Realme 9 Pro Plus: ಸೋನಿ ಸೆನ್ಸಾರ್ ಕ್ಯಾಮೆರಾ ಇರುವ ರಿಯಲ್‌ ಮಿ 9 ಪ್ರೊ+ ಖರೀದಿಸಬಹುದೇ?: ಬಹುಜನರ ಪ್ರಶ್ನೆಗೆ ಇಲ್ಲಿದೆ ಉತ್ತರ

| Updated By: Vinay Bhat

Updated on: Feb 22, 2022 | 6:38 AM

Realme 9 Pro Plus Camera: ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನಿನ ಮುಖ್ಯ ಹೈಲೇಟ್ ಕ್ಯಾಮೆರಾ ಆಗಿದೆ. ಇದು 50 ಮೆಗಾಫಿಕ್ಸೆಲ್​ನ ಸೋನಿ IMX766 ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಮೊಬೈಲ್ ಫೋಟೋಗ್ರಫಿಗೆ ಸದ್ಯದ ಆಂಡ್ರಾಯ್ಡ್ ಫೋನ್​ನಲ್ಲಿ ಲಭ್ಯಯಿರುವ ಬೆಸ್ಟ್ ಆಯ್ಕೆ ಇದಾಗಿದೆ.

Realme 9 Pro Plus: ಸೋನಿ ಸೆನ್ಸಾರ್ ಕ್ಯಾಮೆರಾ ಇರುವ ರಿಯಲ್‌ ಮಿ 9 ಪ್ರೊ+ ಖರೀದಿಸಬಹುದೇ?: ಬಹುಜನರ ಪ್ರಶ್ನೆಗೆ ಇಲ್ಲಿದೆ ಉತ್ತರ
Realme 9 Pro Plus
Follow us on

ವಾರಗಳ ಹಿಂದೆಯಷ್ಟೆ ರಿಯಲ್ ಮಿ ಕಂಪನಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಹೊಸ ರಿಯಲ್‌ ಮಿ 9 ಪ್ರೊ 5G (Realme 9 Pro 5G) ಮತ್ತು ರಿಯಲ್‌ ಮಿ 9 ಪ್ರೊ + 5G (Realme 9 Pro+ 5G) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿತ್ತು. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಎರಡೂ ಫೋನ್ ಪೈಕಿ ರಿಯಲ್‌ ಮಿ 9 ಪ್ರೊ + 5G ಈಗ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಈ ಫೋನ್ ಸೇಲ್ ಆರಂಭಿಸಿದೆ. ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಬಲವನ್ನು ಪಡೆದುಕೊಂಡಿರುವ ರಿಯಲ್‌ ಮಿ 9 ಪ್ರೊ + 5G ಫೋನಿನ ಪ್ರಮುಖ ಹೈಲೇಟ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹಾಟ್‌ಬೀಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಅಂದರೆ ಇದು ಹೃದಯ ಬಡಿತ ಪತ್ತೆ ಮತ್ತು ರೆಕಾರ್ಡಿಂಗ್ ಅನ್ನು ಒದಗಿಸುತ್ತದೆ. ಎಂಟು ವಿಭಿನ್ನ ಮಾದರಿಯ ಹಾರ್ಟ್‌ಬೀಟ್‌ ವಿಶ್ಯುಯಲ್‌ ಲೇಬಲ್‌ಗಳನ್ನು ಒಳಗೊಂಡಿದೆ. ಈ ಫೋನಿನ ಮತ್ತೊಂದು ಹೈಲೇಟ್ ಕ್ಯಾಮೆರಾ ಆಗಿದ್ದು, ಇದು ಸೋನಿ IMX766 ಸೆನ್ಸಾರ್ ಸಾಮರ್ಥ್ಯ ಹೊಂದಿದೆ.

ಏನು ವಿಶೇಷತೆ?:

ರಿಯಲ್‌ ಮಿ 9 ಪ್ರೊ+ 5G ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಇದು 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಆಕ್ಟಾ-ಕೋರ್ ಮೀಡಿಯಾಟೆಕ್‌ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಬಲವನ್ನು ಪಡೆಉಕೊಂಡಿದ್ದು, ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಈ ಫೋನಿನ ಮತ್ತೊಂದು ಪ್ರಮುಖ ಹೈಲೇಟ್ ಕ್ಯಾಮೆರಾ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲಿಸಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಸೆನ್ಸಾರ್‌ f/2.2 ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಇದಲ್ಲದೆ 16-ಮೆಗಾಪಿಕ್ಸೆಲ್ ಸೋನಿ IMX471 ಸೆಲ್ಫಿ ಕ್ಯಾಮೆರಾ ಹೊಂದಿದೆ.

ಇನ್ನು ಈ ಸ್ಮಾರ್ಟ್‌ಫೋನಿನ ಪ್ರೈಮೆರಿ ಕ್ಯಾಮೆರಾ ಪ್ರೊಲೈಟ್‌ ಇಮೇಜಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಉತ್ತಮ ಬೆಳಕಿನ ಸೇವನೆಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 60W ಫಾಸ್ಟ್ ಚಾರ್ಜರ್ ನೀಡಲಾಗಿದೆ.

ಬೆಲೆ ಎಷ್ಟು?:

ಭಾರತದಲ್ಲಿ ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ರೂಪಾಂತರದ ಆಯ್ಕೆಯ ಬೆಲೆ 24,999 ರೂ., 8GB RAM ಮತ್ತು128GB ಸ್ಟೊರೇಜ್ ಸಾಮರ್ಥ್ಯಕ್ಕೆ 26,999 ರೂ. ಇದೆ. ಅಂತೆಯೆ 8GB RAM ಮತ್ತು 256GB ಮಾಡೆಲ್ ಬೆಲೆ 28,999 ರೂ. ಆಗಿದೆ. ರಿಯಲ್‌ ಮಿ 9 ಪ್ರೊ + ಫೆಬ್ರವರಿ 21 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ. ಈ ಫೋನ್‌ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌, ರಿಯಲ್‌ ಮಿ.ಕಾಮ್‌ ಸೈಟ್‌ಗಳಲ್ಲಿ ಖರೀದಿಸಬಹುದು.

ಖರೀದಿಸಬಹುದೇ?:

ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನಿನ ಮುಖ್ಯ ಹೈಲೇಟ್ ಕ್ಯಾಮೆರಾ ಆಗಿದೆ. ಇದು 50 ಮೆಗಾಫಿಕ್ಸೆಲ್​ನ ಸೋನಿ IMX766 ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಮೊಬೈಲ್ ಫೋಟೋಗ್ರಫಿಗೆ ಸದ್ಯದ ಆಂಡ್ರಾಯ್ಡ್ ಫೋನ್​ನಲ್ಲಿ ಲಭ್ಯಯಿರುವ ಬೆಸ್ಟ್ ಆಯ್ಕೆ ಇದಾಗಿದೆ. ಇದರಲ್ಲಿರುವ ನೈಟ್​ ಮೋಡ್ ಆಯ್ಕೆ ಕೂಡ ಅತ್ಯುತ್ತಮವಾಗಿದೆ. ಇದರಲ್ಲಿರುವ ಮೀಡಿಯಾಟೆಕ್‌ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಹೊಸ ವರ್ಷನ್ ಆಗಿದ್ದು ಫೋನಿನ ಕಾರ್ಯನಿರ್ವಹಣೆ ಕೂಡ ಬೆಸ್ಟ್ ಆಗಿದೆ. ಗೇಮಿಂಗ್​ಗೆ ಕೂಡ ಇದು ಸಪೋರ್ಟ್ ಮಾಡುತ್ತದೆ. ಗೇಮ್​ಗೆಂದೇ ಮೊಬೈಲ್ ಕೊಂಡುಕೊಳ್ಳುತ್ತಿದ್ದರೆ ಇದು ಉತ್ತಮ ಆಯ್ಕೆಯಲ್ಲ. 6.4 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದ್ದು ಸಿನಿಮಾ ವೀಕ್ಷಣೆಗೆ ಹೇಳಿ ಮಾಡಿಸಿದ್ದು. ಒಟ್ಟಾರೆಯಾಗಿ ನೀವು ಒಂದು ಮಧ್ಯಮ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಫೋನ್ ಖರೀದಿಸುವ ಪ್ಲಾನ್​ನಲ್ಲಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.

Redmi Note 11S: 108MP ಕ್ಯಾಮೆರಾ, ಬೆಲೆ ಕೇವಲ 16,499: ಇದೇ ಮೊದಲ ಬಾರಿಗೆ ಸೇಲ್ ಆಗುತ್ತಿದೆ ರೆಡ್ಮಿ ನೋಟ್‌ 11S

Vivo V23e 5G: 44MP ಸೆಲ್ಫೀ ಕ್ಯಾಮೆರಾ, 44W ಫಾಸ್ಟ್ ಚಾರ್ಜರ್: ಭಾರತದಲ್ಲಿ ರಿಲೀಸ್ ಆಯ್ತು ವಿವೋ V23e ಸ್ಮಾರ್ಟ್‌ಫೋನ್‌