Joker Virus: ಈ 14 ಆ್ಯಪ್ ನಿಮ್ಮಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ: ಪ್ಲೇ ಸ್ಟೋರ್​ನಲ್ಲಿ ಕಾಣಿಸಿದೆ ಜೋಕರ್ ವೈರಸ್

Joker Malware Is Back: ಅನೇಕರು ಈಗಾಗಲೇ ಅವುಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ನೀವು ಕೂಡ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ ತಕ್ಷಣ ಅವುಗಳನ್ನು ತೆಗೆದು ಹಾಕಿ. ಇಲ್ಲದಿದ್ದರೆ ನಿಮ್ಮ ಮೊಬೈಲ್ ಫೋನ್ ಟ್ರೋಜನ್ ಜೋಕರ್ ದಾಳಿಗೆ ತುತ್ತಾಗಬಹುದು.

Joker Virus: ಈ 14 ಆ್ಯಪ್ ನಿಮ್ಮಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ: ಪ್ಲೇ ಸ್ಟೋರ್​ನಲ್ಲಿ ಕಾಣಿಸಿದೆ ಜೋಕರ್ ವೈರಸ್
Joker Virus

ಜೋಕರ್‌ (Joker virus) ಹೆಸರಿನ ಅಪಾಯಕಾರಿ ಮಾಲ್‌ವೇರ್‌ ಮತ್ತೊಮ್ಮೆ ಗೂಗಲ್‌ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿವೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್​ಗಳನ್ನು (Smartphone) ನಿರಂತರವಾಗಿ ಗುರಿಯಾಗಿಸುವ ಮಾಲ್‌ವೇರ್‌ಗಳಲ್ಲಿ ಜೋಕರ್ ಕೂಡಾ ಒಂದು. ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್‌ಗಳ ಸಂಶೋಧಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಮಾಲ್‌ವೇರ್ ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಿದ್ದಾರೆ. ಆ್ಯಪ್‌ಗಳಲ್ಲಿರುವ ಟ್ರೋಜನ್ ಜೋಕರ್ ಮಾಲ್‌ವೇರ್ (Malware) ಅನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ಈ 14 ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ‌ (Google Play store) ತೆಗೆದುಹಾಕಿದೆ. ಸ್ಮಾರ್ಟ್​ಫೋನ್ ಬಳಕೆದಾರರು ಈ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ಸೂಚನೆ ನೀಡಿದೆ. ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ಕಿಯ ((Kaspersky) ಮಾಲ್‌ವೇರ್ ವಿಶ್ಲೇಷಕರಾದ ಟಟ್ಯಾನಾ ಶಿಶ್ಕೋವ (Tatyana Shishkova) ಅವರು ಈ ಅಪ್ಲಿಕೇಶನ್‌ಗಳು ಟ್ರೋಜನ್ ಜೋಕರ್ ಮಾಲ್‌ವೇರ್‌ಗೆ ಒಳಗಾಗಿರುವುದನ್ನು ಗುರುತಿಸಿದ್ದಾರೆ.

ಇತ್ತೀಚೆಗೆ, ಅನೇಕ ಸ್ಕ್ವಿಡ್ ಆಟದ ಬಳಕೆದಾರರು ಮಾಲ್‌ವೇರ್‌ನೊಂದಿಗೆ ಸೈಬರ್ ಅಪರಾಧಿಗಳಿಂದ ಇದೇ ರೀತಿಯ ದಾಳಿಯನ್ನು ಎದುರಿಸುತ್ತಿದ್ದಾರೆ. ಈ ವಿಷಯ ಬೆಳಕಿಗೆ ಬಂದ ನಂತರ ಪ್ಲೇ ಸ್ಟೋರ್ ಅನ್ನು ಹೊಂದಿರುವ ಗೂಗಲ್ ಈಗಾಗಲೇ ಆ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದೆ. ಆತಂಕಕಾರಿ ಸಂಗತಿಯೆಂದರೆ, ಲಕ್ಷಾಂತರ ಜನರು ಈಗಾಗಲೇ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಮತ್ತು ಪ್ರಸ್ತುತ ಅವುಗಳನ್ನು ಬಳಸುತ್ತಿದ್ದಾರಂತೆ.

ಅನೇಕರು ಈಗಾಗಲೇ ಅವುಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ನೀವು ಕೂಡ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ ತಕ್ಷಣ ಅವುಗಳನ್ನು ತೆಗೆದು ಹಾಕಿ. ಇಲ್ಲದಿದ್ದರೆ ನಿಮ್ಮ ಮೊಬೈಲ್ ಫೋನ್ ಟ್ರೋಜನ್ ಜೋಕರ್ ದಾಳಿಗೆ ತುತ್ತಾಗಬಹುದು.

Super-Click VPN, Volume Boosting Hearing Aid, Battery Charging Animation Bubble Effects, Flashlight Flash Alert on Call, Easy PDF Scanner, Smart TV Remote, Halloween Coloring, Classic Emoji Keyboard, Volume Booster Louder Sound Equalizer, Super Hero-Effect, Battery Charging Animation Wallpaper, Dazzling Keyboard, EmojiOne Keyboard, Now QRCode Scan

ಈ ಆ್ಯಪ್ ರಹಸ್ಯವಾಗಿ ಜಾಹೀರಾತು ವೆಬ್‌ಸೈಟ್‌ಗಳೊಂದಿಗೆ ಸಂವಹನದ ಆರಂಭಕ್ಕೆ ಪ್ರಚೋದನೆ ನೀಡುತ್ತದೆ. ಬಾಧೆಗೀಡಾದ ಫೋನ್‌ನ ಎಸ್​ಎಮ್​ಎಸ್​ ಸಂದೇಶಗಳನ್ನು ಕದಿಯುತ್ತದೆ, ಸಂಪರ್ಕ ಸಂಖ್ಯೆಯ ಪಟ್ಟಿ ಮತ್ತು ಸಾಧನದ ಮಾಹಿತಿಯನ್ನೂ ಪಡೆದುಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇತ್ತೀಚೆಗೆ ನಿರ್ಬಂಧಿಸಲಾದ ಕೆಲವು ಅಪ್ಲಿಕೇಶನ್‌ಗಳಲ್ಲಿ ಎಮೋಜಿಒನ್ ಕೀಬೋರ್ಡ್ ಮತ್ತು ನೌ ಕ್ಯೂಆರ್‌ಕೋಡ್ ಸ್ಕ್ಯಾನ್ ಗಳನ್ನು ಕ್ರಮವಾಗಿ 50,000 ಮತ್ತು 10,000 ಕ್ಕಿಂತ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲಾಗಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿ ಇನ್​ಸ್ಟಾಲ್ ಆಗಿದ್ದರೆ ತಕ್ಷಣವೇ ಅವುಗಳನ್ನು ಅನ್‌ಇನ್​ಸ್ಟಾಲ್ ಮಾಡಿ.

WhatsApp: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಬಹುನಿರೀಕ್ಷೆಯ ಫೀಚರ್: ಹೊಸ ಅಪ್ಡೇಟ್​ನಲ್ಲಿದೆ ಬೊಂಬಾಟ್ ಆಯ್ಕೆ

(Joker virus is back to haunt Google Play Store delete this 14 Apps immediately)

Click on your DTH Provider to Add TV9 Kannada