ಬಿಡುಗಡೆಗೆ ತಯಾರಾದ ರಿಯಲ್ ಮಿಯ ಹೊಸ ನಾರ್ಜೊ ಸ್ಮಾರ್ಟ್‌ಫೋನ್: ಯಾವುದು ನೋಡಿ
Realme Narzo 70 Pro 5G: ರಿಯಲ್ ಮಿ ನಾರ್ಜೊ 70 ಪ್ರೊ ಬೆಲೆ ಎಷ್ಟೆಂದು ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ ಇದು 25,000-30,000 ರೂ. ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಆದ ರಿಯಲ್ ಮಿ ನಾರ್ಜೊ 60 ಪ್ರೊ ಬೆಲೆ ರೂ. 23,999 ಆಗಿದೆ.
ಪ್ರಸಿದ್ಧ ರಿಯಲ್ ಮಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ನಾರ್ಜೊ ಸ್ಮಾರ್ಟ್‌ಫೋನ್‌ನ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಫೋನ್‌ನ ಲ್ಯಾಂಡಿಂಗ್ ಪುಟವು ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಲೈವ್ ಆಗಿತ್ತು. ಇದೀಗ ರಿಯಲ್ ಮಿ ಅಧಿಕೃತವಾಗಿ ನಾರ್ಜೊ 70 ಪ್ರೊ 5G (Realme Narzo 70 Pro 5G) ಅನ್ನು ಮಾರ್ಚ್ 19 ರಂದು ದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ದೃಢಪಡಿಸಿದೆ. ಹೊಸ ರಿಯಲ್ ಮಿ ನಾರ್ಜೊ 70 ಪ್ರೊ 5G ಬಗೆಗಿನ ಕೆಲ ಮಾಹಿತಿ ಇಲ್ಲಿದೆ ನೋಡಿ.
ರಿಯಲ್ ಮಿ ನಾರ್ಜೊ 70 ಪ್ರೊ 5G ಬೆಲೆ
ರಿಯಲ್ ಮಿ ನಾರ್ಜೊ 70 ಪ್ರೊ ಬೆಲೆ ಎಷ್ಟೆಂದು ಬಹಿರಂಗಗೊಂಡಿಲ್ಲ. ಮೂಲಗಳ ಪ್ರಕಾರ ಇದು 25,000-30,000 ರೂ. ಒಳಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಆದ ರಿಯಲ್ ಮಿ ನಾರ್ಜೊ 60 ಪ್ರೊ ಬೆಲೆ ರೂ. 23,999 ಆಗಿದೆ. ಇದು ಆರಂಭಿಕ ಬೆಲೆ ಆಗಿದೆ. ಹೀಗಾಗಿ ಮುಂಬರುವ ಸ್ಮಾರ್ಟ್‌ಫೋನ್ ಇದೇ ಬೆಲೆ ಶ್ರೇಣಿಯಲ್ಲಿ ಬರುವ ಸಾಧ್ಯತೆಯಿದೆ.
ಬೇಸಿಗೆಯ ಬಿಸಿಲಿನಲ್ಲಿ ಬಾಂಬ್ನಂತೆ ಸಿಡಿಯುತ್ತೆ ಮೊಬೈಲ್ಗಳು: ನಿರ್ಲಕ್ಷಿಸದಿರಿ
ರಿಯಲ್ ಮಿ ನಾರ್ಜೊ 70 ಪ್ರೊ 5G ನ ವೈಶಿಷ್ಟ್ಯಗಳು
ರಿಯಲ್ ಮಿ ನಾರ್ಜೊ 70 ಪ್ರೊ 5G ಸ್ಮಾರ್ಟ್‌ಫೋನ್ ಅಂಡ್ರಾಯ್ಡ್ 14 ಆಧಾರಿತ ರಿಯಲ್ ಮಿ UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶೇಷ ಎಂದರೆ ರಿಯಲ್ ಮಿಯ ಇದೇ ಬೆಲೆಯ ಫೋನ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಕ್ಕಿಂತ 65 ಪ್ರತಿಶತ ಕಡಿಮೆ ಬ್ಲೋಟ್‌ವೇರ್ ಅನ್ನು ಈ ಫೋನ್ ಹೊಂದಿರುತ್ತದೆ. ಇದರ ಹೊರತಾಗಿ, ಅನೇಕ ಏರ್ ಗೆಸ್ಚರ್ ವೈಶಿಷ್ಟ್ಯಗಳು ಬಳಕೆದಾರರಿಗೆ ತಮ್ಮ ಅಂಗೈ ಅಥವಾ ಬೆರಳುಗಳ ಚಲನೆಯೊಂದಿಗೆ ಸಾಧನವನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.
ಸೋನಿ IMX890 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ರಿಯಲ್ ಮಿ ನಾರ್ಜೊ 70 ಪ್ರೊ 5G ತನ್ನ ಬೆಲೆ ವಿಭಾಗದಲ್ಲಿ ಮೊದಲ ಸ್ಮಾರ್ಟ್‌ಫೋನ್ ಆಗಿರುತ್ತದೆ ಎಂದು ಕಂಪನಿಯು ದೃಢಪಡಿಸಿದೆ. ಫೋನ್‌ನ ಹಿಂಭಾಗದ ಫಲಕವು “ಡ್ಯುವೋ ಟಚ್ ಗ್ಲಾಸ್” ವಿನ್ಯಾಸವನ್ನು ಹೊಂದಿದೆ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ. ಫೋನ್‌ನ ಹಿಂಭಾಗದ ಶೆಲ್ ಡ್ಯುಯಲ್-ಟೋನ್ ಫಿನಿಶ್‌ನೊಂದಿಗೆ ಆರ್ಕ್ ವಿನ್ಯಾಸವನ್ನು ಹೊಂದಿದೆ.
ಭಾರತದಲ್ಲಿ ಮೊದಲ ಬಾರಿಗೆ ನಥಿಂಗ್ ಫೋನ್ 2a ಮಾರಾಟ ಶುರು: ಬೆಲೆ, ಫೀಚರ್ಸ್ ಏನಿದೆ?
ರಿಯಲ್ ಮಿ ನಾರ್ಜೊ 70 ಪ್ರೊ ಪೂರ್ಣ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಬೆಂಬಲಿಸುವ ಫ್ಲಾಟ್ AMOLED ಪ್ರದರ್ಶನವನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ನ ಇತರ ವಿಶೇಷಣಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಬಿಡುಗಡೆಗೆ ಸುಮಾರು ಒಂದು ವಾರ ಉಳಿದಿರುವಾಗ, ಕಂಪನಿಯು ಶೀಘ್ರದಲ್ಲೇ ಈ ಫೋನಿನ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ