Tech Tips: ನಿಮ್ಮ ಫೋನ್‌ನಲ್ಲಿ ಈ 3 ಸೆಟ್ಟಿಂಗ್ಸ್ ಆನ್ ಆಗಿದ್ದರೆ ತಕ್ಷಣ ಆಫ್ ಮಾಡಿ
ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ ಮತ್ತು ಈ ಮೂರು ಸೆಟ್ಟಿಂಗ್‌ಗಳು ಆನ್ ಆಗಿದ್ದರೆ, ಅವುಗಳನ್ನು ತಕ್ಷಣವೇ ಆಫ್ ಮಾಡಿ. ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ಮೂರು ಸೆಟ್ಟಿಂಗ್‌ಗಳನ್ನು ಬದಲಾಯಿಸಿದ ನಂತರ, ನಿಮ್ಮ ಫೋನ್ ಅನ್ನು ಯಾವುದೇ ತೊಂದರೆಯಿಲ್ಲ ಬಳಸಲು ನಿಮಗೆ ಸಾಧ್ಯವಾಗುತ್ತದೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ (Smartphone) ಆಗಾಗ ಬರುವ ಜಾಹೀರಾತುಗಳಿಂದ ನೀವು ತೊಂದರೆಗೆ ಒಳಗಾಗಿದ್ದರೆ, ಈ 3 ಸೆಟ್ಟಿಂಗ್‌ಗಳನ್ನು ಆದಷ್ಟು ಬೇಗ ಆಫ್ ಮಾಡಿ. ಆ ಬಳಿಕ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ. ಅನೇಕ ಬಾರಿ ಗೇಮಿಂಗ್ ಆಡುವಾಗ ಅಥವಾ ಯಾವುದೇ ಪ್ರಮುಖ ಕೆಲಸ ಮಾಡುವಾಗ ಫೋನ್‌ನಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ಅನಗತ್ಯ ಜಾಹೀರಾತುಗಳಿಂದಾಗಿ ಕೆಲಸ ಮಾಡುವಾಗ ಜನರು ಕಿರಿಕಿರಿಗೊಳ್ಳುತ್ತಾರೆ. ಆದರೆ, ಈ ರೀತಿ ಆ್ಯಡ್ ಬರದಿರಲು ಕೆಲವು ಸೆಟ್ಟಿಂಗ್‌ಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಅದನ್ನು ಆಫ್ ಮಾಡಿದ ನಂತರ ನಿಮಗೆ ಆ್ಯಡ್ ಕಾಣಿಸಿಕೊಳ್ಳುವುದು ನಿಲ್ಲುತ್ತದೆ ಮಾತ್ರವಲ್ಲದೆ ನಿಮ್ಮ ಗೌಪ್ಯತೆಯು ಹೆಚ್ಚುತ್ತದೆ.
ಮೊದಲು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ. ಇದರ ನಂತರ ಇಲ್ಲಿ ಗೂಗಲ್ ಆಯ್ಕೆಗೆ ಹೋಗಿ. ಇಲ್ಲಿ ಆ್ಯಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ, ಜಾಹೀರಾತು ಐಡಿ ಅಳಿಸಿ, ಇದನ್ನು ಡಿಲೀಟ್ ಮಾಡಿ. ನಂತರ, ನಿಮಗೆ ಯಾವುದೇ ಕಂಪನಿಯ ಆ್ಯಡ್ಸ್ ಬರುವುದಿಲ್ಲ. ಹಾಗೆಯೆ ವೆಬ್ ಅಪ್ಲಿಕೇನ್ನಲ್ಲಿ ಗೌಪ್ಯತೆಯನ್ನು ಬಲಿಷ್ಠ ಮಾಡಿದರೆ ಉತ್ತಮ.
108MP ಕ್ಯಾಮೆರಾ: ಭಾರತದಲ್ಲಿ ಪೋಕೋ X6 ನಿಯೋ 5G ಫೋನ್ ಬಿಡುಗಡೆ: ಬೆಲೆ 15,999 ರೂ.
ಇದಕ್ಕಾಗಿ ನೀವು ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕಾಗುತ್ತದೆ. ಮತ್ತೊಮ್ಮೆ ಗೂಗಲ್ ಆಯ್ಕೆಗಳಿಗೆ ಹೋಗಿ ಡೇಟಾ ಮತ್ತು ಗೌಪ್ಯತೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ವೆಬ್ ಅಪ್ಲಿಕೇಶನ್ ಚಟುವಟಿಕೆಯ ಆಯ್ಕೆಯನ್ನು ನೋಡುತ್ತೀರಿ. ಅದನ್ನು ಆಫ್ ಮಾಡಿ. ಈಗ ನೀವು ಗೂಗಲ್ನಲ್ಲಿ ಸರ್ಚ್ ಮಾಡುವಾಗ ಅಥವಾ ಏನಾದರು ವೀಕ್ಷಿಸುವಾಗ ಯಾವುದೇ ಜಾಹೀರಾತುಗಳು ಗೋಚರಿಸುವುದಿಲ್ಲ.
ಲೊಕೇಷನ್ ಶೇರ್ ಆಫ್ ಮಾಡುವುದು ಬಹಳ ಮುಖ್ಯ. ಇದು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡದಂತೆ ರಕ್ಷಿಸುತ್ತದೆ. ನಿಮ್ಮ ಫೋನ್ ನಿಮ್ಮನ್ನು 24 ಗಂಟೆಗಳ ಕಾಲ ಟ್ರ್ಯಾಕ್ ಮಾಡುತ್ತದೆ. ಅಂದರೆ, ನೀವು ಎಲ್ಲಿದ್ದರೂ, ನೀವು ಗೂಗಲ್ನಲ್ಲಿ ಹುಡುಕುತ್ತಿರುವ ಅಥವಾ ವೀಕ್ಷಿಸುತ್ತಿರುವ ಎಲ್ಲವನ್ನೂ ಗೂಗಲ್ ಟ್ರ್ಯಾಕ್ ಮಾಡುತ್ತದೆ. ಇದಕ್ಕಾಗಿ, ಮೊದಲು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ. ನಂತರ ಗೂಗಲ್ಗೆ ಹೋಗಿ. ಇಲ್ಲಿ ಡೇಟಾ ಮತ್ತು ಗೌಪ್ಯತೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಂತರ ಲೊಕೇಷನ್ಗೆ ಹೋಗಿ ಆಫ್ ಮಾಡಿ.
ಬಿಡುಗಡೆಗೆ ತಯಾರಾದ ರಿಯಲ್ ಮಿಯ ಹೊಸ ನಾರ್ಜೊ ಸ್ಮಾರ್ಟ್ಫೋನ್: ಯಾವುದು ನೋಡಿ
ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳೊಂದಿಗೆ ಸ್ಥಳ ಮತ್ತು ಡೇಟಾವನ್ನು ಹಂಚಿಕೊಳ್ಳಿ
ಈ ಮೂರು ಸೆಟ್ಟಿಂಗ್‌ಗಳ ಹೊರತಾಗಿ, ನೀವು ನಿಮ್ಮ ಫೋನ್‌ನಲ್ಲಿ ಥರ್ಡ್ ಮಾರ್ಟಿ ಅಪ್ಲಿಕೇಶನ್ ಉಪಯೋಗಿಸುವಾಗ ಲೊಕೇಷನ್ ಆಫ್ ಮಾಡಬಹುದು. ಇದಕ್ಕಾಗಿ ನೀವು ಸೆಟ್ಟಿಂಗ್‌ಗಳಿಗೆ ಹೋಗಬೇಕು. ನಂತರ, ನಿಮ್ಮ ಲೊಕೇಷನ್ ಟ್ರ್ಯಾಕ್ ಮಾಡುವುದನ್ನು ನಿಲ್ಲಿಸಲು ಬಯಸುವ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ನೀವು ಡೇಟಾ ಮತ್ತು ಲೊಕೇಷನ್ ಶೇರ್ ಸ್ಟಾಪ್ ಆಯ್ಕೆ ಕ್ಲಿಕ್ ಮಾಡಿ. ನಂತರ ಅಪ್ಲಿಕೇಶನ್ ನಿಮ್ಮ ಲೊಕೇಷನ್ ಟ್ರ್ಯಾಕ್ ಮಾಡುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Thu, 14 March 24