Realme GT Neo 5 SE: 100W ಫಾಸ್ಟ್ ಚಾರ್ಜರ್, 5000mAh ಬ್ಯಾಟರಿ: ಬಿಡುಗಡೆಗೆ ಸಜ್ಜಾದ ರಿಯಲ್ ಮಿ ಜಿಟಿ ನಿಯೋ 5 SE ಸ್ಮಾರ್ಟ್‌ಫೋನ್
ತನ್ನ ಒಂದೊಂದು ಸ್ಮಾರ್ಟ್ಫೋನ್ನಲ್ಲಿ ಸದಾ ಹೊಸತನವನ್ನು ಬಿಡುಗಡೆ ಮಾಡುವ ರಿಯಲ್ ಮಿ ಇದೀಗ 100W ವೇಗದ ಚಾರ್ಜಿಂಗ್ ಬೆಂಬಲಿಸುವ ರಿಯಲ್ ಮಿ ಜಿಟಿ ನಿಯೋ 5 SE (Realme GT Neo 5 SE) ಎಂಬ ಹೊಸ ಫೋನ್ ಅನಾವರಣ ಮಾಡಲು ಸಜ್ಜಾಗಿದೆ.
ಟೆಕ್ ಮಾರ್ಕೆಟ್ನಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ಪ್ರಸಿದ್ಧ ರಿಯಲ್ ಮಿ (Realme GT) ಕಂಪನಿ ಈಗ ಹಿಂದಿನ ರೀತಿಯಿಲ್ಲ. ಸಾಕಷ್ಟು ಬೆಳವಣಿಗೆ ಕಂಡಿದೆ. ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಸಮಯ ತೆಗೆದುಕೊಂಡು ಆಕರ್ಷಕವಾದ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ತನ್ನ ಒಂದೊಂದು ಸ್ಮಾರ್ಟ್ಫೋನ್ನಲ್ಲಿ ಸದಾ ಹೊಸತನವನ್ನು ಬಿಡುಗಡೆ ಮಾಡುವ ರಿಯಲ್ ಮಿ ಇದೀಗ 100W ವೇಗದ ಚಾರ್ಜಿಂಗ್ ಬೆಂಬಲಿಸುವ ರಿಯಲ್ ಮಿ ಜಿಟಿ ನಿಯೋ 5 SE (Realme GT Neo 5 SE) ಎಂಬ ಹೊಸ ಫೋನ್ ಅನಾವರಣ ಮಾಡಲು ಸಜ್ಜಾಗಿದೆ. ಇದೇ ಏಪ್ರಿಲ್ 3 ರಂದು ಈ ಫೋನ್ ಚೀನಾ ಮಾರುಕಟ್ಟೆಯಲ್ಲಿ ರಿಲೀಸ್ ಆಗಲಿದೆ. ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೂ ಕಾಲಿಡುವ ನಿರೀಕ್ಷೆ ಇದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆಗಳಿವೆ? ಎಂಬುದನ್ನು ನೋಡೋಣ.
ರಿಯಲ್ ಮಿ GT ನಿಯೋ 5 SE ಸ್ಮಾರ್ಟ್ಫೋನ್ನ ಬೆಲೆ ಎಷ್ಟೆಂದು ಬಹಿರಂಗವಾಗಿಲ್ಲ. ಆದರೆ, ಇದರಲ್ಲಿ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಜೊತೆ ಅತ್ಯಂತ ವೇಗದ ಚಾರ್ಜರ್ ನೀಡಲಾಗಿದೆ. ಪ್ರೊಸೆಸರ್ ಕೂಡ ಸಾಕಷ್ಟು ಬಲಿಷ್ಠವಾಗಿದೆ. ಗೇಮರ್ಗಳಿಗೆ ಈ ಮೊಬೈಲ್ ಹೇಳಿ ಮಾಡಿಸಿದಂತಿದೆ. ಈ ಫೋನಿನ ವಿಶೇಷತೆಯನ್ನು ಕಂಪನಿ ಬಹಿರಂಗ ಪಡಿಸಿದೆ.
OnePlus Nord CE 3 Lite: ಭಾರತೀಯ ಮಾರುಕಟ್ಟೆಗೆ ಬರುತ್ತಿದೆ 108MP ಕ್ಯಾಮೆರಾದ ಹೊಚ್ಚ ಹೊಸ ಸ್ಮಾರ್ಟ್‌ಫೋನ್
ರಿಯಲ್ ಮಿ GT ನಿಯೋ 5 SE ಸ್ಮಾರ್ಟ್ಫೋನ್ನಲ್ಲಿ 144Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿರುವ 1240*2772 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.74 ಇಂಚಿನ ಫ್ಲಾಟ್ OLED ಡಿಸ್‌ಪ್ಲೇಯನ್ನು ನೀಡಲಾಗಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ Gen 2 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು ಹೊಸ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದು ಫೋಟೋಗ್ರಫಿಗೆ ಹೇಳಿ ಮಾಡಿಸಿದಂತಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿದೆ. ಇದರ ಜೊತೆಗೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ರಿಯಲ್ ಮಿ GT ನಿಯೋ 5 SE ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಕೆ ಬರುವ 5,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ನಲ್ಲಿ ಬಿಡುಗಡೆ ಆಗಲಿದೆ. ಇದು 100W ವೇಗದ ಚಾರ್ಜಿಂಗ್ ಟೆಕ್ನಾಲಜಿ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿರುವ ಜೊತೆಗೆ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಎಂದಿನಂತೆ ಇರಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Fri, 31 March 23