ಹವಾಗಿ, ಗ್ರಾಹಕರು ಕೆಲವು ಮಾರಾಟದ ಕೊಡುಗೆಗಳನ್ನು ಪಡೆಯುವ ಮೂಲಕ ಐಫೋನ್ ಎಸ್‌ಇ ಅನ್ನು ಕಡಿಮೆ ಬೆಲೆಗೆ ಕೊಂಡೊಯ್ಯಬಹುದಾಗಿದೆ.

ಆ್ಯಪಲ್ ಐಫೋನ್ ಎಸ್‌ಇ 4.7 ಇಂಚಿನ ರೆಟಿನಾ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಜೊತೆಗೆ ಡಾಲ್ಬಿ ವಿಷನ್ ಮತ್ತು HDR10ನೊಂದಿಗೆ ಬರುತ್ತದೆ.  ಆ್ಯಪಲ್ A13 ಬಯೋನಿಕ್ ಚಿಪ್ ಅನ್ನು ಅಳವಡಿತ್ತಾ ಬಂದಿದೆ. ಇದು ಆ್ಯಪಲ್ ಐಫೋನ್ 11 ಲೈನ್‌ಅಪ್‌ಗೆ ಶಕ್ತಿಯನ್ನು ನೀಡುತ್ತದೆ.

ಇನ್ನೂಬಿಗ್ ಬಿಲಿಯನ್ ಡೇಸ್ 2021 ಮಾರಾಟದಲ್ಲಿ ಆ್ಯಪಲ್‌ನ ಐಫೋನ್ 12 ಮತ್ತು ಐಫೋನ್ 12 ಮಿನಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಐಫೋನ್ 12 (64 ಜಿಬಿ) ರೂ. 49,999 ಆಗಿದ್ದು, ಐಫೋನ್ 12 ಮಿನಿ (64 ಜಿಬಿ) ರೂ. 37,999ಗೆ ನಿಮ್ಮದಾಗಬಹುದು. ಐಫೋನ್ 12 ಸರಣಿಯ ಮಾದರಿಗಳು ಭಾರತದಲ್ಲಿ ಪ್ರಾರಂಭವಾದಾಗಿನಿಂದ ನಾವು ನೋಡಿದ ಅತ್ಯಂತ ಕಡಿಮೆ ಬೆಲೆಗಳು ಇದಾಗಿದ್ದು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ 15,800. ಮೌಲ್ಯದ ವಿನಿಮಯ ಕೊಡುಗೆಗಳನ್ನು ಒಳಗೊಂಡಿದೆ.

Amazon Great Indian Festival Sale: ಗ್ರೇಟ್‌ ಇಂಡಿಯನ್‌ ಸೇಲ್​ನ ಎರಡನೇ ದಿನವೂ ಭರ್ಜರಿ ಆಫರ್: ಅತಿ ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್​ಗಳು

Amazon Great Indian Sale: ಅಮೆಜಾನ್ ಫೆಸ್ಟಿವಲ್ ಸೇಲ್​ನಲ್ಲಿ 50,000 ರೂ. ಒಳಗೆ ಲಭ್ಯವಿದೆ ಅತ್ಯುತ್ತಮ ಲ್ಯಾಪ್​ಟಾಪ್​ಗಳು

(Flipkart Big Billion Days sale 2021 is now live best deals on the Apple iPhones)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್