ಸಾಮಾಜಿಕ ಜಾಲತಾಣಗಳು ಇಂದು ಸಾಕಷ್ಟು ಬದಲಾವಣೆ ಕಂಡಿದ್ದು ಈಗ ಮೊದಲಿನಂತಿಲ್ಲ. ಫೇಸ್ಬುಕ್, ಟ್ವಿಟರ್ ಹಾಗೂ ವಾಟ್ಸ್ಆ್ಯಪ್ (WhatsApp) ಅನೇಕ ರೀತಿಯಲ್ಲಿ ಬಳಕೆದಾರರಿಗೆ ಸಹಾಯ ಮಾಡುತ್ತಿದೆ. ಇವುಗಳ ಜೊತೆಗೆ ಮತ್ತೊಂದು ಪ್ರಸಿದ್ಧ ಜಾಲತಾಣ ಇನ್‌ಸ್ಟಾಗ್ರಾಮ್ (Instagram) ಕೂಡ ಹಿಂದೆ ಬಿದ್ದಿಲ್ಲ. ತಿಂಗಳಿಗೆ ಬಿಲಿಯನ್ಗೂ ಅಧಿಕ ಆ್ಯಕ್ಟಿವ್ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಾಗ್ರಾಮ್ ಈಗ ಕೇವಲ ಫೋಟೋ- ವಿಡಿಯೋ ಹಂಚಿಕೊಳ್ಳಲು ಮಾತ್ರ ಉಳಿದಿಲ್ಲ. ಬದಲಾಗಿ ದೊಡ್ಡ ವ್ಯಾಪಾರದ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಹೀಗೆ ಸಾಕಷ್ಟು ಪ್ರಸಿದ್ಧಿ ಪಡೆದಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರ ಅಕೌಂಟ್ ಬ್ಲೂ ಟಿಕ್ ಇದ್ದರೆ ಅದಕ್ಕೊಂದು ವಿಶೇಷ ಗೌರವ ಎಂದೇ ಹೇಳಬಹುದು. ಹಾಗಾದರೆ ಇನ್ಸ್ಟಾದಲ್ಲಿ ಬ್ಲೂ ಟಿಕ್ (Blue Tick) ಬ್ಯಾಡ್ಜ್ ಪಡೆಯಲು ಇರುವ ಸುಲಭ ಮಾರ್ಗ ಯಾವುದು?.
ಇನ್‌ಸ್ಟಾಗ್ರಾಮ್‌ನಲ್ಲಿ ಆಟೋಮ್ಯಾಟಿಕ್ ಆಗಿ ಬ್ಲೂ ಟಿಕ್ ಮಾರ್ಕ್ ಆಯ್ಕೆಗಳಿಲ್ಲ. ಬದಲಿಗೆ ಬಳಕೆದಾರರು ಕೆಲವು ವೈಯಕ್ತಿಕ ದಾಖಲೆಗಳ ವಿವರಗಳನ್ನು ನಮೋದಿಸಿ ಇದನ್ನು ಪಡೆದುಕೊಳ್ಳಬಹುದು. ಇದನ್ನೆಲ್ಲಾ ಪರಿಶೀಲಿಸಿದ ನಂತರ ಇನ್‌ಸ್ಟಾಗ್ರಾಮ್ ಬ್ಲೂ ಟಿಕ್ ನೀಡುತ್ತದೆ. ಇದನ್ನು ಪರಿಶೀಲನೆ ಬ್ಯಾಡ್ಜ್ ಎಂದು ಕರೆಯಲಾಗುತ್ತದೆ. ಹಾಗಾದರೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಶೀಲನೆ ಬ್ಯಾಡ್ಜ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ.
Realme Narzo N55: ಬೆಸ್ಟ್ ಫೋನ್, ಬಜೆಟ್ ದರಕ್ಕೆ ದೊರೆಯುತ್ತಿದೆ ರಿಯಲ್ಮಿ ಫೋನ್
ಇನ್ಸ್ಟಾದಲ್ಲಿ ಬ್ಲೂಟಿಕ್‌ಗಾಗಿ ನೀವು ಈ ರೀತಿ ವಿನಂತಿಸಬಹುದು. ಹಾಗಂತ ನೀವು ಕೇಳುವಷ್ಟು ಬಾರಿ ನೀಲಿ ಟಿಕ್ ಬರುತ್ತದೆ ಎಂದು ಹೇಳುವುದು ಕಷ್ಟ. ಸಂಪೂರ್ಣ ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಂಡರೂ ಸಹ, ನಿಮ್ಮ ವಿನಂತಿಯ ರದ್ದತಿಗೆ ಇತರ ಕಾರಣಗಳೂ ಇರಬಹುದು. ಇದರ ಜೊತೆಗೆ ಬಳಕೆದಾರರು ಒಂದು ಸಮಯದಲ್ಲಿ ಒಂದು ವಿನಂತಿಯನ್ನು ಮಾತ್ರ ಸಲ್ಲಿಸಬಹುದು.
WhatsApp New Feature: ವಾಟ್ಸ್ಆ್ಯಪ್ನಲ್ಲಿ ವಿಡಿಯೋ ಮೆಸೇಜ್ ಆಯ್ಕೆ: ಹೊಸ ಫೀಚರ್ ಕೇಳಿ ದಂಗಾದ ಬಳಕೆದಾರರು
ನಿಮ್ಮ ಖಾತೆಯನ್ನು ಪರಿಶೀಲಿಸಿದರೆ, ಅಲೌಂಟ್ನಲ್ಲಿ ಬಳಕೆದಾರ ಹೆಸರನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ. ನೀವು ಅದನ್ನು ಮಾಡಿದರೂ, ಪರಿಶೀಲನೆ ಬ್ಯಾಡ್ಜ್ ಅನ್ನು ಬೇರೆ ಖಾತೆಗೆ ವರ್ಗಾಯಿಸಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಎಲ್ಲಾದರು ತಪ್ಪು ಮಾಹಿತಿಯೊಂದಿಗೆ ವೆರಿಫಿಕೇಶನ್ ಬ್ಯಾಡ್ಜ್ ಪಡೆದರೆ, ಇನ್‌ಸ್ಟಾಗ್ರಾಮ್ ಅದರ ಬಗ್ಗೆ ತಿಳಿದ ತಕ್ಷಣ ಬ್ಲೂಟಿಕ್ ಅನ್ನು ತೆಗೆದುಹಾಕಿ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಇನ್‌ಸ್ಟಾಗ್ರಾಮ್ ಬ್ಲೂ ಟಿಕ್ ನೀಡುವ ಮೊದಲು ನಿಮ್ಮ ಖಾತೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಿದೆ. ನಿಮ್ಮ ಖಾತೆಯ ಹಿಂದಿನ ಹಿಸ್ಟರಿ, ಎಷ್ಟು ಫಾಲೋವರ್ಸ್ ಇದ್ದಾರೆ ಜೊತೆಗೆ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ ಖಾತೆ ಮತ್ತು ಸದಾ ಸಕ್ರೀಯವಾಗಿರುವ ಖಾತೆಗೆ ಮಾತ್ರ ಈ ಬ್ಲೂ ಟಿಕ್ ದೊರೆಯುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ