Flipkart Big Saving Days sale: ಇ-ಕಾಮರ್ಸ್ ಪ್ರಿಯರಿಗೆ ಹಬ್ಬವೋ ಹಬ್ಬ: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್ ಘೋಷಣೆ

ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್​ನಲ್ಲಿ ಅನೇಕ ಪ್ರಾಡಕ್ಟ್​ ಉತ್ಪನ್ನಗಳ ಮೇಲಿನ ರಿಯಾಯಿತಿಗಳ ಜೊತೆಗೆ, ಫ್ಲಿಪ್​ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ 10 ಪ್ರತಿಶತ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಲಾಗಿದೆ.

Flipkart Big Saving Days sale: ಇ-ಕಾಮರ್ಸ್ ಪ್ರಿಯರಿಗೆ ಹಬ್ಬವೋ ಹಬ್ಬ: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್ ಘೋಷಣೆ
flipkart big saving days sale
Follow us
Vinay Bhat
|

Updated on: Jul 14, 2023 | 12:50 PM

ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಮೇಳಗಳ ಹಬ್ಬ ಶುರುವಾಗುತ್ತಿದೆ. ನಾಳೆಯಿಂದ (ಜುಲೈ 15) ಅಮೆಜಾನ್ ಇಂಡಿಯಾದಲ್ಲಿ ಬಹುನಿರೀಕ್ಷಿತ ಅಮೆಜಾನ್ ಪ್ರೈಮ್ ಡೇ ಸೇಲ್ (Amazon Prime Day sale) ಶುರುವಾಗಲಿದೆ. ಇದರ ಜೊತೆಗೆ ವಾಲ್ಮಾರ್ಟ್ ಒಡೆತನದ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ (Flipkart Big Saving Days sale) ಘೋಷಣೆ ಆಗಿದೆ. ಇದುಕೂಡ ಜುಲೈ 15 ರಿಂದ ಆರಂಭವಾಗಲಿದ್ದು ಒಟ್ಟು ಐದು ದಿನಗಳ ಕಾಲ ಜುಲೈ 19 ರ ವರೆಗೆ ನಡೆಯಲಿದೆ. ಫ್ಲಿಪ್​ಕಾರ್ಟ್​ನ ಈ ಸೇಲ್​ನಲ್ಲಿ ವಿವಿಧ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು (Smartphones), ಎಲೆಕ್ಟ್ರಾನಿಕ್ಸ್, ಮನೆ ಮತ್ತು ಅಡಿಗೆ ಅಗತ್ಯ ವಸ್ತುಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ಇರಲಿದೆಯಂತೆ.

ಅನೇಕ​ ಉತ್ಪನ್ನಗಳ ಮೇಲಿನ ರಿಯಾಯಿತಿಗಳ ಜೊತೆಗೆ, ಫ್ಲಿಪ್​ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರಿಗೆ 10 ಪ್ರತಿಶತ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಲಾಗಿದೆ. ಇದರ ಜೊತೆಗೆ ಫ್ಯಾಶನ್ ವಸ್ತುಗಳು 50 ರಿಂದ 80 ಶೇಕಡಾ ರಿಯಾಯಿತಿಯೊಂದಿಗೆ ಮತ್ತು ಎಲೆಕ್ಟ್ರಾನಿಕ್ಸ್ ಶೇಕಡಾ 80 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿರುತ್ತದೆ ಎಂದು ಬಹಿರಂಗಪಡಿಸಿದೆ.

UPI Lite: ಗೂಗಲ್ ಪೇಗೂ ಬಂತು ಯುಪಿಐ ಲೈಟ್; ಪಿನ್ ಇಲ್ಲದೇ ಹಣ ಜಿಪೇ ಮಾಡಿ

ಇದನ್ನೂ ಓದಿ
Image
Realme C53: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್: ಜುಲೈ 19ಕ್ಕೆ ಬಿಡುಗಡೆ
Image
Chandrayaan 3: ಚಂದ್ರಯಾನ-3 ಹಿಂದಿರುವ ಮಾಸ್ಟರ್ ಮೈಂಡ್ ವೀರಾ ಮುತ್ತುವೆಲ್ ಯಾರು ಗೊತ್ತೇ?
Image
Nothing Phone 2: ಬಹುನಿರೀಕ್ಷಿತ ಸೂಪರ್ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 2 ಭಾರತದಲ್ಲಿ ಬಿಡುಗಡೆ
Image
Amazon Prime Day Sale: ಅಮೆಜಾನ್ ಪ್ರೈಮ್ ಡೇ ಸೇಲ್​ಗೆ ಒಂದೇ ದಿನ ಬಾಕಿ: ಈ ಬಾರಿ ಶೇ. 75 ರಷ್ಟು ಡಿಸ್ಕೌಂಟ್

ಟಿವಿಗಳು ಮತ್ತು ಉಪಕರಣಗಳು 75 ಪ್ರತಿಶತದವರೆಗೆ ಮತ್ತು ಫ್ಲಿಪ್‌ಕಾರ್ಟ್ ಒರಿಜಿನಲ್‌ಗಳು ಶೇಕಡಾ 80 ರಷ್ಟು ರಿಯಾಯಿತಿಯೊಂದಿಗೆ ಲಭ್ಯವಿರುತ್ತವೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದ ಸಮಯದಲ್ಲಿ, 12 ಗಂಟೆಗೆ, 8 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಸ್ಪ್ಲಾಶ್ ಡೀಲ್‌ಗಳು ಇರುತ್ತವೆ. ಅಂತೆಯೆ ನೀವು ಒಂದೇ ಸಮಯದಲ್ಲಿ ಅನೇಕ ಉತ್ಪನ್ನಗಳನ್ನು ಖರೀದಿಸಿದರೆ 10 ಪ್ರತಿಶತದವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.

ಸ್ಮಾರ್ಟ್​ಫೋನ್ ವಿಭಾಗದಲ್ಲಿ ಫ್ಲಿಪ್‌ಕಾರ್ಟ್ ಇನ್ನೂ ಡೀಲ್‌ಗಳು ಮತ್ತು ಕೊಡುಗೆಗಳನ್ನು ಬಹಿರಂಗಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ 24 ತಿಂಗಳವರೆಗೆ ನೋ ಕಾಸ್ಟ್ EMI ಆಯ್ಕೆ ಇರಲಿದೆ. ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಎಕ್ಸ್​ಚೇಂಜ್ ಆಫರ್ ಲಭ್ಯವಿರುತ್ತವೆ. ವಿವೋ T2x 5G, ರಿಯ್ ಮಿ C55 ಮತ್ತು ಪೋಕೋ M4 5G ನಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಭರ್ಜರಿ ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಫ್ಲಿಪ್‌ಕಾರ್ಟ್ ಪೋಕೋ C50 ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಕಾಣಲಿದೆ ಎನ್ನಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ