Realme C53: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್: ಜುಲೈ 19ಕ್ಕೆ ಬಿಡುಗಡೆ

ರಿಯಲ್ ಮಿ C53 ಸ್ಮಾರ್ಟ್​ಫೋನ್ ನೋಡಲು ಥೇಟ್ ರಿಯಲ್ ಮಿ 9i ಫೋನಿನ ರೀತಿಯಲ್ಲೇ ಇದೆ. ಇದು 18W ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ. USB-C ಚಾರ್ಜಿಂಗ್ ಪೋರ್ಟ್ ಜೊತೆಗೆ, ಆಡಿಯೋ ಫೋನ್ ಜಾಕ್ ಅನ್ನು ಒಳಗೊಂಡಿದೆ.

Realme C53: ಭಾರತಕ್ಕೆ ಬರುತ್ತಿದೆ 108MP ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್: ಜುಲೈ 19ಕ್ಕೆ ಬಿಡುಗಡೆ
Realme C53
Follow us
|

Updated on: Jul 14, 2023 | 12:10 PM

ರಿಯಲ್ ಮಿ (Realme) ಕಂಪನಿ ಒಂದರ ಹಿಂದೆ ಒಂದರಂತೆ ಆಕರ್ಷಕ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ರಿಯಲ್ ಮಿ 11 ಪ್ರೊ+ (Realme 11 Pro+) ಫೋನನ್ನು ಬಿಡುಗಡೆ ಮಾಡಿತ್ತು. ಇದು ಮಾರುಕಟ್ಟೆಯಲ್ಲಿ ಈಗಲೂ ಟ್ರೆಂಡಿಂಗ್​ನಲ್ಲಿದ್ದು ಭರ್ಜರಿ ಸೇಲ್ ಕಾಣುತ್ತಿದೆ. ಹೀಗಿರುವಾಗ ಇದೀಗ ಆಕರ್ಷಕ ಕ್ಯಾಮೆರಾ ಇರುವ ಮತ್ತೊಂದು ಮೊಬೈಲ್ ಲಾಂಚ್ ಮಾಡಲು ಮುಂದಾಗಿದೆ. ಭಾರತದಲ್ಲಿ ಜುಲೈ 19 ಕ್ಕೆ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ರಿಯಲ್ ಮಿ ಸಿ53 (Realme C53) ಮೊಬೈಲ್ ಅನಾವರಣಗೊಳ್ಳಲಿದೆ. ಈ ಫೋನಿನ ಡಿಸೈನ್, ಫೀಚರ್ಸ್ ಕುರಿತ ಕೆಲ ಮಾಹಿತಿ ಸೋರಿಕೆ ಆಗಿದೆ.

ರಿಯಲ್ ಮಿ C53 ಸ್ಮಾರ್ಟ್​ಫೋನ್ ನೋಡಲು ಥೇಟ್ ರಿಯಲ್ ಮಿ 9i ಫೋನಿನ ರೀತಿಯಲ್ಲೇ ಇದೆ. ಇದು 18W ಚಾರ್ಜಿಂಗ್‌ನೊಂದಿಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ. USB-C ಚಾರ್ಜಿಂಗ್ ಪೋರ್ಟ್ ಜೊತೆಗೆ, ಆಡಿಯೋ ಫೋನ್ ಜಾಕ್ ಅನ್ನು ಒಳಗೊಂಡಿದೆ. ಬಲಭಾಗದಲ್ಲಿ ಪವರ್ ಬಟನ್ ಜೊತೆಗೆ ವಾಲ್ಯೂಮ್ ಬಟನ್‌ಗಳನ್ನು ನೀಡಲಾಗಿದೆ. ಇದು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಫೋನ್ 5G ಬೆಂಬಲ ಪಡೆದುಕೊಂಡಿದೆಯೆ ಎಂಬುದು ಸ್ಪಷ್ಟವಾಗಿಲ್ಲ.

Samsung Galaxy S21 FE 5G: ಕ್ವಾಲ್ಕಂ ಪ್ರೊಸೆಸರ್​ನಲ್ಲಿ ಮತ್ತೊಂದು ಸೂಪರ್ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್

ಇದನ್ನೂ ಓದಿ
Image
Chandrayaan 3: ಚಂದ್ರಯಾನ-3 ಹಿಂದಿರುವ ಮಾಸ್ಟರ್ ಮೈಂಡ್ ವೀರಾ ಮುತ್ತುವೆಲ್ ಯಾರು ಗೊತ್ತೇ?
Image
Nothing Phone 2: ಬಹುನಿರೀಕ್ಷಿತ ಸೂಪರ್ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 2 ಭಾರತದಲ್ಲಿ ಬಿಡುಗಡೆ
Image
Amazon Prime Day Sale: ಅಮೆಜಾನ್ ಪ್ರೈಮ್ ಡೇ ಸೇಲ್​ಗೆ ಒಂದೇ ದಿನ ಬಾಕಿ: ಈ ಬಾರಿ ಶೇ. 75 ರಷ್ಟು ಡಿಸ್ಕೌಂಟ್
Image
UPI Lite: ಗೂಗಲ್ ಪೇಗೂ ಬಂತು ಯುಪಿಐ ಲೈಟ್; ಪಿನ್ ಇಲ್ಲದೇ ಹಣ ಜಿಪೇ ಮಾಡಿ

ರಿಯಲ್ ಮಿ C53 ಸ್ಮಾರ್ಟ್​ಫೋನ್​ನ ಬೆಲೆ ಬಹಿರಂಗವಾಗಿಲ್ಲ. ಆದರೆ, ರಿಯಲ್ ಮಿ C-ಸರಣಿಯ ಹಿಂದಿನ ಫೋನ್ ಲಾಂಚ್‌ಗಳ ಆಧಾರದ ಮೇಲೆ, ರಿಯಲ್ ಮಿ C35 ಬೆಲೆ ಸುಮಾರು 12,000 ರೂಪಾಯಿ ಎಂದು ನಾವು ನಿರೀಕ್ಷಿಸಬಹುದು. ಈ ಸರಣಿಯಲ್ಲಿನ ಅತ್ಯಂತ ದುಬಾರಿ ಫೋನ್ ಎಂದರೆ ರಿಯಲ್ ಮಿ C55 ಆಗಿದ್ದು, ಇದರ ಬೆಲೆ 10,999 ರೂ.

ರಿಯಲ್‌ ಮಿ C55 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್‌ ಹೆಚ್‌ಡಿ + ಎಲ್‌ಡಿಸಿ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್‌ ಅಳವಡಿಸಲಾಗಿದ್ದು, ಆಂಡ್ರಾಯ್ಡ್‌ 13 ಆಧಾರಿತ ರಿಯಲ್‌ ಮಿ UI 4.0 ನಲ್ಲಿ ರನ್‌ ಆಗಲಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಆಯ್ಕೆ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್‌ ಸೆನ್ಸರ್‌ ಅಳವಡಿಸಲಾಗಿದೆ.

ರಿಯಲ್‌ ಮಿ C55 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. 29 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಸೈಂಡ್-ಮೌಂಟೆಡ್ ಫಿಂಗರ್​​ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. 3.5mm ಆಡಿಯೋ ಜ್ಯಾಕ್ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್