AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy Buds 2: ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ 2 ಅನ್​ಬಾಕ್ಸಿಂಗ್ ಮತ್ತು ರಿವ್ಯೂ

Samsung Galaxy Buds 2: ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ 2 ಅನ್​ಬಾಕ್ಸಿಂಗ್ ಮತ್ತು ರಿವ್ಯೂ

ಕಿರಣ್​ ಐಜಿ
ಕಿರಣ್​ ಐಜಿ|

Updated on: Apr 07, 2023 | 5:52 PM

Share

ಬಡ್ಸ್ 2 ಬೆಲೆ ದೇಶದಲ್ಲಿ ಆಫರ್ ದರದಲ್ಲಿ ₹7,999ಕ್ಕೆ ದೊರೆಯುತ್ತಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ ಸರಣಿಯಲ್ಲಿ ಬಡ್ಸ್ 2 ಬಿಡುಗಡೆಯಾಗಿದ್ದು, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯ ಹೊಂದಿದೆ.

ಸ್ಯಾಮ್​ಸಂಗ್, ಭಾರತ ಮತ್ತು ಜಾಗತಿಕ ಗ್ಯಾಜೆಟ್ ಮಾರುಕಟ್ಟೆಯಲ್ಲಿ ವಿವಿಧ ಸ್ಮಾರ್ಟ್ ಗ್ಯಾಜೆಟ್​ಗಳನ್ನು ಬಿಡುಗಡೆ ಮಾಡಿದೆ. ಜತೆಗೆ, ಯುವಜನತೆಯ ಟ್ರೆಂಡ್ ಆಗಿರುವ ಇಯರ್​ಬಡ್ಸ್ ಮತ್ತು ಇಯರ್​ಪಾಡ್ ಸರಣಿಯಲ್ಲಿ ಕೂಡ ಸ್ಯಾಮ್​ಸಂಗ್ ಗ್ಯಾಲಕ್ಸಿ ಸರಣಿಯ ಬಡ್ಸ್ ಬಿಡುಗಡೆ ಮಾಡುವ ಮೂಲಕ ವಿಶೇಷ ಛಾಪು ಮೂಡಿಸಿದೆ. ಸ್ಯಾಮ್​ಸಂಗ್ ನೂತನ ಗ್ಯಾಲಕ್ಸಿ ಬಡ್ಸ್ 2 ಅನ್​ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ವಿಡಿಯೊ ಇಲ್ಲಿದೆ. ಗ್ಯಾಲಕ್ಸಿ ಬಡ್ಸ್ 2 ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯವನ್ನು ಹೊಂದಿದೆ. ಅಲ್ಲದೆ, ಆ್ಯಂಡ್ರಾಯ್ಡ್ ಮತ್ತು ಆ್ಯಪಲ್ ಐಫೋನ್ ಜತೆ ಬಳಸಬಹುದಾಗಿದೆ. ಬಡ್ಸ್ 2 ಬೆಲೆ ದೇಶದಲ್ಲಿ ಆಫರ್ ದರದಲ್ಲಿ ₹7,999ಕ್ಕೆ ದೊರೆಯುತ್ತಿದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಬಡ್ಸ್ ಸರಣಿಯಲ್ಲಿ ಬಡ್ಸ್ 2 ಬಿಡುಗಡೆಯಾಗಿದ್ದು, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯ ಹೊಂದಿದೆ. ಅಲ್ಲದೆ, ಗ್ಯಾಲಕ್ಸಿ ಬಡ್ಸ್ 2 ಆ್ಯಂಡ್ರಾಯ್ಡ್ ಮತ್ತು ಆ್ಯಪಲ್ ಐಫೋನ್ ಜತೆ ಬಳಸಬಹುದಾಗಿದೆ. ಗ್ಯಾಲಕ್ಸಿ ಬಡ್ಸ್ 2 ಐದು ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದೆ. ಗ್ಯಾಲಕ್ಸಿ ಬಡ್ಸ್ 2 ಎಂಆರ್​ಪಿ ದರ ₹13,999 ಇದ್ದು, ವಿಶೇಷ ಆಫರ್​ನಲ್ಲಿ ₹7,999 ದರಕ್ಕೆ ಲಭ್ಯವಿದೆ. ಸ್ಯಾಮ್​ಸಂಗ್ ಸ್ಟೋರ್ ಮೂಲಕ ಕ್ಯಾಶ್​ಬ್ಯಾಕ್​ ಮತ್ತು ಇಎಂಐ, ಕೊಡುಗೆಗಳ ಆಯ್ಕೆ ದೊರೆಯುತ್ತದೆ.

Follow Us
ಕಿರಣ್​ ಐಜಿ
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.