ಸರಿಯಾಗಿ 10 ದಿನಗಳ ಹಿಂದೆ ಬಿಡುಗಡೆ ಆಗಿ ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆಯನ್ನು ಅಲುಗಾಡಿಸುತ್ತಿರುವ ನಥಿಂಗ್ ಕಂಪನಿಯ ಎರಡನೇ ಮೊಬೈಲ್ ನಥಿಂಗ್ ಫೋನ್ 2 (Nothing Phone 2) ಇದೀಗ ಮಾರಾಟ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ (Flipkart) ಮೂಲಕ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಸಿಗುತ್ತಿದೆ. ಪ್ರಿ ಬುಕ್ಕಿಂಗ್ನಲ್ಲೇ ಸಾಕಷ್ಟು ಸದ್ದು ಮಾಡಿದ್ದ ಈ ಫೋನ್ ಭರ್ಜರಿ ಸೇಲ್ ಆಗುವುದು ಖಚಿತ. ಮೊದಲ ಸೇಲ್ ಪ್ರಯುಕ್ತ ಆಕರ್ಷಕ ಡಿಸ್ಕೌಂಟ್ ಆಫರ್ ಕೂಡ ಘೋಷಣೆ ಮಾಡಲಾಗಿದ್ದು, ಖರೀದಿಸುವ ಪ್ಲಾನ್ನಲ್ಲಿದ್ದರೆ ಸೋಲ್ಡ್ ಆಗುವ ಮುನ್ನ ಪಡೆದುಕೊಳ್ಳಿ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಲೆ ಎಷ್ಟು?:
ನಥಿಂಗ್ ಫೋನ್ 2 ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಸೇಲ್ ಕಾಣುತ್ತಿದೆ. ಇದರ 8GB RAM + 128GB ಸ್ಟೋರೇಜ್ ಮಾದರಿಗೆ 44,999 ರೂ. ಇದೆ. ಹಾಗೆಯೆ ಇದರ 12GB RAM + 256GB ವೇರಿಯೆಂಟ್ಗೆ 49,999 ರೂ. ನಿಗದಿ ಮಾಡಲಾಗಿದೆ. ಕೊನೆಯದಾಗಿ ಟಾಪ್ ಎಂಡ್ ಮಾಡೆಲ್ 12GB RAM + 512GB ಸ್ಟೋರೇಜ್ಗೆ 54,999 ರೂ. ಇದೆ. ಭರ್ಜರಿ ಆಫರ್ ಕೂಡ ಘೋಷಿಸಲಾಗಿದ್ದು, ನೀವು ಸಿಟಿ, ಹೆಚ್ಡಿಎಫ್ಸಿ ಅಥವಾ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಪಡೆದುಕೊಂಡರೆ 3,000 ರೂಪಾಯಿಗಳ ದೊಡ್ಡ ರಿಯಾಯಿತಿಯನ್ನು ಪಡೆಯಬಹುದು. ಅಂತೆಯೆ ಈ ಆಫರ್ ಎರಡು ವೇರಿಯೆಂಟ್ಗೆ ಮಾತ್ರ ಲಭ್ಯವಿದೆ.
Tech Tips: ನಿಮ್ಮ ಸ್ಮಾರ್ಟ್ಫೋನ್ ಡಿಸ್ ಪ್ಲೇ ಸ್ಕ್ರಾಚ್ ಆಗಿದ್ರೆ ಜಸ್ಟ್ ಹೀಗೆ ಮಾಡಿ ಸಾಕು
ಫೀಚರ್ಸ್ ಏನಿದೆ?:
ನಥಿಂಗ್ ಫೋನ್ (2) 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ LTPO OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080×2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಿಂದ ಕೂಡಿದೆ. ರಿಫ್ರೆಶ್ ದರವು ಸ್ವಯಂಚಾಲಿತವಾಗಿ 1Hz ಮತ್ತು 120Hz ನಡುವೆ ನೀಡಲಾಗಿದೆ. 240Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಕಳೆದ ವರ್ಷ ಬಿಡುಗಡೆ ಆದ ಸ್ನಾಪ್ಡ್ರಾಗನ್ 8+ Gen 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್ 13 OS ನಲ್ಲಿ ರನ್ ಆಗುತ್ತಿದೆ.
ಆಕರ್ಷಕವಾದ ಕ್ಯಾಮೆರಾ ನೀಡಲಾಗಿದ್ದು, ಇದು 1/1.56-ಇಂಚಿನ ಸೋನಿ IMX890 ಸೆನ್ಸಾರ್ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ ನಯವಾದ ವಿಡಿಯೋಗಳಿಗಾಗಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಆಯ್ಕೆ ನೀಡಲಾಗಿದೆ. 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವು 1/2.76-ಇಂಚಿನ ಸ್ಯಾಮ್‌ಸಂಗ್ JN1 ಸೆನ್ಸಾರ್ನ EIS ಜೊತೆಗೆ ಬರುತ್ತದೆ. ಇದು 4K ಮಾದರಿಯಲ್ಲಿ ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ.
ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದು 45W ವೇಗದ ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜ್‌ಗೆ ಬೆಂಬಲದೊಂದಿಗೆ 4,700mAh ಬ್ಯಾಟರಿ ಆಯ್ಕೆಯನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ