Oppo Reno 10 5G Series: ಒಂದೇ ದಿನ ಮೂರು ಭರ್ಜರಿ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದ ಒಪ್ಪೋ: ಕ್ಯಾಮೆರಾ ಮಾತ್ರ ಬೆಂಕಿ

|

Updated on: Jul 10, 2023 | 1:41 PM

Oppo Reno 10+ 5G: ಒಪ್ಪೋ ರೆನೋ 10 5ಜಿ, ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ ಸ್ಮಾರ್ಟ್​ಫೋನ್​ಗಳು ಇಂದು ಭಾರತದಲ್ಲಿ ಅನಾವರಣಗೊಂಡಿದೆ. ಈ ಫೋನಿಗಳು ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ವರೆಗೆ ಇದೆ.

Oppo Reno 10 5G Series: ಒಂದೇ ದಿನ ಮೂರು ಭರ್ಜರಿ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿದ ಒಪ್ಪೋ: ಕ್ಯಾಮೆರಾ ಮಾತ್ರ ಬೆಂಕಿ
Oppo reno 10 series
Follow us on

ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್​ಫೋನ್ ತಯಾರಿಕ ಕಂಪನಿ ಒಪ್ಪೋ (Oppo) ಭಾರತದಲ್ಲಿ ಇಂದು ಒಂದೇ ದಿನ ಮೂರು ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಒಪ್ಪೋ ರೆನೋ 10 5ಜಿ (Oppo Reno 10 5G), ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ (Oppo Reno 10+ 5G) ಮೊಬೈಲ್​ಗಳು ದೇಶದಲ್ಲಿ ಅನಾವರಣಗೊಂಡಿದೆ. ಈ ಮೂರೂ ಫೋನುಗಳಲ್ಲಿ ಕ್ಯಾಮೆರಾ ಅದ್ಭುತವಾಗಿದ್ದು, ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ. ಸೋನಿ ಲೆನ್ಸ್ ಅಳವಡಿಸಲಾಗಿದೆ. ಈ ಫೋನಿಗಳು ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ವರೆಗೆ ಇದೆ. ಹಾಗಾದರೆ ಈ ಸ್ಮಾರ್ಟ್​ಫೋನ್​ಗಳ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಒಪ್ಪೋ ರೆನೋ 10 Pro+ 5G ಫೋನಿನ 12GB RAM +256GB ಸ್ಟೋರೇಜ್ ಮಾದರಿಗಾಗಿ ಭಾರತದಲ್ಲಿ 54,999 ರೂ. ಇದೆ. ಒಪ್ಪೋ ರೆನೊ 10 ಪ್ರೊ 5G ಯ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 39,999 ರೂ. ನಿಗದಿ ಮಾಡಲಾಗಿದೆ. ಈ ಎರಡೂ ಪ್ರೊ ಮಾದರಿಗಳು ಗ್ಲಾಸಿ ಪರ್ಪಲ್ ಮತ್ತು ಸಿಲ್ವರ್ ಗ್ರೇ ಶೇಡ್‌ಗಳಲ್ಲಿ ಬರುತ್ತದೆ. ಒಪ್ಪೋ ರೆನೋ 10 5G ಬೆಲೆಯನ್ನು ಜುಲೈ 20 ರಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಿಸಲಾಗುವುದು ಎಂದು ಕಂಪನಿ ಹೇಳಿದೆ. ಇದು ಐಸ್ ಬ್ಲೂ ಮತ್ತು ಸಿಲ್ವರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.

ಇದನ್ನೂ ಓದಿ
Tech Tips: ಒಂದು ವಾಟ್ಸ್​ಆ್ಯಪ್ ಖಾತೆಯನ್ನು ಒಮ್ಮೆಲೆ ಎಷ್ಟು ಕಡೆಯಲ್ಲಿ ತೆರೆದಿಟ್ಟುಕೊಳ್ಳಬಹುದು?
Jio Data Booster Plans: ನಿಮ್ಮಲ್ಲಿ ಜಿಯೋ ಸಿಮ್ ಇದೆಯಾ?: ಎರಡು ಧಮಾಕ ಪ್ಲಾನ್ ಪರಿಚಯಿಸಿದೆ ರಿಲಯನ್ಸ್
WhatsApp Web: ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಭರ್ಜರಿ ಸುದ್ದಿ: ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ
Realme GT Neo 5 Pro: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬಲಿಷ್ಠವಾದ ರಿಯಲ್‌ ಮಿ GT ನಿಯೋ 5 ಪ್ರೊ ಸ್ಮಾರ್ಟ್​ಫೋನ್

Realme GT Neo 5 Pro: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬಲಿಷ್ಠವಾದ ರಿಯಲ್‌ ಮಿ GT ನಿಯೋ 5 ಪ್ರೊ ಸ್ಮಾರ್ಟ್​ಫೋನ್

ಒಪ್ಪೋ ರೆನೋ 10 ಪ್ರೊ 5G ಮತ್ತು ಒಪ್ಪೋ ರೆನೋ 10 ಪ್ರೊ+ 5G ಸ್ಮಾರ್ಟ್​ಫೋನ್​ಗಳು ಇದೇ ಜುಲೈ 13 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, Oppo ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ದೇಶದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಮಾರಾಟವಾಗಲಿದೆ.

ಒಪ್ಪೋ ರೆನೋ 10 ಪ್ರೊ, ರೆನೋ 10 ಪ್ರೊ+ ಫೀಚರ್ಸ್:

ಡಿಸ್ ಪ್ಲೇ: ರೆನೋ 10 ಪ್ರೋ 6.74-ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದರೆ, ರೆನೋ 10 ಪ್ರೊ+ 6.7-ಇಂಚಿನ ಡಿಸ್ ಪ್ಲೇ ಹೊಂದಿದೆ. ಎರಡು ಫೋನ್‌ಗಳು 120Hz ರಿಫ್ರೆಶ್ ದರದೊಂದಿಗೆ OLED AMOLED ಡಿಸ್‌ಪ್ಲೇ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಒಳಗೊಂಡಿದೆ.

ಪ್ರೊಸೆಸರ್: ರೆನೋ 10 ಪ್ರೋ+ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ, ರೆನೋ 10 ಪ್ರೋ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ರೆನೋ 10 ಪ್ರೋ ColorOS 13.1 ಮೂಲಕ ರನ್ ಆದರೆ, ರೆನೋ 10 ಪ್ರೋ+ ನಲ್ಲಿ ColorOS 13 ನೀಡಲಾಗಿದೆ.

ಕ್ಯಾಮೆರಾಗಳು: ಕ್ಯಾಮೆರಾ ವಿಭಾಗದಲ್ಲಿ, ರೆನೋ 10 ಪ್ರೋ+ 50MP Sony IMX890 ಪ್ರಾಥಮಿಕ ಸಂವೇದಕವನ್ನು ಹೊಂದಿದೆ, 64MP ಟೆಲಿಫೋಟೋ ಲೆನ್ಸ್, 8MP ಅಲ್ಟ್ರಾವೈಡ್ ಆಂಗಲ್ ಲೆನ್ಸ್ ನೀಡಲಾಗಿದೆ. ರೆನೋ 10 ಪ್ರೋ ಕೂಡ ಇದೇ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆದರೆ ಇದು 32MP ಟೆಲಿಫೋಟೋ ಲೆನ್ಸ್ ಆಗಿದೆ. ಸೆಲ್ಫಿಗಳಿಗಾಗಿ, ಎರಡು ಫೋನ್‌ಗಳಲ್ಲಿ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ.

ಬ್ಯಾಟರಿ, ಚಾರ್ಜಿಂಗ್: ರೆನೋ 10 ಪ್ರೋ 80W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 4,600mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 28 ನಿಮಿಷಗಳಲ್ಲಿ ಶೇ. 100 ರಷ್ಟು ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿದೆ. ರೆನೋ 10 ಪ್ರೋ+ 100W SUPERVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡದಾದ 4,700mAh ಬ್ಯಾಟರಿಯನ್ನು ಹೊಂದಿದೆ. ಇದು 27 ನಿಮಿಷಗಳಲ್ಲಿ ಶೇ. 100 ರಷ್ಟು ಚಾರ್ಜ್ ಮಾಡುತ್ತಂತೆ.

ಒಪ್ಪೋ ರೆನೋ 10 ಫೀಚರ್ಸ್:

ಡಿಸ್ ಪ್ಲೇ: ಒಪ್ಪೋ ರೆನೋ 10 6.7-ಇಂಚಿನ AMOLED ಕರ್ವ್ಡ್ ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ.

ಪ್ರೊಸೆಸರ್: ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್ ನೀಡಲಾಗಿದೆ. ಇದು ಆಂಡ್ರಾಯ್ಡ್ 13 ಅನ್ನು ಆಧರಿಸಿದ ColorOS 13 ಮೂಲಕ ರನ್ ಆಗುತ್ತದೆ.

ಕ್ಯಾಮೆರಾ: ಒಪ್ಪೋ ರೆನೋ 10 ಫೋನಿನಲ್ಲಿ 64MP ಪ್ರಾಥಮಿಕ ಕ್ಯಾಮೆರಾ, 32MP ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಕೂಡ ಸೆಲ್ಫಿಗಳಿಗಾಗಿ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ: ಒಪ್ಪೋ ರೆನೋ 10 ನಲ್ಲಿ 5,000mAh ಬ್ಯಾಟರಿ ನೀಡಲಾಗಿದೆ. ಇದು 67W SUPERVOOC ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದು 47 ನಿಮಿಷಗಳಲ್ಲಿ 100 ಪ್ರತಿಶತ ಚಾರ್ಜ್ ಆಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ