ಮೊಬೈಲ್ ಮತ್ತು ಕಂಪ್ಯೂಟರ್​ನಲ್ಲಿ ಸುಲಭವಾಗಿ ಕನ್ನಡ ಟೈಪ್ ಮಾಡುವುದು ಹೇಗೆ?

|

Updated on: Oct 27, 2023 | 2:38 PM

Kannada Type App: ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಾದರೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕನ್ನಡ ಅಕ್ಷರ ಬರೆಯಲು ಸಾಕಷ್ಟು ಆ್ಯಪ್​ಗಳಿವೆ. ಆದರೆ, ಇವುಗಳಲ್ಲಿ ಎಲ್ಲವೂ ಬೇಗನೆ ಅರ್ಥವಾಗುವ ರೀತಿಯಲ್ಲಿಲ್ಲ. ಅಕ್ಷರಗಳನ್ನು ಹುಡುಕಿ ಟೈಪ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಮೊಬೈಲ್ ಮತ್ತು ಕಂಪ್ಯೂಟರ್​ನಲ್ಲಿ ಸುಲಭವಾಗಿ ಕನ್ನಡ ಟೈಪ್ ಮಾಡುವುದು ಹೇಗೆ?
Kannada Text
Follow us on

ಕಳೆದ ಕೆಲವು ವರ್ಷಗಳ ಹಿಂದೆ ಮೊಬೈಲ್ (Mobile) ಅಥವಾ ಕಂಪ್ಯೂಟರ್​ನಲ್ಲಿ ಕನ್ನಡ ಅಕ್ಷರವನ್ನು ಬರೆಯುವುದು ಕಬ್ಬಿಣದ ಕಡಲೆಯಂತಾಗಿತ್ತು. ಆದರೆ, ಇಂದು ಭಾರತದಲ್ಲಿರುವ ಹೆಚ್ಚಿನ ಭಾಷೆಯನ್ನು ಕಂಪ್ಯೂಟರ್ ಅಥವಾ ಮೊಬೈಲ್​ನಲ್ಲಿ ಅಕ್ಷರ ರೂಪಕ್ಕೆ ತರಲಾಗಿದೆ. ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಾದರೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕನ್ನಡ ಅಕ್ಷರ ಬರೆಯಲು ಸಾಕಷ್ಟು ಆ್ಯಪ್​ಗಳಿವೆ. ಆದರೆ, ಇವುಗಳಲ್ಲಿ ಎಲ್ಲವೂ ಬೇಗನೆ ಅರ್ಥವಾಗುವ ರೀತಿಯಲ್ಲಿಲ್ಲ. ಅಕ್ಷರಗಳನ್ನು ಹುಡುಕಿ ಟೈಪ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ, ನಾವೀಗ ಹೇಳಲಿರುವ ಆ್ಯಪ್​ನಲ್ಲಿ ಸುಲಭವಾಗಿ ಬೇಗನೆ ಕನ್ನಡ ಅಕ್ಷರವನ್ನ ಬರೆಯಬಹುದು.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಜೀ ಬೋರ್ಡ್ ಎಂಬ ಆ್ಯಪ್ ಇರುತ್ತದೆ. ಅದನ್ನ ಡೌನ್ಲೋಡ್ ಮಾಡಿ. ಡೌನ್ಲೋಡ್ ಪೂರ್ಣಗೊಂಡ ನಂತರ ಸೆಟ್ಟಿಂಗ್ ಅನ್ನು ಪೂರ್ಣಗೊಳಿಸಿ. ನಂತರ ಜೀ ಬೋರ್ಡ್ ಕೀಬೋರ್ಡ್ ಅನ್ನು ಆರಿಸಿಕೊಳ್ಳಿ. ಇದರಲ್ಲಿ ಕನ್ನಡ ಭಾಷೆಯನ್ನು ಕೀಬೋರ್ಡ್​ಗೆ ಸೇರಿಸಬೇಕು.

ಈಗ ನಿಮ್ಮ ಮೊಬೈಲ್ ಕನ್ನಡ ಟೈಪಿಂಗ್​ಗೆ ತಯಾರಾಗುತ್ತದೆ. ಹಾಗೆಯೆ ವಾಟ್ಸ್​ಆ್ಯಪ್​ನಲ್ಲಿ ನೀವು ಕನ್ನಡ ಬರೆಯಲು ಬಯಸಿದರೆ ಆ್ಯಪ್​ಗೆ ತೆರಳಿ ಸಂದೇಶ ಬರೆಯುವಲ್ಲಿ ಹೋಗಿ, ಕೀಬೋರ್ಡಿನ ಮೇಲೆ ಇರುವಂತಹ ಮೈಕ್ ಚಿನ್ಹೆಯನ್ನು ಒತ್ತಬೇಕು. ಈಗ ನೀವು ಮಾತನಾಡಿರುವುದು ಕೂಡ ಕನ್ನಡ ಅಕ್ಷರಗಳ ರೂಪದಲ್ಲಿ ಮೂಡಿಬರುತ್ತವೆ.

ಇದನ್ನೂ ಓದಿ
ಚಿನ್ನ ಅಸಲಿ-ನಕಲಿ?: ಆಭರಣ ಖರೀದಿಸುವ ಮುನ್ನ ಈ ಆ್ಯಪ್ ಇನ್​ಸ್ಟಾಲ್ ಮಾಡಿ
ಟೆಕ್ ಮಾರುಕಟ್ಟೆಯಲ್ಲಿ ಸಂಚಲನ: ಬರುತ್ತಿದೆ ಧರಿಸಬಹುದಾದ ಸ್ಮಾರ್ಟ್​ಫೋನ್
ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಶವೋಮಿ 14, ಶವೋಮಿ 14 ಪ್ರೊ: ಬೆಲೆ?
1,39,999 ರೂಪಾಯಿಯ ಈ ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಏನಿದೆ ಇದರಲ್ಲಿ ನೋಡಿ

2024ರ ವೇಳೆಗೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್ ಗ್ಲಾಸ್ ತಯಾರಿಸಲಿದೆ ಕಾರ್ನಿಂಗ್-ಆಪ್ಟಿಮಸ್

ಆದರೆ ಈ ಕೀಬೋರ್ಡ್ ಉಪಯೋಗಿಸುವಾಗ ಇಂಟರ್ನೆಟ್ ಆನ್ ಇರುವುದು ಅತಿ ಅವಶ್ಯಕ. ಹಾಗೆಯೆ ಜೀ ಬೋರ್ಡ್ ಆ್ಯಪ್ ಅನ್ನು ಮೊಬೈಲ್​ನಲ್ಲಿ ಇರುವ ಮೈಕ್ರೋಸಾಫ್ಟ್ ವರ್ಡ್​ನಲ್ಲಿ ಕೂಡ ಬಳಸಬಹುದಾಗಿದೆ. ಕಂಪ್ಯೂಟರ್​ನಲ್ಲಿ ಕನ್ನಡ ಬರೆಯಬೇಕು ಎಂದಾದರೆ ಇಂದು ಹೆಚ್ಚಿನವರು ನುಡಿ ಅನ್ನು ಬಳಸುತ್ತಾರೆ. ಇದು ಸುಲಭವಾಗಿದೆ. ಇದರ ಜೊತೆಗೆ ಲಿಕಿತ್, ಕನ್ನಡ ಇಂಡಿಂಕ್ ಇನ್​ಪುಟ್, ಗೂಗಲ್ ಇಂಡಿಕ್, ಬರಹ ಹೀಗೆ ಕೆಲವೊಂದು ಸಾಫ್ಟ್​ವೇರ್ ಇದೆ.

ಅಂತೆಯೆ ಮೊಬೈಲ್​ನಲ್ಲಿ ಈಗೀಗ ಹೆಚ್ಚಿನ ಜನರು ಜಸ್ಟ್ ಕನ್ನಡ ಆ್ಯಪ್ ಅನ್ನು ಕೂಡ ಬಳಸುತ್ತಿದ್ದಾರೆ. ಆದರೆ, ಆ್ಯಪಲ್ ಐಒಎಸ್​ನಲ್ಲಿ ಕನ್ನಡ ಭಾಷೆ ಬರೆಯುವುದು ಕೊಂಚ ಕಷ್ಟ. ಆಂಡ್ರಾಯ್ಡ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವ ಎಲ್ಲ ಆ್ಯಪ್​ಗಳು ಆ್ಯಪ್​ ಸ್ಟೋರ್​ನಲ್ಲಿ ಇಲ್ಲ. ಜೀ ಬೋರ್ಡ್ ಆ್ಯಪ್ ಐಒಎಸ್​ನಲ್ಲಿ ಇದ್ದರೂ ಅದರಲ್ಲಿ ಕನ್ನಡ ಭಾಷೆ ಆಯ್ಕೆ ನೀಡಲಾಗಿಲ್ಲ. ಬದಲಾಗಿ ಐಒಎಸ್​ನಲ್ಲಿ ಇನ್​ಬಿಲ್ಟ್ ಆಗಿ ಬಂದಿರುವ ಕೀಬೋರ್ಡ್​ನಲ್ಲಿ ಇರುವ ಕನ್ನಡ ಭಾಷೆ ಇತರೆ ಆ್ಯಪ್​ಗಳಿಗೆ ಹೋಲಿಸಿದರೆ ಸುಲಭವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ