ಭಾರತೀಯ ಗ್ರಾಹಕರ ಕೈ ಸೇರಲು ಸಿದ್ಧವಾಗಿದೆ Mi ಸೂಪರ್​ ಫೋನ್​, ಎರಡು ಡಿಸ್​ಪ್ಲೇ, ವೈರ್​ಲೆಸ್​ ಚಾರ್ಜಿಂಗ್​ ಸೇರಿದಂತೆ ಅತ್ಯಾಧುನಿಕ ಸೌಲಭ್ಯ

ಕೆಲ ಮೂಲಗಳ ಪ್ರಕಾರ ಈ ಮೊಬೈಲ್​ನಲ್ಲಿ 5ಜಿ ಸೌಲಭ್ಯ ಇರುವುದರ ಜೊತೆಗೆ ವೈರ್​ಲೆಸ್ ಚಾರ್ಜಿಂಗ್ ಹಾಗೂ ಹಿಂಬದಿ ಕ್ಯಾಮೆರಾಗಳಿಂದ ಸೆಲ್ಫಿ ತೆಗೆದುಕೊಳ್ಳಲು ಸಹಕಾರಿಯಾಗಲೆಂದು ಹಿಂಭಾಗದಲ್ಲೊಂದು ಡಿಸ್​ಪ್ಲೇ ಹಾಗೂ ವಾಟರ್​ ಫ್ರೂಫ್ ಸಾಮರ್ಥ್ಯ ಇದೆ.

ಭಾರತೀಯ ಗ್ರಾಹಕರ ಕೈ ಸೇರಲು ಸಿದ್ಧವಾಗಿದೆ Mi ಸೂಪರ್​ ಫೋನ್​, ಎರಡು ಡಿಸ್​ಪ್ಲೇ, ವೈರ್​ಲೆಸ್​ ಚಾರ್ಜಿಂಗ್​ ಸೇರಿದಂತೆ ಅತ್ಯಾಧುನಿಕ ಸೌಲಭ್ಯ
ಬಿಡುಗಡೆಗೆ ಸಜ್ಜಾಗಿರುವ ಎಂಐ 11 ಅಲ್ಟ್ರಾ
Skanda

| Edited By: ganapathi bhat

Apr 02, 2021 | 4:49 PM

ಕಳೆದ ಕೆಲ ವರ್ಷಗಳಿಂದ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ದಾಪುಗಾಲಿಕ್ಕುತ್ತಾ ಗ್ರಾಹಕರ ಕಣ್ಮನ ಸೆಳೆಯುತ್ತಿರುವ ಎಂಐ ಕಂಪೆನಿ ಇದೀಗ ಮತ್ತೊಂದು ಹೊಸ ಸ್ಮಾರ್ಟ್​ಫೋನ್ ಮೂಲಕ ಸಂಚಲನ ಮೂಡಿಸಲು ಸಿದ್ಧವಾಗಿ ನಿಂತಿದೆ. ಎಂಐ ಕಂಪೆನಿ ಚೀನಾದ ಮೂಲದ್ದೆಂಬ ಕಾರಣಕ್ಕೆ ನಡುವೆ ಒಂದಷ್ಟು ಜನ ವಿರೋಧದ ಧ್ವನಿ ಎತ್ತಿದರಾದರೂ ನೂತನ ವೈಶಿಷ್ಟ್ಯತೆಗಳ ಮೂಲಕ ಜನರು ಮಾರುಹೋಗುವಂತೆ ಮಾಡಿದ ಎಂಐ ಸದ್ಯ ನಿರಾತಂಕವಾಗಿ ಭಾರತೀಯ ಗ್ರಾಹಕರ ಕೈಗಳಲ್ಲಿ ನಲಿದಾಡುತ್ತಿದೆ.

ಪ್ರಸ್ತುತ ಎಂಐ ಕಂಪೆನಿ Mi 11 Ultraಎಂಬ ಹೊಚ್ಚಹೊಸ ಉತ್ಪನ್ನದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಕಲ ತಯಾರಿಗಳನ್ನೂ ನಡೆಸಿದ್ದು ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ Mi 11 Ultra ಬೆಲೆ ₹70,000 ಇರಲಿದೆ. ಕೆಲ ದಿನಗಳ ಹಿಂದಷ್ಟೇ Mi 11 pro ಹಾಗೂ Mi 11 Lite 5G ಜೊತೆಗೆ ಚೀನಾದಲ್ಲಿ ಧೂಳೆಬ್ಬಿಸಿರುವ ಈ ಮಾದರಿ ಜಾಗತಿಕ ಮಟ್ಟದಲ್ಲಿ ಮೊಬೈಲ್ ಪ್ರಿಯರ ಗಮನ ಸೆಳೆದಿದೆ.

ಶಿಯೋಮಿ ಸಂಸ್ಥೆ 50 ಮೆಗಾಪಿಕ್ಸೆಲ್ ಪ್ರೈಮರಿ ಸ್ಯಾಮ್​ಸಂಗ್ GN2 ಕ್ಯಾಮೆರಾ ಸೆನ್ಸಾರ್, 2K AMOLED ಡಿಸ್​ಪ್ಲೇ, ಹಿಂಬದಿಯಲ್ಲೊಂದು ಸೆಕೆಂಡರಿ ಡಿಸ್​ಪ್ಲೇ ಹಾಗೂ Qualcomm’s Snapdragon 888 SoC ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಮೊಬೈಲ್​ನಲ್ಲಿ ಅಳವಡಿಸಿರುವುದು ಭಾರೀ ನಿರೀಕ್ಷೆ ಮೂಡಿಸಲು ಕಾರಣವಾಗಿದೆ. ಸಂಸ್ಥೆಗೆ ಆಪ್ತವಾದ ಕೆಲ ಮೂಲಗಳು ಈಗಾಗಲೇ ಬಿಟ್ಟುಕೊಟ್ಟ ಮಾಹಿತಿ ಪ್ರಕಾರ ಶಿಯೋಮಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಇದೀಗ ಅತಿ ದುಬಾರಿ ಬೆಲೆ ಸ್ಮಾರ್ಟ್​ಫೋನ್ ಬಿಡುಗಡೆ ಮಾಡುವ ಕೆಲಸಕ್ಕೆ ಕೈ ಹಾಕುತ್ತಿದೆ. ಅತ್ಯಾಧುನಿಕ ಸೌಲಭ್ಯಗಳಿಗೆ ಒತ್ತು ನೀಡಿರುವ ಕಾರಣ Mi 11 Ultra ಬೆಲೆ ಕನಿಷ್ಟ ₹70 ಸಾವಿರ ಇರಲಿದೆ ಎಂಬುದು ಸಹ ಬಹುತೇಕ ನಿಗದಿಯಾಗಿದೆ. ಈ ಕಾರಣಕ್ಕಾಗಿಯೇ ಎಂಐ ಇದನ್ನು ಸೂಪರ್ ಫೋನ್ ಎಂದು ಬಿಂಬಿಸುತ್ತಿದೆ.

ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಇದೇ ಮಾದರಿಯ ಮೊಬೈಲ್​ ಭಾರತೀಯ ಮೌಲ್ಯದಲ್ಲಿ ₹67 ಸಾವಿರ ಆರಂಭಿಕ ಬೆಲೆ ಹೊಂದಿದೆ. 8GB RAM + 256GB ಸಂಗ್ರಹ ಸಾಮರ್ಥ್ಯ ಹೊಂದಿದ ಫೋನ್ ಸುಮಾರು ₹67 ಸಾವಿರಕ್ಕೆ ಸಿಕ್ಕರೆ 12GB RAM + 256GB ಸಂಗ್ರಹ ಸಾಮರ್ಥ್ಯವುಳ್ಳ ಫೋನ್ ಸುಮಾರು ₹72,600ಕ್ಕೆ ಹಾಗೂ 12GB RAM + 512GB ಸಂಗ್ರಹ ಸಾಮರ್ಥ್ಯ ಹೊಂದಿರುವ ಫೋನ್ ಸುಮಾರು ₹78,200ಕ್ಕೆ ಲಭ್ಯವಿದೆ. ಇನ್ನು ಕೆಲ ಮೂಲಗಳ ಪ್ರಕಾರ ಈ ಮೊಬೈಲ್​ನಲ್ಲಿ 5ಜಿ ಸೌಲಭ್ಯ ಇರುವುದರ ಜೊತೆಗೆ ವೈರ್​ಲೆಸ್ ಚಾರ್ಜಿಂಗ್ ಹಾಗೂ ಹಿಂಬದಿ ಕ್ಯಾಮೆರಾಗಳಿಂದ ಸೆಲ್ಫಿ ತೆಗೆದುಕೊಳ್ಳಲು ಸಹಕಾರಿಯಾಗಲೆಂದು ಹಿಂಭಾಗದಲ್ಲೊಂದು ಡಿಸ್​ಪ್ಲೇ ಹಾಗೂ ವಾಟರ್​ ಫ್ರೂಫ್ ಸಾಮರ್ಥ್ಯ ಇದೆ.

ಒಟ್ಟಾರೆಯಾಗಿ ಸ್ಯಾಮ್​ಸಂಗ್​ ಹಾಗೂ ಒನ್​ಪ್ಲಸ್​ ಕಂಪೆನಿಗಳ ಮೊಬೈಲ್​ಗಳಿಗೆ ಸೆಡ್ಡು ಹೊಡೆಯಲು ಸರ್ವಸನ್ನದ್ಧವಾಗಿರುವ Mi 11 Ultra ಸೂಪರ್​ಫೋನ್​ಗೆ ಭಾರತೀಯ ಗ್ರಾಹಕರು ಹೇಗೆ ಸ್ಪಂದಿಸಲಿದ್ದಾರೆ. ಪ್ರತಿಸ್ಪರ್ಧಿಗಳಿಗೆ ಇದು ಹೇಗೆ ಪೈಪೋಟಿ ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Mi 11 ಸೀರಿಸ್​ನಲ್ಲಿ ಹೊಸ ಮೂರು ಮಾಡೆಲ್​ಗಳು ಮಾರುಕಟ್ಟೆಗೆ; 12GB RAM, 512GB ಸ್ಟೋರೆಜ್​!

(Mi 11 Ultra Superphone ready to mark its footprints in Indian Market soon)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada