Realme C51: ಬಜೆಟ್ ಬೆಲೆಗೆ ಭರ್ಜರಿ ಕ್ಯಾಮೆರಾ ಫೋನ್: ಬಿಡುಗಡೆ ಆಯಿತು ರಿಯಲ್ ಮಿ C51 ಸ್ಮಾರ್ಟ್​ಫೋನ್

|

Updated on: Jul 25, 2023 | 2:29 PM

ರಿಯಲ್ ಮಿ C51 ಸ್ಮಾರ್ಟ್​ಫೋನ್ ಸದ್ಯಕ್ಕೆ ಚೀನಾದ ತೈವಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆಯಂತೆ. ಈ ಫೋನ್ ಏಕೈಕ 4GB RAM + 64GB ಸ್ಟೋರೇಜ್ ರೂಪಾಂತರದಲ್ಲಿ ರಿಲೀಸ್ ಆಗಿದೆ.

Realme C51: ಬಜೆಟ್ ಬೆಲೆಗೆ ಭರ್ಜರಿ ಕ್ಯಾಮೆರಾ ಫೋನ್: ಬಿಡುಗಡೆ ಆಯಿತು ರಿಯಲ್ ಮಿ C51 ಸ್ಮಾರ್ಟ್​ಫೋನ್
Realme C51
Follow us on

ಕಳೆದ ಎರಡು ತಿಂಗಳುಗಳಿಂದ ಪ್ರಸಿದ್ಧ ರಿಯಲ್ ಮಿ (Realme) ಸಂಸ್ಥೆ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು (Smartphones) ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕ್ಯಾಮೆರಾ ಪ್ರಿಯರಿಗಾಗಿ ಅಧಿಕ ಮೆಗಾ ಪಿಕ್ಸೆಲ್ ಫೋನನ್ನು ಅನಾವರಣ ಮಾಡುತ್ತಿದೆ. ಇತ್ತೀಚೆಗಷ್ಟೆ 200 ಮೆಗಾ ಪಿಕ್ಸೆಲ್, 100 ಮೆಗಾ ಪಿಕ್ಸೆಲ್ ಕ್ಯಾಮೆರಾದ ಮೊಬೈಲ್​ಗಳನ್ನು ಲಾಂಚ್ ಮಾಡಿತ್ತು. ಅದುಕೂಡ ಕಡಿಮೆ ಬೆಲೆಗೆ ಎಂಬುದು ವಿಶೇಷ. ಹೀಗಿರುವಾಗ ಇದೀಗ ಬಜೆಟ್ ಬೆಲೆಗೆ ಮತ್ತೊಂದು ಆಕರ್ಷಕ ಕ್ಯಾಮೆರಾ ಆಯ್ಕೆ ಇರುವ ರಿಯಲ್ ಮಿ C51 (Realme C51) ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಗೆ ಪರಚಯಿಸಿದೆ.

ರಿಯಲ್ ಮಿ C51 ಬೆಲೆ ಎಷ್ಟು?:

ರಿಯಲ್ ಮಿ C51 ಸ್ಮಾರ್ಟ್​ಫೋನ್ ಸದ್ಯಕ್ಕೆ ಚೀನಾದ ತೈವಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಇದು ಭಾರತಕ್ಕೂ ಕಾಲಿಡಲಿದೆಯಂತೆ. ಈ ಫೋನ್ ಏಕೈಕ 4GB RAM + 64GB ಸ್ಟೋರೇಜ್ ರೂಪಾಂತರದಲ್ಲಿ ರಿಲೀಸ್ ಆಗಿದೆ. ಇದರ ಬೆಲೆ TWD 3,990, ಅಂದರೆ ಭಾರತದಲ್ಲಿ ಸುಮಾರು 10,400ರೂ. ಎನ್ನಬಹುದು. ಇದು ಕಾರ್ಬನ್ ಬ್ಲಾಕ್ ಮತ್ತು ಮಿಂಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಟಿಪ್​ಸ್ಟರ್ ನೀಡಿರುವ ಮಾಹಿತಿಯ ಪ್ರಕಾತ ಈ ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಮತ್ತು ಇದೇ ರೀತಿಯ ಫೀಚರ್​ಗಳನ್ನು ಹೊಂದಿರುತ್ತದೆ ಎಂದು ಹೇಳಿಕೊಂಡಿದೆ.

Airtel: ಏರ್‌ಟೆಲ್​ನ ನಾಲ್ಕು ಅಗ್ಗದ ಬೆಸ್ಟ್ ರಿಚಾರ್ಜ್ ಪ್ಲಾನ್‌ಗಳು ಇಲ್ಲಿವೆ ನೋಡಿ: ಭರ್ಜರಿ ಡೇಟಾ, ಅತ್ಯುತ್ತಮ ವ್ಯಾಲಿಡಿಟಿ

ಇದನ್ನೂ ಓದಿ
Twitter Evolution: ಟ್ವಿಟ್ಟರ್ ಹುಟ್ಟಿನಿಂದ ಇಂದಿನ ವರೆಗೆ ಲೋಗೋದಲ್ಲಿ ಏನೆಲ್ಲ ಬದಲಾವಣೆ ಆಗಿದೆ?: ಇಲ್ಲಿದೆ ನೋಡಿ ಮಾಹಿತಿ
ZTE Nubia Z50S Pro: ಪ್ರೊ ಲೆವೆಲ್ ಕ್ಯಾಮೆರಾ ಹೊಂದಿದೆ ಹೊಸ ಝೆಡ್​​​ಟಿಇ ಫೋನ್!
Samsung Galaxy Unpacked: ಸೂಪರ್ ಸ್ಮಾರ್ಟ್​ಫೋನ್ ಬಿಡುಗಡೆಗೆ ಸ್ಯಾಮ್​ಸಂಗ್ ರೆಡಿ!
Vivo Y27: ಬಜೆಟ್ ದರಕ್ಕೆ ಮಾರ್ಕೆಟ್​ಗೆ ಬಂತು ವಿವೋ ಫೋನ್

ರಿಯಲ್ ಮಿ C51 ಫೀಚರ್ಸ್ ಏನಿದೆ?:

ಹೊಸದಾಗಿ ಬಿಡುಗಡೆಯಾದ ರಿಯಲ್ ಮಿ C51 ಸ್ಮಾರ್ಟ್​ಫೋನ್ 720 x1,600 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.7-ಇಂಚಿನ HD ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 560nits ಗರಿಷ್ಠ ಹೊಳಪನ್ನು ಹೊಂದಿದೆ. ಆಕ್ಟಾ-ಕೋರ್ Unisoc T612 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋನ್ RAM ವಿಸ್ತರಣೆ ತಂತ್ರಜ್ಞಾನವನ್ನು ಸಹ ಹೊಂದಿದೆ, ಇದು ಬಳಕೆದಾರರಿಗೆ 4GB ಬಳಕೆಯಾಗದ ಸಂಗ್ರಹಣೆಯನ್ನು ವರ್ಚುವಲ್ RAM ಆಗಿ ಬಳಸಲು ಅನುಮತಿಸುತ್ತದೆ.

ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್‌ನೊಂದಿಗೆ ರನ್ ಆಗುತ್ತದೆ. ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು f/1.8 ಅಪರ್ಚರ್ ಮತ್ತು ಅನಿರ್ದಿಷ್ಟ ಸೆಕೆಂಡರಿ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್‌ನಿಂದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಫೋನ್ ಮುಂಭಾಗದಲ್ಲಿ F/2.0 ದ್ಯುತಿರಂಧ್ರದೊಂದಿಗೆ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಹೆಚ್ಚುವರಿಯಾಗಿ, ರಿಯಲ್ ಮಿ C51 ಸ್ಮಾರ್ಟ್​ಫೋನ್​ನಲ್ಲಿ 33W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನ್‌ 3.5mm ಹೆಡ್‌ಫೋನ್ ಜ್ಯಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ ಸಿಮ್ ಬೆಂಬಲವನ್ನು ಒಳಗೊಂಡಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ