ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಚೀನಾ ಮೂಲದ ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ ಇನ್ಫಿನಿಕ್ಸ್ (Infinix) ಇದೀಗ ಭಾರತದಲ್ಲಿ ಹೊಸ ಮೊಬೈಲ್ನೊಂದಿಗೆ ಬಂದಿದೆ. ಒಂದರ ಹಿಂದೆ ಒಂದರಂತೆ ವಿನೂತನ ಫೀಚರ್ಗಳ ಸ್ಮಾರ್ಟ್ಫೋನ್ (Smartphone) ಅನ್ನು ಅನಾವರಣ ಮಾಡುವುದರಲ್ಲಿ ಬ್ಯೂಸಿ ಆಗಿರುವ ಇನ್ಫಿನಿಕ್ಸ್ ಇದೀಗ ದೇಶದಲ್ಲಿ ಹೊಸ ಇನ್ಫಿನಿಕ್ಸ್ ಹಾಟ್ 30 5G (Infinix Hot 30 5G) ಸ್ಮಾರ್ಟ್ಫೋನ್ ಅನ್ನು ರಿಲೀಸ್ ಮಾಡಿದೆ. ಇದುಕೂಡ ಒಂದು ಬಜೆಟ್ ಬೆಲೆಯ ಫೋನಾಗಿದ್ದರೂ ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾ, ಪ್ರೊಸೆಸರ್ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಇನ್ಫಿನಿಕ್ಸ್ ಹಾಟ್ 30 5G ಸ್ಮಾರ್ಟ್ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 4GB RAM + 128GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 12,499 ರೂ. ಇದೆ. ಅಂತೆಯೆ 8GB RAM + 128GB ವೇರಿಯೆಂಟ್ಗೆ 13,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಜೊತೆಗೆ ಇನ್ಫಿನಿಕ್ಸ್ ವಿಶೇಷ ಆಫರ್ ನೀಡುತ್ತಿದ್ದು, 1,000 ರೂ. ಗಳ ಡಿಸ್ಕೌಂಟ್ ಮತ್ತು 6 ತಿಂಗಳ ನೋ ಕಾಸ್ಟ್ ಇಎಮ್ಐ ಆಯ್ಕೆ ಘೋಷಿಸಿದೆ. ಇನ್ಫಿನಿಕ್ಸ್ ಹಾಟ್ 30 5G ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಜುಲೈ 18 ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಸಿಗಲಿದೆ.
Nothing Phone 2: ಬಹುನಿರೀಕ್ಷಿತ ಸೂಪರ್ ಸ್ಮಾರ್ಟ್ಫೋನ್ ನಥಿಂಗ್ ಫೋನ್ 2 ಭಾರತದಲ್ಲಿ ಬಿಡುಗಡೆ
ಫೀಚರ್ಸ್ ಏನಿದೆ?:
ಈ ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ FHD+ ಡಿಸ್ ಪ್ಲೇಯನ್ನು ಹೊಂದಿದೆ. ಇತ್ತೀಚಿನ ಆಪರೇಟಿಂಗ್ ಸಾಫ್ಟ್‌ವೇರ್ XOS 13 ನಲ್ಲಿ ರನ್ ಆಗುತ್ತದೆ, ಇದು Android 13 ಅನ್ನು ಆಧರಿಸಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಅಳವಡಿಸಲಾಗಿದೆ. ಈ ಫೋನ್ ಡ್ಯುಯಲ್ ಸ್ಪೀಕರ್‌ಗಳು ಮತ್ತು DTS ಸೌಂಡ್ ತಂತ್ರಜ್ಞಾನವನ್ನು ಹೊಂದಿದೆ. ಇದು ಗೇಮಿಂಗ್, ಆಡಿಯೋ, ವಿಡಿಯೋಗಳ ಪ್ಲೇ ಆದಾಗ ಅದ್ಭುತ ಅನುಭವವನ್ನು ಒದಗಿಸುತ್ತದೆ.
ಇನ್ಫಿನಿಕ್ಸ್ ಹಾಟ್ 30 5G ಸ್ಮಾರ್ಟ್ಫೋನ್18W ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡದಾದ 6000mAh ಬ್ಯಾಟರಿಯನ್ನು ಹೊಂದಿದೆ. ಫೋನ್ ಪವರ್ ಮ್ಯಾರಥಾನ್ ತಂತ್ರಜ್ಞಾನವನ್ನು ಹೊಂದಿದೆ, 53 ಗಂಟೆಗಳ ಕರೆ, 21 ಗಂಟೆಗಳ ವಿಡಿಯೋ ಸ್ಟ್ರೀಮಿಂಗ್, 13 ಗಂಟೆಗಳ ಗೇಮಿಂಗ್ ಮತ್ತು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 35 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಿದೆ.
50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮತ್ತು ಕ್ವಾಡ್-ಎಲ್ಇಡಿ ಫ್ಲ್ಯಾಷ್, ಮತ್ತು 2K ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲವನ್ನು ನೀಡುತ್ತದೆ. ಸೆಲ್ಫಿಗಾಗಿ, ಎಲ್ಇಡಿ ಫ್ಲ್ಯಾಷ್ನೊಂದಿಗೆ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಅಳವಡಿಸಲಾಗಿದೆ.
ಇನ್ಫಿನಿಕ್ಸ್ ಹಾಟ್ 30 5G ಡ್ಯುಯಲ್ 5G ಸಿಮ್ ಕಾರ್ಡ್‌ಗಳನ್ನು ಸಪೋರ್ಟ್ ಮಾಡುತ್ತದೆ. ಇದು ವೈ-ಫೈ, ಬ್ಲೂಟೂತ್, ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ ಮತ್ತು ಫೇಸ್ ಅನ್‌ಲಾಕ್ ಫೀಚರ್ಸ್ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ