AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone 13: ದಿಢೀರ್ ಔಟ್-ಆಫ್-ಸ್ಟಾಕ್: ಫ್ಲಿಪ್​ಕಾರ್ಟ್, ಅಮೆಜಾನ್​ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಐಫೋನ್ 13 ನಾಪತ್ತೆ

Flipkart Big Billion Days Sale 2022: ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈ ತಿಂಗಳ ಅಂತ್ಯದ ವರೆಗೆ ನಡೆಯಲಿದೆ. ಮೇಳದ ಆರಂಭದಲ್ಲಿ ಐಫೋನ್ 13 ಬಿಗ್ ಡಿಸ್ಕೌಂಟ್​ನಲ್ಲಿ ಮಾರಾಟ ಆಗಿತ್ತಿತ್ತು.

iPhone 13: ದಿಢೀರ್ ಔಟ್-ಆಫ್-ಸ್ಟಾಕ್: ಫ್ಲಿಪ್​ಕಾರ್ಟ್, ಅಮೆಜಾನ್​ನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಐಫೋನ್ 13 ನಾಪತ್ತೆ
iPhone 13 Flipkart
TV9 Web
| Updated By: Vinay Bhat|

Updated on:Sep 26, 2022 | 1:43 PM

Share

ಪ್ರಸಿದ್ಧ ಇ ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart Big Billion Days Sale 2022) ಮತ್ತು ಅಮೆಜಾನ್ ಇಂಡಿಯಾದಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon India’s Great Indian Festival sale) ಶುಕ್ರವಾರದಿಂದ ಎಲ್ಲರಿಗೂ ಲೈವ್ ಆಗಿದೆ. ವಿಶೇಷವೆಂದರೆ ಈ ಸೇಲ್ ಅಡಿಯಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಟಿವಿಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವು ಸಾಧನಗಳು ಶೇಕಡಾ 80 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಈ ಸೇಲ್​ಗಳು ಆರಂಭ ಆಗುವುದಕ್ಕೂ ಮುನ್ನ ಐಫೋನ್​ಗಳು (iPhone) ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರಂತೆ ಸೇಲ್ ಈ ಆಫರ್ ಕೂಡ ಗ್ರಾಹಕರಿಗೆ ಸಿಕ್ಕಿತು. ಆದರೆ, ಅದು ಕೆಲವು ಕ್ಷಣಗಳು ಮಾತ್ರ.

ಫ್ಲಿಪ್‌ಕಾರ್ಟ್​ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈ ತಿಂಗಳ ಅಂತ್ಯದ ವರೆಗೆ ನಡೆಯಲಿದೆ. ಮೇಳದ ಆರಂಭದಲ್ಲಿ ಐಫೋನ್ 13 ಬಿಗ್ ಡಿಸ್ಕೌಂಟ್​ನಲ್ಲಿ ಮಾರಾಟ ಆಗಿತ್ತಿತ್ತು. ಫ್ಲಿಪ್​ಕಾರ್ಟ್​ನಲ್ಲಿ ಇದೇ ಮೊದಲ ಬಾರಿ ಐಫೋನ್ 13 128GB ಮಾದರಿ ಕೇವಲ 46,990 ರೂ. ಗೆ ಸೇಲ್ ಕಾಣುತ್ತಿತ್ತು. ಆದರೆ, ಈ ಆಫರ್ ಕೆಲವೇ ನಿಮಿಷಗಳ ಕಾಲ ಮಾತ್ರ ನೀಡಲಾಗಿದೆ. ನಂತರ ಇದರ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ. ಆದರೀಗ ಐಫೋನ್ 13 128GB ಮಾದರಿ ಔಟ್ ಆಫ್ ಸ್ಟಾಕ್ ಎಂದು ಬರುತ್ತಿದೆ. ಅತ್ತ ಅಮೆಜಾನ್​ನಲ್ಲಿ ಐಫೋನ್ 13 ಮಾಡೆಲ್ ಖರೀದಿಗೇ ಲಭ್ಯವಿಲ್ಲ.

ಆದರೆ, ಈ ಬಗ್ಗೆ ಆ್ಯಪಲ್ ಕಂಪನಿ ಇದುವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇಷ್ಟೊಂದು ಕಡಿಮೆ ಬೆಲೆಗೆ ಐಫೋನ್ ಮಾರಾಟ ಆಗುತ್ತಿರುವುದನ್ನು ಗಮನಿಸಿ ಆ್ಯಪಲ್ ಕಂಪನಿ ಔಟ್ ಆಫ್ ಸ್ಟಾಕ್ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಐಫೋನ್ 13 128GB ಮಾತ್ರ ಸೇಲ್ ಆಗುತ್ತಿದ್ದು, 256GB ಮತ್ತು 512GB ಖರೀದಿಸುವವರೆ ಇಲ್ಲದಂತಾಗಿದೆ. ಈಗ ಐಫೋನ್ 13 ದೆಹಲಿ ಸೇರಿದಂತೆ ದೇಶದ ಅನೇಕ ಕಡೆಗಳಿಗೆ ಡೆಲಿವರಿ ಸೌಲಭ್ಯ ಇಲ್ಲ ಎಂಬ ಆಯ್ಕೆ ಕೂಡ ತೋರಿಸುತ್ತಿದೆ.

ಇದನ್ನೂ ಓದಿ
Image
Tecno Pova Neo 5G: ಅತಿ ಕಡಿಮೆ ಬೆಲೆಯ 5G ಸ್ಮಾರ್ಟ್​ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಯಾವುದು?, ಬೆಲೆ ಎಷ್ಟು?
Image
ಅತಿಯಾದ ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್ ಬಳಕೆಯಿಂದ ಏನಾಗುತ್ತೇ?: ಅಚ್ಚರಿ ವಿಚಾರ ಬಹಿರಂಗ
Image
Big Billion Days Sale: ಹಿಂದೆಂದೂ ಇರದ ಆಫರ್: ಕೇವಲ 999 ರೂ. ಗೆ ಈ ಟಾಪ್ ಬ್ರಾಂಡ್ ಸ್ಮಾರ್ಟ್​ ಟಿವಿ ನಿಮ್ಮದಾಗಿಸಿ
Image
OnePlus 10 Pro 5G: ಧಮಾಕ ಆಫರ್: ಅರ್ಧ ಗಂಟೆಯಲ್ಲಿ ಫುಲ್ ಚಾರ್ಜ್ ಆಗುವ ಈ ಫೋನಿಗೆ ಭರ್ಜರಿ ಡಿಸ್ಕೌಂಟ್

ಫ್ಲಿಪ್​ಕಾರ್ಟ್​ನಲ್ಲಿ ಸದ್ಯಕ್ಕೆ 256GB ಮತ್ತು 512GB ಮಾದರಿಗಳು ಕ್ರಮವಾಗಿ 66,990 ರೂ. ಮತ್ತು 86,990 ರೂ. ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ ಫ್ಲಿಪ್‌ಕಾರ್ಟ್ ಆಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡಿದರೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಇತ್ತ ಅಮೆಜಾನ್​ನಲ್ಲಿ ಐಫೋನ್ 13 ಯಾವುದೇ ಮಾದರಿಗಳು ಖರೀದಿಗೆ ಲಭ್ಯವಿಲ್ಲ. ಬದಲಿಗೆ, ಐಫೋನ್ 12 ಸರಣಿ, ಐಫೋನ್ 13 Pro ಮತ್ತು ಐಫೋನ್ 11 ಮಾದರಿಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಎಸ್​ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಟ್​ನಲ್ಲಿ ಖರೀದಿಸಿದರೆ ಶೇ. 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಇತ್ತ ಆ್ಯಪಲ್ ಕಂಪನಿ ಇಂದಿನಿಂದ ದೀಪಾವಳಿ ಮಾರಾಟವನ್ನು ಆಯೋಜಿಸುತ್ತಿದೆ. ಇದರಲ್ಲಿ ಆ್ಯಪಲ್ ಕಂಪನಿಯ 41,990 ರೂ. ಗಿಂತ ಹೆಚ್ಚಿನ ಉತ್ಪನ್ನಗಳ ಮೇಲೆ ಶೇಕಡಾ 7 ರಷ್ಟು ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಐಫೋನ್ ಮಾಡೆಲ್‌ಗಳು, ಮ್ಯಾಕ್‌ಬುಕ್‌ಗಳು, ಐಪ್ಯಾಡ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಎಲ್ಲಾ ಉತ್ಪನ್ನಗಳಲ್ಲಿ ಕೊಡುಗೆಗಳು ಲಭ್ಯವಿವೆ.

Published On - 1:43 pm, Mon, 26 September 22

Daily Devotional: ದಕ್ಷಿಣಾಯನದ ಮಹತ್ವ ಹಾಗೂ ಇದರ ಫಲ ತಿಳಿಯಿರಿ
Daily Devotional: ದಕ್ಷಿಣಾಯನದ ಮಹತ್ವ ಹಾಗೂ ಇದರ ಫಲ ತಿಳಿಯಿರಿ
ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು
ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು