Tech Tips: ಒಂದು ಫೋನ್​ನಿಂದ ಇನ್ನೊಂದು ಫೋನ್ ಚಾರ್ಜ್ ಮಾಡೋದು ಹೇಗೆ?: ಇಲ್ಲಿದೆ ಟ್ರಿಕ್

ನೀವು ಹೊರಹೋದಾಗ ನಿಮ್ಮ ಮೊಬೈಲ್​ನ ಚಾರ್ಜರ್ ಅಥವಾ ಪವರ್ ಬ್ಯಾಂಕ್ ಅನ್ನು ಕೊಂಡೊಯ್ಯಲು ಮರೆತಿದ್ದರೆ, ಈ ಮಾಹಿತಿಯು ನಿಮಗೆ ಉಪಯುಕ್ತವಾಗಿರುತ್ತದೆ. ನೀವು ಒಂದು ಫೋನ್ ಅನ್ನು ಇನ್ನೊಂದರಿಂದ ಚಾರ್ಜ್ ಮಾಡಬಹುದು. ಒಂದು ಫೋನ್‌ನಿಂದ ಇನ್ನೊಂದು ಫೋನ್ ಚಾರ್ಜ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ. ಅದರ ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ನೀಡಲಾಗಿದೆ.

Tech Tips: ಒಂದು ಫೋನ್​ನಿಂದ ಇನ್ನೊಂದು ಫೋನ್ ಚಾರ್ಜ್ ಮಾಡೋದು ಹೇಗೆ?: ಇಲ್ಲಿದೆ ಟ್ರಿಕ್
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 14, 2024 | 10:51 AM

ಇಂದಿನ ಬ್ಯುಸಿ ಶೇಡ್ಯೂಲ್​ ನಡುವೆ ನಾವು ಸ್ಮಾರ್ಟ್‌ಫೋನ್‌ನೊಂದಿಗೆ ಚಾರ್ಜರ್ ಅನ್ನು ಒಯ್ಯಲು ಅನೇಕ ಬಾರಿ ಮರೆತುಬಿಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಅನ್ನು ಹೇಗೆ ಚಾರ್ಜ್ ಮಾಡುವುದು ಎಂದು ತಲೆಕೆಡಿಸಿಕೊಳ್ಳುತ್ತೇವೆ. ಆದರೆ, ಈಗ ನೀವು ತುಂಬಾ ಚಿಂತಿಸಬೇಕಾಗಿಲ್ಲ. ಯಾವುದೇ ಚಾರ್ಜರ್ ಅಥವಾ ಪವರ್ ಬ್ಯಾಂಕ್ ಇಲ್ಲದೆ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವ ಟ್ರಿಕ್ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ. ಇದಕ್ಕಾಗಿ, ನಿಮ್ಮ ಫೋನ್ ಹೊರತುಪಡಿಸಿ, ನಿಮಗೆ ಇನ್ನೊಂದು ಫೋನ್ ಅಗತ್ಯವಿದೆ. ನಂತರ ನೀವು ನಿಮ್ಮ ಫೋನ್ ಅನ್ನು ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ.

ಫೋನ್​ನಿಂದ ಫೋನ್ ಅನ್ನು ಚಾರ್ಜ್ ಮಾಡುವುದು ಹೇಗೆ?:

ನೀವು ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಮತ್ತು ಅವುಗಳಲ್ಲಿ ಒಂದು ಆಂಡ್ರಾಯ್ಡ್ ಫೋನ್ ಆಗಿದ್ದರೆ ಸುಲಭವಾಗು ಚಾರ್ಜ್ ಮಾಡಬಹುದು. ಮಾರುಕಟ್ಟೆಯಲ್ಲಿ ಬರುತ್ತಿರುವ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯನ್ನು ನೀವು ಪಡೆಯುತ್ತೀರಿ. ನಿಮ್ಮ ಫೋನ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ. ಇಲ್ಲಿ ನೀವು ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿದರೆ, ಬ್ಯಾಟರಿ ಆಯ್ಕೆಯನ್ನು ನೋಡುತ್ತೀರಿ.

ಬ್ಯಾಟರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ, ಚಾರ್ಜಿಂಗ್ ಸೆಟ್ಟಿಂಗ್‌ಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಕೊನೆಯದಾಗಿ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯನ್ನು ತೋರಿಸಲಾಗುತ್ತದೆ. ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಆಯ್ಕೆಯನ್ನು ಸಕ್ರಿಯಗೊಳಿಸಿ. ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನೀವು ಮೇಜಿನ ಮೇಲೆ ಫೋನ್ ಅನ್ನು ತಲೆಕೆಳಗಾಗಿ ಇಡಬೇಕು. ಇನ್ನೊಂದು ಫೋನ್ ಅನ್ನು ಅದರ ಮೇಲೆ ಇರಿಸಿ.

ಆಗ ನಿಮ್ಮ ಫೋನ್ ಚಾರ್ಜ್ ಮಾಡಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯನ್ನು ಪವರ್‌ಶೇರ್ ವೈಶಿಷ್ಟ್ಯ ಎಂದೂ ಕರೆಯುತ್ತಾರೆ. ಒಂದು ಸಾಧನದಿಂದ ಇನ್ನೊಂದಕ್ಕೆ ಶಕ್ತಿಯನ್ನು ಕಳುಹಿಸಬಹುದು ಎಂದು ಅದರ ಹೆಸರೇ ಸೂಚಿಸುತ್ತದೆ. ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ನೀವು ಕಾಣಬಹುದು. ಈ ವೈಶಿಷ್ಟ್ಯವನ್ನು ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಮತ್ತು ಎಲ್ಲಾ ನಂತರದ ಮಾದರಿಗಳಲ್ಲಿ ಒದಗಿಸಲಾಗಿದೆ.

ಇದನ್ನೂ ಓದಿ: ಕೊನೆಗೂ ಹೊಸ ವರ್ಷದ ಬಂಪರ್ ಪ್ಲ್ಯಾನ್ ಬಿಡುಗಡೆ ಮಾಡಿದ ಜಿಯೋ: ಇಂದೇ ರಿಚಾರ್ಜ್ ಮಾಡಿ

ತುರ್ತು ಪರಿಸ್ಥಿತಿಯಲ್ಲಿ ಲಾಭ:

ತುರ್ತು ಪರಿಸ್ಥಿತಿಯಲ್ಲಿ ನೀವು ಈ ತಂತ್ರವನ್ನು ಬಳಸಬಹುದು. ನಿಯಮಿತವಾಗಿ, ನಿಮ್ಮ ಫೋನ್ ಅನ್ನು ಮೀಸಲಾದ ಚಾರ್ಜರ್ ಮೂಲಕ ಮಾತ್ರ ಚಾರ್ಜ್ ಮಾಡಬೇಕು. ಇಲ್ಲದಿದ್ದರೆ ಅದು ಬ್ಯಾಟರಿಯ ಮೇಲೆ ಪರಿಣಾಮ ಬೀರಬಹುದು.

ಇನ್ನು ಅನೇಕ ಬಾರಿ ಜನರು ತಮ್ಮ ಫೋನ್ ಚಾರ್ಜರ್ ಹೊಂದಿಲ್ಲದಿದ್ದರೆ ಅಥವಾ ಅದನ್ನು ಮರೆತು ಬಿಟ್ಟಿದ್ದರೆ ಅವರು ತಮ್ಮ ಫೋನ್ ಫ್ರೆಂಡ್ ಮೊಬೈಲ್ ಚಾರ್ಜರ್​ನಿಂದ ಅಥವಾ ಯಾವುದೊ ಕಂಪನಿಯ ಅಗ್ಗದ ಚಾರ್ಜರ್ ಅನ್ನು ಮಾರುಕಟ್ಟೆಯಿಂದ ತಂದು ಫೋನ್ ಅನ್ನು ಚಾರ್ಜ್ ಮಾಡಲು ಪ್ರಾರಂಭಿಸುತ್ತಾರೆ. ಹೀಗೆ ಬೇರೊಬ್ಬರ ಚಾರ್ಜರ್ ಬಳಸಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಿದರೆ, ಬ್ಯಾಟರಿ ಘಟಕಗಳಿಗೆ ಹಾನಿಯಾಗುವ ಅಪಾಯವಿದೆ.

ಬೇರೆಯವರ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡುವುದು ಫೋನ್ ಬ್ಯಾಟರಿ ಹಾಳಾಗಲು ಮುಖ್ಯ ಕಾರಣ. ಏಕೆಂದರೆ, ಉದಾಹರಣೆಗೆ ನಿಮ್ಮ ಫೋನ್‌ನ ಬ್ಯಾಟರಿ 10 ವ್ಯಾಟ್ ಚಾರ್ಜರ್ ಅನ್ನು ಬೆಂಬಲಿಸುವ ಸಾಮರ್ಥ್ಯ ಮಾತ್ರ ಹೊಂದಿದೆ ಎಂದು ಕೊಳ್ಳೋಣ. ಆದರೆ, ನಿಮ್ಮ ಸ್ನೇಹತನ ಚಾರ್ಜರ್ 50 ವ್ಯಾಟ್ ಚಾರ್ಜರ್ ಬೆಂಬಲಿಸುತ್ತಿದ್ದರೆ, ನೀವು ಅದನ್ನು ಹೆಚ್ಚಿನ ವ್ಯಾಟ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡುತ್ತಿದ್ದೀರಿ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಟರಿಯು ಒತ್ತಡಕ್ಕೆ ಒಳಗಾಗುತ್ತದೆ. ಆಗ ಫೋನ್ ಸ್ಫೋಟಗೊಳ್ಳಬಹುದು ಅಥವಾ ಬ್ಯಾಟರಿ ಹಾಳಾಗಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ