Infinix Note 30 VIP: 108MP ಕ್ಯಾಮೆರಾ, ಬಿಗ್ ಬ್ಯಾಟರಿ: ಇನ್ಫಿನಿಕ್ಸ್ ನೋಟ್‌ 30 VIP 5G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?

ಇನ್ಫಿನಿಕ್ಸ್ ಕಂಪನಿ ಇದೀಗ ಇನ್ಫಿನಿಕ್ಸ್ ನೋಟ್‌ 30 VIP 5G ಸ್ಮಾರ್ಟ್‌ಫೋನ್ (Infinix Note 30 VIP) ಅನ್ನು ಅನಾವರಣ ಮಾಡಿದೆ. ಈ ಫೋನ್ ಡೈಮೆನ್ಸಿಟಿ 8050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

Infinix Note 30 VIP: 108MP ಕ್ಯಾಮೆರಾ, ಬಿಗ್ ಬ್ಯಾಟರಿ: ಇನ್ಫಿನಿಕ್ಸ್ ನೋಟ್‌ 30 VIP 5G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?
Infinix Note 30 VIP
Follow us
|

Updated on: Jun 13, 2023 | 3:15 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಫೋನುಗಳನ್ನು ಬಿಡುಗಡೆ ಮಾಡುವ ಕಂಪನಿಯ ಒಂದು ವರ್ಗವೇ ಇದೆ. ಇದರಲ್ಲಿ ಮುಂಚೂಣಿಯಲ್ಲಿ ಕಾಣಿಸುವುದು ಇನ್ಫಿನಿಕ್ಸ್‌ (Infinix) ಕಂಪನಿ. ಆಕರ್ಷಕ ಫೀಚರ್​ಗಳ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಇನ್ಫಿನಿಕ್ಸ್ ಕಂಪನಿ ಇದೀಗ ಇನ್ಫಿನಿಕ್ಸ್ ನೋಟ್‌ 30 VIP 5G ಸ್ಮಾರ್ಟ್‌ಫೋನ್ (Infinix Note 30 VIP) ಅನ್ನು ಅನಾವರಣ ಮಾಡಿದೆ. ಈ ಫೋನ್ ಡೈಮೆನ್ಸಿಟಿ 8050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ನೀಡಲಾಗಿದೆ ಎಂಬುದನ್ನು ನೋಡೊಣ.

ಬೆಲೆ ಎಷ್ಟು?:

ಇನ್ಫಿನಿಕ್ಸ್ ನೋಟ್‌ 30 VIP 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 256GB ಇಂಟರ್ ಸ್ಟೋರೇಜ್‌ ಆಯ್ಕೆಗೆ USD 299. ಅಂದರೆ ಭಾರತದಲ್ಲಿ ಈ ಫೋನ್‌ ಬೆಲೆ ಅಂದಾಜಿ 24,645ರೂ. ಎನ್ನಬಹುದು. ಇದು ಮ್ಯಾಜಿಕ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ವೈಟ್ ಎಂಬ ಎರಡು ಬಣ್ಣದ ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಕೆಲ ವಾರಗಳ ಬಳಿಕ ಈ ಫೋನ್ ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ.

ಇದನ್ನೂ ಓದಿ
Image
Galaxy F13: 6000mAh ಬ್ಯಾಟರಿ, 50MP ಕ್ಯಾಮೆರಾ: ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌
Image
Nothing Phone 2: ಶವೋಮಿ, ಸ್ಯಾಮ್​ಸಂಗ್​ಗೆ ಶುರುವಾಯಿತು ನಡುಕ: ಬರುತ್ತಿದೆ ನಥಿಂಗ್‌ ಫೋನ್ 2 ಸ್ಮಾರ್ಟ್​ಫೋನ್
Image
Tech Tips: ಫೇಸ್​ಬುಕ್,​ ಇನ್​ಸ್ಟಾಗ್ರಾಮ್​ನಲ್ಲಿ ಹಣ ಕೊಟ್ಟು ಬ್ಲೂ ಟಿಕ್ ಪಡೆಯುವುದು ಹೇಗೆ?: ಇಲ್ಲಿದೆ ಟ್ರಿಕ್
Image
Realme GT Neo 5 Pro: ಬಿಡುಗಡೆಗೆ ಸಜ್ಜಾಗಿ ನಿಂತಿದೆ ರೋಚಕತೆ ಸೃಷ್ಟಿಸಿರುವ ರಿಯಲ್‌ ಮಿ GT ನಿಯೋ 5 ಪ್ರೊ ಸ್ಮಾರ್ಟ್​ಫೋನ್

Google Pixel: ಎಫ್1 ಇನ್ಫೋ ಜೊತೆ ಗೂಗಲ್ ಸಹಭಾಗಿತ್ವ: ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳ ಸರ್ವೀಸ್ ಸಮಸ್ಯೆಗೆ ಸಿಕ್ಕಿತು ಪರಿಹಾರ

ಫೀಚರ್ಸ್ ಏನಿದೆ?:

ಈ ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆಯನ್ನು ಪಡೆದುಕೊಂಡಿದೆ. 900 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್‌ ಫೀಚರ್ ಕೂಡ ನೀಡಲಾಗಿದೆ. ಬೆಲೆಗೆ ತಕ್ಕಂತೆ ಮೀಡಿಯಾ ಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಎಆರ್‌ಎಮ್‌ G77 MC9 ಜಿಪಿಯು ಬಲ ಪಡೆದುಕೊಂಡಿದೆ. ಇತ್ತೀಚಿನ ಆಂಡ್ರಾಯ್ಡ್ 13 ಓಎಸ್‌ ಸಫೋರ್ಟ್‌ ಪಡೆದಿರಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇನ್ಫಿನಿಕ್ಸ್ ನೋಟ್‌ 30 VIP 5G ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 108 ಮೆಗಾ ಪಿಕ್ಸೆಲ್​ನ ಹಿಂಬದಿಯ ಕ್ಯಾಮರಾ ಜೊತೆಗೆ 1/1.67 ಸ್ಯಾಮ್‌ಸಂಗ್‌ HM6 ಸೆನ್ಸರ್‌ ಅಳವಡಿಸಲಾಗಿದೆ. 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಮತ್ತು 2 ಮೆಗಾ ಪಿಕ್ಸೆಲ್ ಪೋರ್ಟ್ರೇಟ್‌ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಈ ಫೋನ್ 68W ವೇಗದ ಚಾರ್ಜಿಂಗ್, 50W ವಾಯರ್‌ಲೆಸ್‌ ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಕಂಪನಿ ಹೇಳಿರುವ ಪ್ರಕಾರ ಇದು ಕೇವಲ 30 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಂತೆ. ಈ ಫೋನ್ 3.5mm ಆಡಿಯೋ ಜ್ಯಾಕ್, ಸ್ಟೀರಿಯೋ ಸ್ಪೀಕರ್‌ಗಳು, ಜಿಬಿಎಲ್‌ ಸೌಂಡ್, ಬ್ಲೂಟೂತ್ 5.2, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್‌ ಪೋರ್ಟ್‌ ಕನೆಕ್ಟಿವಿಟಿ ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ