WhatsApp Update: ಹೊಸ ವರ್ಷದ ಪ್ರಯುಕ್ತ ಬರುತ್ತಿದೆ ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್: ನಿಮಗೆ ಸಿಗಲಿದೆ ಈ ಅಚ್ಚರಿ ಫೀಚರ್

WhatsApp New Feature: ವಾಟ್ಸ್​ಆ್ಯಪ್​ನ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್‌ ಎಮೋಜಿ ಐಕಾನ್‌ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ.

WhatsApp Update: ಹೊಸ ವರ್ಷದ ಪ್ರಯುಕ್ತ ಬರುತ್ತಿದೆ ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್: ನಿಮಗೆ ಸಿಗಲಿದೆ ಈ ಅಚ್ಚರಿ ಫೀಚರ್
WhatsApp
Follow us
TV9 Web
| Updated By: Vinay Bhat

Updated on: Dec 25, 2021 | 3:33 PM

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ (facebook) ಮೆಟಾ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp)​ ಈಗೀಗ ಹೊಸ ಹೊಸ ಅಪ್ಡೇಟ್​ಗಳನ್ನು ನೀಡುತ್ತಿದೆ. ಸದ್ಯ ಇದೀಗ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸ್​ಆ್ಯಪ್ ಮುಂದಾಗಿದೆ. ಹೊಸ ವರ್ಷದ (New Year) ಪ್ರಯುಕ್ತ ಹೊಸ ಅಪ್ಡೇಟ್ ವಾಟ್ಸ್​ಆ್ಯಪ್​ನಲ್ಲಿ ಬರಲಿದೆ. WaBetaInfo ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ ವಾಟ್ಸ್​ಆ್ಯಪ್​ ಶೀಘ್ರದಲ್ಲೇ ಫೇಸ್​ಬುಕ್​ನಲ್ಲಿರುವಂತೆಯೆ ಮೆಸೇಜ್‌ ರಿಯಾಕ್ಷನ್‌ (Whatsapp Message Reactions) ಫೀಚರ್ಸ್‌ ಅನ್ನು ಪರಿಚಯಿಸಲಿದೆ. ಈಗಾಗಲೇ ಇದರ ಪರೀಕ್ಷಾ ಹಂತಕೂಡ ಮುಕ್ತಾಯಗೊಂಡಿದ್ದು, ಮುಂದಿನ ಅಪ್ಡೇಟ್​ನಲ್ಲಿ ಬಳಕೆದಾರರಿಗೆ ಸಿಗುವ ಅಂದಾಜಿದೆ.

ಈಗಾಗಲೇ ಇನ್​ಸ್ಟಾಗ್ರಾಮ್, ಫೇಸ್​ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್​ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್​ಆ್ಯಪ್​ ಕೂಡ ಸದ್ಯದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೇಜ್‌ ರಿಯಾಕ್ಷನ್‌ ಸೇರಿಸಲು ಸಿದ್ಧತೆ ನಡೆಸಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗೆಗಿನ ಫೋಟೋ ಒಂದು ಈಗ ವೈರಲ್ ಆಗಿದೆ.

ವಾಟ್ಸ್​ಆ್ಯಪ್​ನ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್‌ ಎಮೋಜಿ ಐಕಾನ್‌ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ. ಅಂದರೆ ಎಮೋಜಿಗಳ ರಿಯಾಕ್ಷನ್​ಗಾಗಿ ನೀವು ಸಂದೇಶವನ್ನು ಲಾಂಗ್‌ ಪ್ರೆಸ್‌ ಮಾಡಬೇಕಾಗುತ್ತದೆ. ಪಾಪ್ ಅಪ್ ಆಗುವ ಯಾವುದೇ ಎಮೋಜಿಗಳಿಂದ ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಮೆಚ್ಚಿನದನ್ನು ನೀವು ಆಯ್ಕೆ ಮಾಡಿದ ನಂತರ, ನೀವು ಯಾರ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದೀರೋ ಅವರು ಅದೇ ಪ್ರತಿಕ್ರಿಯೆಗೆ ಅಧಿಸೂಚನೆಯನ್ನು ಪಡೆಯುತ್ತೀರಿ.

ಇದರಲ್ಲಿ ಲವ್ ಸಿಂಬಲ್ ಸೇರಿದಂತೆ ಒಟ್ಟು ಆರು ರಿಯಾಕ್ಷನ್ ಇರಲಿದೆ ಎಂದು ಹೇಳಲಾಗಿದೆ. ಸದ್ಯ ಈ ಹೊಸ ಫೀಚರ್ಸ್‌ ಆಯ್ಕೆಗೆ ನೀವು ಹೊಸ ಆವೃತ್ತಿಯ ವಾಟ್ಸ್​ಆ್ಯಪ್​ಗೆ ಅಪ್ಡೇಟ್‌ ಆಗ ಬೇಕಾಗುತ್ತದೆ. ವಾಟ್ಸ್​ಆ್ಯಪ್​ ನೀವು ಪ್ರತಿಕ್ರಿಯೆಯನ್ನು ಬೆಂಬಲಿಸದ ಹಳೆಯ ಆವೃತ್ತಿಯನ್ನು ಬಳಸುತ್ತಿರುವ ಎಚ್ಚರಿಕೆಯ ಸಂದೇಶವನ್ನು ಪ್ರದರ್ಶಿಸಲಿದೆ. ಈ ಫೀಚರ್ಸ್‌ ಮೊದಲು ವಾಟ್ಸ್​ಆ್ಯಪ್​ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಮತ್ತು ನಂತರ ಐಒಎಸ್ ಬಳಕೆದಾರರಿಗೆ ಲಭ್ಯವಿರುತ್ತದೆ.

ಪ್ರಸ್ತುತ ಈ ಫೀಚರ್ಸ್​ನ ಪರೀಕ್ಷಾ ಹಂತ ಮುಗಿದಿದ್ದು ಕೆಲವೇ ದಿನಗಳಲ್ಲಿ  ಅಪ್‌ಡೇಟ್‌ನಲ್ಲಿ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ನಿಂದಾಗಿ ನಿಮಗೆ ಬಂದ ಸಂದೇಶಗಳಿಗೆ ತ್ವರಿತವಾಗಿ ಎಮೊಜಿಗಳ ಮೂಲಕ ಉತ್ತರಿಸಲು ಸಾಧ್ಯವಾಗಲಿದೆ. ಇದರಿಂದ ನಿಮ್ಮ ಚಾಟ್‌ ಸಂಭಾಷಣೆ ಇನ್ನಷ್ಟು ಉಲ್ಲಾಸದಾಯಕವಾಗಿರಲಿದೆ ಎಂದು ಹೇಳಲಾಗುತ್ತಿದೆ.

Xiaomi 12 Series: ರಿಲೀಸ್ ಕೂಡ ಆಗಿಲ್ಲ: ಈ ಸ್ಮಾರ್ಟ್​ಫೋನ್ ಮೇಲೆ​​ 2 ಲಕ್ಷಕ್ಕೂ ಅಧಿಕ ಮುಂಗಡ ಬುಕ್ಕಿಂಗ್

Paytm Cashback Offer: ತಕ್ಷಣವೇ ಪೇಟಿಎಂನಿಂದ ರಿಚಾರ್ಜ್ ಮಾಡಿ: ಸಿಗಲಿದೆ ಬರೋಬ್ಬರಿ 1000 ರೂ ಕ್ಯಾಶ್​ಬ್ಯಾಕ್​

(New Year WhatsApp Update Users soon Allow Users to React to Messages Reactions Info Tab Spotted)

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು