ಎನ್​ವಿಡಿಯಾ ಭದ್ರಕೋಟೆ ಭೇದಿಸಲು ಇಂಟೆಲ್ ಬಳಿ ಗೌಡಿ-3 ಅಸ್ತ್ರ; ಭಾರತದಲ್ಲಿ ಇನ್ಫೋಸಿಸ್, ಏರ್ಟೆಲ್, ಒಲಾ ಜೊತೆ ಗುತ್ತಿಗೆ

Intel Gaudi 3 vs NVidia H100: ವಿಶ್ವದ ಪ್ರಮುಖ ಚಿಪ್ ಪ್ರೋಸಸರ್ ಕಂಪನಿಯಾದ ಇಂಟೆಲ್ ಇದೀಗ ಗೌಡಿ-3 ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪೂರಕವಾದ ಚಿಪ್ ತಯಾರಿಸಿದೆ. ಈ ಮೂಲಕ ಎನ್​ವಿಡಿಯಾ ಪ್ರಾಬಲ್ಯ ಇರುವ ಮಾರುಕಟ್ಟೆಯಲ್ಲಿ ನೆಲೆಯೂರಲು ಇಂಟೆಲ್ ಪ್ರಯತ್ನ ಆರಂಭಿಸಿದೆ. ಈಗಿರುವ ಹೆಚ್ಚಿನ ಎಐ ಮಾಡಲ್ ಟ್ರೈನಿಂಗ್​ಗೆ ಎನ್​ವಿಡಿಯಾದ ಅಡ್ವಾನ್ಸ್ಡ್ ಚಿಪ್​ಗಳನ್ನು ಬಳಸಲಾಗುತ್ತಿದೆ. ಆದರೆ, ಹೆಚ್ಚಿನ ಚಿಪ್​ಗಳಿಗೆ ಸಾಕಷ್ಟು ಬೇಡಿಕೆ ಇದೆ.

ಎನ್​ವಿಡಿಯಾ ಭದ್ರಕೋಟೆ ಭೇದಿಸಲು ಇಂಟೆಲ್ ಬಳಿ ಗೌಡಿ-3 ಅಸ್ತ್ರ; ಭಾರತದಲ್ಲಿ ಇನ್ಫೋಸಿಸ್, ಏರ್ಟೆಲ್, ಒಲಾ ಜೊತೆ ಗುತ್ತಿಗೆ
ಸೆಮಿಕಂಡಕ್ಟರ್ ಚಿಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 10, 2024 | 2:23 PM

ನವದೆಹಲಿ, ಏಪ್ರಿಲ್ 10: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಬೆಳವಣಿಗೆಗೆ ಬೇಕಾದ ಪ್ರೋಸಸರ್​ಗಳು ಸಾಕಷ್ಟಿಲ್ಲ. ಎನ್​ವಿಡಿಯಾದ ಪ್ರಾಬಲ್ಯ ಇರುವ ಈ ಮಾರುಕಟ್ಟೆಯಲ್ಲಿ ಇಂಟೆಲ್ ಇತ್ಯಾದಿ ಕಂಪನಿಗಳು ನೆಲೆ ಕಂಡುಕೊಳ್ಳಲು ಹೆಣಗುತ್ತಿವೆ. ಇದೇ ವೇಳೆ, ಇಂಟೆಲ್ ಸಂಸ್ಥೆ ಗೌಡಿ-3 (Intel Gaudi-3) ಎಂಬ ಹೊಸ ಎಐ ಚಿಪ್ ಅನ್ನು ಮಾರುಕಟ್ಟೆ ಬಿಡಲು ಯೋಜಿಸುತ್ತಿದೆ. ಎನ್​ವಿಡಿಯಾದ ಎಚ್100 ಪ್ರೋಸಸರ್​ಗಿಂತಲೂ (NVidia H100) ಗೌಡಿ-3 ಶೇ. 50ಕ್ಕಿಂತ ಹೆಚ್ಚು ವೇಗ ಹೊಂದಿದೆ. ಲಾರ್ಜ್ ಲ್ಯಾಂಗ್ವೇಜ್ ಮಾಡಲ್​ಗಳನ್ನು ಹೆಚ್ಚು ವೇಗವಾಗಿ ಇದು ಮಾಡಬಲ್ಲುದು. ಜನರೇಟಿವ್ ಎಐ ಸ್ಪಂದನೆಗಳನ್ನು ಹೆಚ್ಚು ವೇಗವಾಗಿ ಇದು ಗಣಿಸಬಲ್ಲುದು ಎಂದು ಹೇಳಲಾಗುತ್ತಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಪ್ರಬಲ ಚಿಪ್​ಗಳ ಕೊರತೆ ಇದೆ. ಈ ಮಾರುಕಟ್ಟೆಯಲ್ಲಿ ಶೇ. ಎನ್​ವಿಡಿಯಾ ಶೇ. 83ರಷ್ಟು ಪಾಲು ಹೊಂದಿದೆ. ಬಹಳ ಉತ್ಕೃಷ್ಟವಾದ ಚಿಪ್​ಗಳನ್ನು ಎನ್​ವಿಡಿಯಾ ತಯಾರಿಸುತ್ತದೆ. ಇಂಟೆಲ್ ಮತ್ತು ಎಎಂಡಿ ಸಂಸ್ಥೆಗಳೂ ಕೂಡ ಎಐ ಚಿಪ್​ಗಳನ್ನು ತಯಾರಿಸುತ್ತವಾದರೂ ಎನ್​ವಿಡಿಯಾದಷ್ಟು ಪರಿಪಕ್ವವಾದ ಮತ್ತು ಪರಿಣಾಮಕಾರಿಯಾದ ಚಿಪ್​ಗಳು ಹಾಗೂ ಪೂರಕ ಸಾಫ್ಟ್​ವೇರ್ ಹೊರತರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂಟೆಲ್​ನ ಗೌಡಿ-3 ಚಿಪ್ ಒಂದಷ್ಟು ಭರವಸೆ ಮೂಡಿಸಿದೆ.

ಇದನ್ನೂ ಓದಿ: ಮಾನವ ವರ್ಸಸ್ ಯಂತ್ರ: ಇನ್ನೊಂದೇ ವರ್ಷದಲ್ಲಿ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಮೀರಿಸುತ್ತೆ ಎಐ: ಇದು ಇಲಾನ್ ಮಸ್ಕ್ ಭವಿಷ್ಯ

ಸದ್ಯ ವಿಶ್ವದ ಬಹುತೇಕ ಪ್ರಮುಖ ಕಂಪನಿಗಳೆಲ್ಲವೂ ಎಐ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿವೆ. ಈ ಸಂದರ್ಭದಲ್ಲಿ ಇಂಟೆಲ್​ಗೆ ಗೌಡಿ-3 ಉತ್ತಮ ಸರಕಾಗಬಹುದು. ಡೆಲ್, ಎಚ್​ಪಿ, ಲೆನೋವು, ಸೂಪರ್ ಮೈಕ್ರೋ ಮೊದಲಾದ ಕಂಪನಿಗಳು ಗೌಡಿ-3 ಚಿಪ್ ಬಳಸಲು ಮುಂದಾಗಿವೆ.

ಭಾರತದ ಐಟಿ ಸರ್ವಸ್ ಕಂಪನಿಯಾದ ಇನ್ಫೋಸಿಸ್ ಇದೀಗ ತನ್ನ ಟೋಪಾಜ್ ಎಂಬ ಎಐ ಸರ್ವಿಸ್​ಗೆ ಇಂಟೆಲ್​ನ 5ನೇ ತಲೆಮಾರಿನ ಕ್ಸಿಯಾನ್ ಪ್ರೋಸಸರ್, ಇಂಟೆಲ್ ಗೌಡಿ 2 ಎಐ ಆಕ್ಸಲರೇಟರ್ಸ್, ಇಂಟೆಲ್ ಕೋರ್ ಅಲ್ಟ್ರಾ ತಂತ್ರಜ್ಞಾನದ ಸಹಾಯ ಪಡೆಯಲಿದೆ.

ಇದನ್ನೂ ಓದಿ: ಫೇಸ್​ಬುಕ್, ಇನ್ಸ್​ಟಾದ ನಿಮ್ಮ ಪೋಸ್ಟ್​ಗಳು ವಿದೇಶೀ ಸರ್ವರ್​ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್

ಓಲಾ ಕೃತ್ರಿಮ್​ನ ಎಐ ಮಾಡಲ್​ಗೆ ಪ್ರೀ ಟ್ರೈನಿಂಗ್ ನೀಡಲು ಇಂಟೆಲ್​ನ ಚಿಪ್​ಗಳನ್ನು ಬಳಸಲಾಗುತ್ತದೆ. 10 ಭಾರತೀಯ ಭಾಷೆಗಳಲ್ಲಿ ಕೃತ್ರಿಮ್​ನ ಲಾರ್ಜ್ ಲ್ಯಾಂಗ್ವೇಜ್ ಮಾಡಲ್​ಗೆ ಟ್ರೈನಿಂಗ್ ಮಾಡಲಾಗುತ್ತಿದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ