108MP ಕ್ಯಾಮೆರಾ: ಭಾರತದಲ್ಲಿ ಪೋಕೋ X6 ನಿಯೋ 5G ಫೋನ್ ಬಿಡುಗಡೆ: ಬೆಲೆ 15,999 ರೂ.
POCO X6 Neo 5G Launched: ಪೋಕೋ X6 ನಿಯೋ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ 15,999 ರೂ. ಇದೆ. ಈ ಫೋನ್ ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಿಕ ಪ್ರವೇಶದ ಮಾರಾಟ ನಡೆಯುತ್ತಿದೆ.
ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದ ಪೋಕೋ ಸಂಸ್ಥೆಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಪೋಕೋ X6 ನಿಯೋ 5G (POCO X6 Neo 5G) ಬಿಡುಗಡೆ ಆಗಿದೆ. ಈ ಫೋನಿನ ಬೆಲೆ, ಮಾರಾಟದ ದಿನಾಂಕ ಮತ್ತು ಫೀಚರ್ಸ್ ಅನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಇದು ಈಗಾಗಲೇ ಪೋಕೋ X6 ಮತ್ತು ಪೋಕೋ X6 ಪ್ರೊ ಅನ್ನು ಒಳಗೊಂಡಿರುವ X6 ಸರಣಿಗೆ ಸೇರುತ್ತದೆ. ಹೊಸ ಪೋಕೋ X6 ನಿಯೋ 120Hz ಡಿಸ್ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ, 108MP ಕ್ಯಾಮೆರಾದೊಂದಿಗೆ ಬರುತ್ತದೆ.
ಭಾರತದಲ್ಲಿ ಪೋಕೋ X6 ನಿಯೋ 5G ಬೆಲೆ, ಮಾರಾಟ ದಿನಾಂಕ:
ಪೋಕೋ X6 ನಿಯೋ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ 15,999 ರೂ. ಇದೆ. ಅಂತೆಯೆ 12GB RAM ಮತ್ತು 256GB ಸಂಗ್ರಹಣೆಗೆ 17,999 ರೂ. ನಿಗದಿ ಮಾಡಲಾಗಿದೆ. ನೀವು ವರ್ಚುವಲ್ RAM ಬೆಂಬಲವನ್ನು ಸಹ ಪಡೆಯುತ್ತೀರಿ. ಈ ಫೋನ್ ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಿಕ ಪ್ರವೇಶದ ಮಾರಾಟ ನಡೆಯುತ್ತಿದೆ. ಈ ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ: ಆಸ್ಟ್ರಲ್ ಬ್ಲ್ಯಾಕ್, ಹಾರಿಜಾನ್ ಬ್ಲೂ ಮತ್ತು ಮಾರ್ಟಿಯನ್ ಆರೆಂಜ್.
ಬಿಡುಗಡೆಗೆ ತಯಾರಾದ ರಿಯಲ್ ಮಿಯ ಹೊಸ ನಾರ್ಜೊ ಸ್ಮಾರ್ಟ್‌ಫೋನ್: ಯಾವುದು ನೋಡಿ
ಪೋಕೋ X6 ನಿಯೋ 5G ಫೀಚರ್ಸ್:
ಪೋಕೋ X6 ನಿಯೋ 5G 6.67-ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 1,000 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ. 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್‌ನಿಂದ 12GB RAM ಮತ್ತು 256GB ಯ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ.
ಛಾಯಾಗ್ರಹಣ ವಿಭಾಗದಲ್ಲಿ, ಇದು 108MP ಮುಖ್ಯ ಪ್ರಾಥಮಿಕ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2MP ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಇದು ಆಂಡ್ರಾಯ್ಡ್ 13 ಆಧಾರಿತ MIUI 14 ಮೂಲಕ ರನ್ ಆಗುತ್ತದೆ. ನಾಲ್ಕು ವರ್ಷಗಳವರೆಗೆ ಎರಡು ಪ್ರಮುಖ ಆಂಡ್ರಾಯ್ಡ್ ನವೀಕರಣಗಳು ಮತ್ತು ಭದ್ರತಾ ಪ್ಯಾಚ್‌ಗಳನ್ನು ಸಹ ನೀಡಲಾಗಿದೆ.
ಬೇಸಿಗೆಯ ಬಿಸಿಲಿನಲ್ಲಿ ಬಾಂಬ್ನಂತೆ ಸಿಡಿಯುತ್ತೆ ಮೊಬೈಲ್ಗಳು: ನಿರ್ಲಕ್ಷಿಸದಿರಿ
ಈ ಸ್ಮಾರ್ಟ್‌ಫೋನ್ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು ಧೂಳು ಮತ್ತು ಪ್ರತಿರೋಧಕ್ಕಾಗಿ IP54 ರೇಟಿಂಗ್, 3.5mm ಹೆಡ್‌ಫೋನ್ ಜ್ಯಾಕ್, IR ಬ್ಲಾಸ್ಟರ್ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ