Google Chrome: ಗೂಗಲ್ ಕ್ರೋಮ್ ಬಳಕೆದಾರರೇ… ತಕ್ಷಣವೇ ನಿಮ್ಮ ಬ್ರೌಸರ್ ಅಪ್ಡೇಟ್ ಮಾಡಿ: ಗೂಗಲ್​ನಿಂದ ಎಚ್ಚರಿಕೆ

ವರದಿಯ ಪ್ರಕಾರ, ಸ್ವತ ಗೂಗಲ್ ಉದ್ಯೋಗಿಗಳೇ ಈ ಹ್ಯಾಕ್ ಕುರಿತು ಪತ್ತೆಹಚ್ಚಿದ್ದು, ಸೈಬರ್ ಅಪರಾಧಿಗಳು ಲಾಭ ಪಡೆಯುವ ನಿಟ್ಟಿನಲ್ಲಿ Zero Day Hack Exploite ಮೂಲಕ ಗೂಗಲ್ ಕ್ರೋಮ್ ಅನ್ನು ಬಳಸಿಕೊಳ್ಳಬಹುದು ಎಂದು ಎಚ್ಚರಿಸಿದೆ.

Google Chrome: ಗೂಗಲ್ ಕ್ರೋಮ್ ಬಳಕೆದಾರರೇ… ತಕ್ಷಣವೇ ನಿಮ್ಮ ಬ್ರೌಸರ್ ಅಪ್ಡೇಟ್ ಮಾಡಿ: ಗೂಗಲ್​ನಿಂದ ಎಚ್ಚರಿಕೆ
Google Chrome
Follow us
TV9 Web
| Updated By: Vinay Bhat

Updated on: Sep 28, 2021 | 3:33 PM

ನೀವು ನಿಮ್ಮ ಕಂಪ್ಯೂಟರ್​ನಲ್ಲಿ ಇಂಟರ್ನೆಟ್ ಮೂಲಕ ಗೂಗಲ್ ಕ್ರೋಮ್ (Google Chrome) ಬ್ರೌಸರ್ ಅನ್ನು ಬಳಸುತ್ತಿದ್ದರೆ ತಕ್ಷಣವೇ ಅಪ್ಡೇಟ್ ಮಾಡಿ. ಕ್ರೋಮ್ ಆ್ಯಪ್‌ನಲ್ಲಿ ಮತ್ತೊಂದು ದೊಡ್ಡ ಹ್ಯಾಕಿಂಗ್ (Hacking) ನಡೆದಿರುವ ಬಗ್ಗೆ ಗೂಗಲ್ (Google) ಆತಂಕ ವ್ಯಕ್ತಪಡಿಸಿದೆ. ಸುಮಾರು ಎರಡು ಶತಕೋಟಿಗೂ ಹೆಚ್ಚು ಗೂಗಲ್ ಕ್ರೋಮ್ ಬಳಕೆದಾರರಿಗೆ ಆಗುವ ತೊಂದರೆಯನ್ನು ಪರಿಹರಿಸುವ ಸಲುವಾಗಿ, ಈ ಕೂಡಲೇ ಗೂಗಲ್ ಕ್ರೋಮ್ ಅನ್ನು ಅಪ್‌ಡೇಟ್ ಮಾಡುವಂತೆ ಗೂಗಲ್ ಕಂಪೆನಿ ಮನವಿ ಮಾಡಿದೆ. CVE-2021-37973 ಹೆಸರಿನ ಭದ್ರತಾ ಲೋಪವು ಬ್ಲಾಗ್‌ನಲ್ಲಿದ್ದು ಲಿನಕ್ಸ್, ಮ್ಯಾಕ್‌ಓಎಸ್ ಹಾಗೂ ವಿಂಡೋಸ್ (Windows) ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಗೂಗಲ್ ಹೇಳಿದೆ.

ನಾವು ಹಿಂದೆ CVE-2021-30563 ಹೆಸರಿನ Zero Day Hack ಬಗ್ಗೆ ಎಚ್ಚರಿಕೆ ನೀಡಿದ್ದೆವು ಮತ್ತು ಈಗ ಇನ್ನೊಂದು ಹ್ಯಾಕ್ ಹೊರಹೊಮ್ಮಿದೆ ಎಂದು ತಿಳಿಸಿದೆ. ಗೂಗಲ್ ಕ್ರೋಮ್‌ನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಹ್ಯಾಕ್ ಕೂಡ ಅಷ್ಟೇ ಅಪಾಯಕಾರಿಯಾಗಿದ್ದು, ಇದನ್ನು CVE-2021-37973 ಎಂದು ಹೆಸರಿಸಲಾಗಿದೆ. ಈ CVE-2021-37973 ತುಂಬಾ ಅಪಾಯಕಾರಿಯಾಗಿದೆ ಎಂದು ಗೂಗಲ್ ಕ್ರೋಮ್ ವಿಭಾಗದ ಬ್ಲಾಗ್​ನಲ್ಲಿ ವರದಿ ಮಾಡುವ ಮೂಲಕ ತಿಳಿಸಿದೆ.

ಈ ವರದಿಯ ಪ್ರಕಾರ, ಸ್ವತ ಗೂಗಲ್ ಉದ್ಯೋಗಿಗಳೇ ಈ ಹ್ಯಾಕ್ ಕುರಿತು ಪತ್ತೆಹಚ್ಚಿದ್ದು, ಸೈಬರ್ ಅಪರಾಧಿಗಳು ಲಾಭ ಪಡೆಯುವ ನಿಟ್ಟಿನಲ್ಲಿ Zero Day Hack Exploite ಮೂಲಕ ಗೂಗಲ್ ಕ್ರೋಮ್ ಅನ್ನು ಬಳಸಿಕೊಳ್ಳಬಹುದು ಎಂದು ಎಚ್ಚರಿಸಿದೆ. ಗೂಗಲ್ ಈ ಭದ್ರತಾ ನ್ಯೂನತೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ. ಗೂಗಲ್ ತನ್ನ ಕ್ರೋಮ್ ಬಳಕೆದಾರರ ಬೇಸ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡಿದ್ದು ಈ ದೋಷಗಳು ಹೊಸ ಅಪ್‌ಗ್ರೇಡ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ದೃಢಪಟ್ಟ ನಂತರವೇ ಲೋಪದೋಷದ ಕುರಿತು ಇನ್ನಷ್ಟು ಮಾಹಿತಿಗಳನ್ನು ಗೂಗಲ್ ನೀಡಲಿದೆ ಎಂಬುದು ತಿಳಿದುಬಂದಿದೆ.

ಪ್ರೊಗ್ರಾಮ್ ಕಾರ್ಯಾಚರಣೆಯ ಸಮಯದಲ್ಲಿ ಡೈನಾಮಿಕ್ ಮೆಮೊರಿಯ ತಪ್ಪಾದ ಬಳಕೆಯಿಂದಾಗಿ ಇಂತಹ ಲೋಪದೋಷಗಳು ಉದ್ಭವಗೊಳ್ಳುತ್ತವೆ ಎಂಬುದು ಗೂಗಲ್ ತಿಳಿಸಿರುವ ಅಂಶವಾಗಿದೆ. ಕ್ಯಾಸ್ಪರ್ಸ್ಕಿಯು ತಿಳಿಸಿರುವಂತೆ ಮೆಮೊರಿಗೆ ಪಾಯಿಂಟರ್ ಅನ್ನು ಕ್ಲಿಯರ್ ಮಾಡದೇ ಇದ್ದರೆ ಮೆಮೊರಿ ಲೊಕೇಶನ್ ಅನ್ನು ಮುಕ್ತಗೊಳಿಸಿಕೊಂಡು ಹ್ಯಾಕರ್‌ಗಳು ಈ ದೋಷವನ್ನು ತಮಗೆ ಬೇಕಾದಂತೆ ಬಳಸಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.

ನಿಮ್ಮ ಗೂಗಲ್ ಕ್ರೋಮ್ ಬ್ರೌಸಿಂಗ್ ಸುರಕ್ಷಿತವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಲು ಈಗಲೇ ನಿಮ್ಮ ಕ್ರೋಮ್ ಬ್ರೌಸರ್ ನ ಸೆಟ್ಟಿಂಗ್ ವಿಭಾಗಕ್ಕೆ ಭೇಟಿ ನೀಡಿ. ನಂತರ ‘ಹೆಲ್ಪ್’ ಮೇಲೆ ಕ್ಲಿಕ್ ಮಾಡಿ. ಈಗ About Google Chrome ಮೇಲೆ ಕ್ಲಿಕ್ಕಿಸಿ. ಅಲ್ಲಿ Google Chrome ವರ್ಶನ್ 94.0.4606.61 ಅಥವಾ ಅದಕ್ಕಿಂತ ಹೆಚ್ಚಿನ ವರ್ಷನ್ ಸುರಕ್ತಿತವಾಗಿದೆ ಎಂದರ್ಥ. ಒಂದು ವೇಳೆ ನಿಮ್ಮ ಬಳಿ ಈ ವರ್ಷನ್ ಇಲ್ಲ ಎಂದಾದಲ್ಲಿ ನಿಮ್ಮ ಕ್ರೋಮ್ ಅನ್ನು ತಕ್ಷಣ ಅಪ್ಡೇಟ್ ಮಾಡಿ.

Samsung Galaxy M52 5G: ಭಾರತದಲ್ಲಿ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G ಸ್ಮಾರ್ಟ್​ಫೋನ್ ಬಿಡುಗಡೆ: ಭರ್ಜರಿ ಆಫರ್​ನಲ್ಲಿ ಲಭ್ಯ

Oppo F19s: 5000mAh ಬ್ಯಾಟರಿ, 48MP ಕ್ಯಾಮೆರಾ: ಒಪ್ಪೋದಿಂದ F19s ಹೆಸರಿನ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ

(Google confirmed a critical security risk with Google Chrome and has warned users to update)