ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಇನ್ಫಿನಿಕ್ಸ್ (Infinix) ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಹೆಸರುವಾಸಿ. ಇದಕ್ಕಾಗಿಯೆ ಮಾರುಕಟ್ಟೆಯಲ್ಲಿ ಈ ಕಂಪನಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಇನ್ಫಿನಿಕ್ಸ್ ಮೊಬೈಲ್ ಕಂಪನಿ ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 ಸರಣಿ (Infinix Note 12 series) ಅನಾವರಣಮಾಡಿತ್ತು. ಇದರಲ್ಲಿ ಇನ್ಫಿನಿಕ್ಸ್ ನೋಟ್ 12 ಮತ್ತು ಇನ್ಫಿನಿಕ್ಸ್ ನೋಟ್ 12 ಪ್ರೊ ಸ್ಮಾರ್ಟ್ಫೋನ್ಗಳಿದ್ದವು. ಇದೀಗ ಇನ್ಫಿನಿಕ್ಸ್ ನೋಟ್ 12 ಸರಣಿಯನ್ನು ಹೊಸ 5G ಅವತಾರದಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಬರೋಬ್ಬರಿ 108 ಮೆಗಾಫಿಕ್ಸೆಲ್ನ ಆಕರ್ಷಕ ಕ್ಯಾಮೆರಾ (108MP Camera), ಡಿಸ್‌ಪ್ಲೇ, ಭರ್ಜರಿ ಬ್ಯಾಟರಿ ಹಾಗೂ ಪ್ರೊಸೆಸರ್ ಒಳಗೊಂಡ ಈ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಗೆ ಲಭ್ಯವಿರುವುದು ವಿಶೇಷ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಗಳಿವೆ ಎಂಬುದನ್ನು ನೋಡೋಣ.
ಇನ್ಫಿನಿಕ್ಸ್ ನೋಟ್ 12 5G ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, 16 ಮೆಗಾಪಿಕ್ಸೆಲ್ ಸೆನ್ಸಾರ್ ಬಲದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 33W ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಕೂಡ ಇದೆ.
Realme C35: ಭಾರತದಲ್ಲಿ ರಿಯಲ್ ಮಿ C35 6GB, 128GB ಸ್ಟೋರೆಜ್ ಬಿಡುಗಡೆ: ಇದು ಬಜೆಟ್ ಬೆಲೆಯ ಬೆಸ್ಟ್ ಫೋನ್
ಇತ್ತ ಇನ್ಫಿನಿಕ್ಸ್ 12 ಪ್ರೊ 5G ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. 6nm ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದು Quad LED ಫ್ಲ್ಯಾಷ್ ಒಳಗೊಂಡಿದೆ. ಇದಲ್ಲದೆ 16ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಡ್ಯುಯಲ್ LED ಫ್ಲ್ಯಾಷ್ ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ಟೈಪ್-ಸಿ ಫಾಸ್ಟ್ ಚಾರ್ಜರ್ ಬೆಂಬಲಿಸಲಿದೆ. ಒಂದು ಗಂಟೆ 30 ನಿಮಿಷಗಳ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳುತ್ತದೆ.
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 5G ಸ್ಮಾರ್ಟ್‌ಫೋನ್ ಬೆಲೆ 14,999 ರೂ. ಆಗಿದೆ. ಇನ್ಫಿನಿಕ್ಸ್ ನೋಟ್ 12 ಪ್ರೊ 5G ಸ್ಮಾರ್ಟ್‌ಫೋನ್ 17,999 ರೂ. ಬೆಲೆಯನ್ನು ಹೊಂದಿದೆ. ಈ ಎರಡೂ ಫೋನ್‌ಗಳು ಭಾರತದಲ್ಲಿ ಜುಲೈ 14 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿವೆ. ಪ್ರಿ ಬುಕ್ಕಿಂಗ್ ಮಾಡಿದರೆ 1,000 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿ ಮಾಡುವ ಗ್ರಾಹಕರು 1,500 ರೂ. ಆಫರ್ ಪಡದುಕೊಳ್ಳಬಹುದಾಗಿದೆ.
Amazon Prime Day Sale 2022: ಅಮೆಜಾನ್ನಿಂದ ಬಹುನಿರೀಕ್ಷಿತ ಪ್ರೈಮ್ ಡೇ ಸೇಲ್ ಘೋಷಣೆ: ಯಾವಾಗ?, ಏನು ಆಫರ್?