ಈಗೇನಿದ್ದರು ಸ್ಮಾರ್ಟ್ಫೋನ್ಗಳ (Smartphone) ಜಮಾನ. ಮಾರುಕಟ್ಟೆಯಲ್ಲಿ ದಿಕ್ಕೊಂದರಂತೆ ಕಡಿಮೆ ಬೆಲೆಗೆ ಹೊಸ ಹೊಸ ಸ್ಮಾರ್ಟ್ಫೋನುಗಳು ಬಿಡುಗಡೆ ಆಗುತ್ತಿರುತ್ತದೆ. ಅಗ್ಗದ ಬೆಲೆಗೆ ಆಕರ್ಷಕ ಫೋನುಗಳು ಸಿಗುವ ಕಾರಣ ಹಳೆಯ ಫೋನ್ ಸ್ವಲ್ಪ ಹಾಳಾದರೆ ಸಾಕು ಅದನ್ನು ಸೇಲ್ ಮಾಡಿ ಹೊಸ ಮೊಬೈಲ್ ತೆಗೆದುಕೊಳ್ಳುವವರೇ ಹೆಚ್ಚು. ಆದರೆ, ಹಳೆಯ ಸ್ಮಾರ್ಟ್ಫೋನನ್ನು ಸೇಲ್ ಮಾಡುವ ಮುನ್ನ ನೀವು ಈ ಕೆಲಸನ್ನು ತಪ್ಪದೆ ಮಾಡಬೇಕು.
ಮುಖ್ಯವಾಗಿ ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್, ಫೈಲ್ಸ್, ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ. ಅದಕ್ಕಾಗಿ ಗೂಗಲ್ನಲ್ಲಿ ದೊರೆಯುವ ಒನ್ಡ್ರೈವ್ ಆ್ಯಪ್ ಬಳಕೆ ಮಾಡಬಹುದು. ಅಂತೆಯೇ, ಟ್ವಿಟ್ಟರ್, ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್, ಫೋನ್ ಪೇ, ಗೂಗಲ್ ಪೇ ಸೇರಿದಂತೆ ನೀವು ಲಾಗಿನ್ ಆಗಿರುವ ಆಕೌಂಟ್ನಿಂದ ಲಾಗ್ ಜೌಟ್ ಆಗಿದ್ದೀರಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ.
ಇನ್ನೂ ಸೇಲ್ ಮಾಡುವ ಮುನ್ನ ಫೋನಿನಲ್ಲಿರುವ ಡಾಟಾ ನಿಮಗೆ ಅಗತ್ಯವಿಲ್ಲ ಎಂದಾದಲ್ಲಿ ಒಮ್ಮೆಗೆ ಎಲ್ಲವನ್ನು ಡಿಲೀಟ್ ಮಾಡಿ. ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಗ್ರಾಹಕರು ಸೆಟ್ಟಿಂಗ್ಸ್ಗೆ ಹೋಗಿ ಸೆಕ್ಯೂರಿಟಿಯಲ್ಲಿ ಫ್ಯಾಕ್ಟರಿ ರಿಸೆಟ್ ಮಾಡುವ ಮೂಲಕ ಎಲ್ಲಾ ಡಾಟಾವನ್ನು ಅಳಿಸಿಹಾಕಬಹುದು.
ಐಫೋನ್ ಬಳಕೆದಾರರು ಡಾಟಾ ಡಿಲೀಟ್ ಮಾಡಲು ಸೆಟ್ಟಿಂಗ್ಸ್-ಯೂಸರ್ ಪ್ರೊಫೈಲ್-ಐಕ್ಲೌಡ್-ಫೈಂಡ್ ಮೈ ಐಫೋನ್ ಆಯ್ಕೆಯನ್ನು ಕ್ಲಿಕ್ ಮಾಡಿ. ಟರ್ನ್ ಆನ್ ಮಾಡಿದ ನಂತರ ಆ್ಯಪ್ಗಳನ್ನೆಲ್ಲ ಲಾಗೌಟ್ ಮಾಡಬಹುದು.
ಇಲ್ಲವಾದಲ್ಲಿ ನೀವು ಫೋನು ಮಾರಾಟ ಮಾಡುವ ಮುನ್ನ ರಿಸೆಟ್ ಮಾಡುವುದು ಉತ್ತಮ ಆಯ್ಕೆ. ಮೊದಲಿಗೆ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ನಂತರ ವ್ಯಾಲ್ಯೂಮ್ ಆಪ್, ಪವರ್ ಮತ್ತು ಹೋಮ್ ಬಟನ್ ಗಳನ್ನು ಒಟ್ಟಿಗೆ ಒತ್ತಿದರೆ ರಿಕವರಿ ಮೋಡ್ ಆನ್ ಆಗಲಿದೆ.
ಬೂಟ್ ಲೋಡರ್ ಒಪನ್ ಆದ ನಂತರದಲ್ಲಿ ಪವರ್ ಬಟನ್ ಅನ್ನು ಪ್ರೆಸ್ ಮಾಡಿದರೆ ರಿಕವರಿ ಮೋಡ್ ಕಾಣಿಸಿಕೊಳ್ಳಲಿದೆ. ನಂತರ ವ್ಯಾಲ್ಯೂಮ್ ಬಟನ್ ಆಪ್ ಡೌನ್ ಮಾಡುವ ಮೂಲಕ ವೈಪ್ ಡಾಟಾ/ಫ್ಯಾಕ್ಟರಿ ರಿಸೆಸ್ಟ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಎಲ್ಲ ಡಾಟಾ ಡಿಲೀಟ್ ಆಗುವಂತೆ ಮಾಡಬಹುದು.
Flipkart ನಲ್ಲಿ ಬಂಪರ್ ಡಿಸ್ಕೌಂಟ್: ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾದ Galaxy F22 ಈಗ ಖರೀದಿಗೆ ಲಭ್ಯ
(Smartphone sale Selling Your Old Android Phone This Is How To Factory Reset It here is the tips)
Published On - 6:02 pm, Tue, 13 July 21