ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಬಿಗ್ ಬಚತ್ ದಮಾಲ್ ಸೇಲ್ ನಡೆಯುತ್ತಿದೆ. ಈ ಮೇಳದಲ್ಲಿ ಪ್ರಸಿದ್ಧ ಸ್ಮಾರ್ಟ್ಫೋನ್ಗಳಿಗೆ (Smartphones) ಭರ್ಜರಿ ಆಫರ್ ಘೋಷಣೆ ಮಾಡಲಾಗಿದ್ದು, ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ. ಇದರಲ್ಲಿ ನೀವು ಮಧ್ಯಮ ಬೆಲೆಗೆ ದುಬಾರಿ ಬೆಲೆಯ ಫೋನನ್ನು ಖರೀದಿಸಬಹುದು. ಅಂತೆಯೆ ಬಜೆಟ್ ಬೆಲೆಗೆ ಮಧ್ಯಮ ಬೆಲೆಯ ಮೊಬೈಲ್ ಪಡೆದುಕೊಳ್ಳಬಹುದು. ಈ ಸೇಲ್ನಲ್ಲಿ ಮುಖ್ಯವಾಗಿ ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ S20 FE (Galaxy S20 FE) ಸ್ಮಾರ್ಟ್‌ಫೋನ್ ಬಂಪರ್ ರಿಯಾಯಿತಿ ಪಡೆದುಕೊಂಡಿದೆ. ಕೊಂಚ ದುಬಾರಿ ಬೆಲೆ ಹೊಂದಿರುವ ಈ ಮೊಬೈಲ್ ಅನ್ನು ಆಫರ್ ಮೂಲಕ ಕಡಿಮೆ ದರಕ್ಕೆ ನಿಮ್ಮದಾಗಿಸಬಹುದು. ಇದರಲ್ಲಿ ಕ್ಯಾಮೆರಾ, ಪ್ರೊಸೆಸರ್, ಡಿಸ್ ಪ್ಲೇ ಎಲ್ಲವೂ ಅದ್ಭುತವಾಗಿದೆ.
ಆಫರ್ ಏನಿದೆ?:
ಸ್ಯಾಮ್ಸಂಗ್ ಗ್ಯಾಲಕ್ಸಿ S20 FE ಸ್ಮಾರ್ಟ್ಫೋನಿನ 8GB RAM + 128GB ಸ್ಟೋರೇಜ್ ಆಯ್ಕೆಯ ಮೂಲ ಬೆಲೆ 74,999 ರೂ. ಆಗಿದೆ. ಆದರೀಗ ಫ್ಲಿಪ್ಕಾರ್ಟ್ನ ಬಿಗ್ ಬಚತ್ ದಮಾಲ್ ಸೇಲ್ನಲ್ಲಿ ಬರೋಬ್ಬರಿ 63 ಶೇ. ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಗ್ಯಾಲಕ್ಸಿ S20 FE ಫೋನನ್ನು ನೀವು ಕೇವಲ 27,650 ರೂ. ಗೆ ಖರೀದಿಸಬಹುದು. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.
AC Gas Leak: ಎಸಿ ಹಾಳಾಗಿದೆ ಎಂದು ಮೆಕ್ಯಾನಿಕ್ ಕರೆಯುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಡಿ
ಫೀಚರ್ಸ್ ಏನಿದೆ?:
ಸ್ಯಾಮ್ಸಂಗ್ ಗ್ಯಾಲಕ್ಸಿ S20 FE ಸ್ಮಾರ್ಟ್ಫೋನ್ನಲ್ಲಿ 1,080 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ನೀಡಲಾಗಿದೆ. ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 865 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. 1ಟಿಬಿ ವರೆಗೆ ಮೆಮೋರಿಯನ್ನು ಹೆಚ್ಚಿಸುವ ಆಯ್ಕೆ ಇದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್‌ವೈಡ್-ಆಂಗಲ್ ಲೆನ್ಸ್ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಮತ್ತು ಡ್ಯುಯಲ್ ಫೇಸ್ ಡಿಟೆಕ್ಷನ್ ಆಟೋಫೋಕಸ್ ಅನ್ನು ಬೆಂಬಲಿಸುತ್ತದೆ. ಎರಡನೇ ಕ್ಯಾಮೆರಾ 123 ಡಿಗ್ರಿ ಫೀಲ್ಡ್ ವ್ಯೂ ಜೊತೆಗೆ 12 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ ಮುಂಭಾಗ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಮತ್ತು ವಿಡಿಯೋ ಕ್ಯಾಮೆರಾವನ್ನು ನೀಡಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 15W ಫಾಸ್ಟ್ ಚಾರ್ಜಿಂಗ್ ಮತ್ತು ವೈಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ವೈಯರ್‌ಲೆಸ್ ಚಾರ್ಜಿಂಗ್-ಬೆಂಬಲಿತ ಡಿವೈಸ್‌ಗಳೊಂದಿಗೆ ಪವರ್ ಹಂಚಿಕೊಳ್ಳಲು ಸ್ಯಾಮ್‌ಸಂಗ್‌ನ ವಾಯರ್‌ಲೆಸ್ ಪವರ್‌ಶೇರ್ ಸಹ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಜೊತೆಗೆ 4G VOLTE ವೈ-ಫೈ, ಬ್ಲೂಟೂತ್ V5.0, ಜಿಪಿಎಸ್, NFC, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ