TRAI New Rule: ಇನ್ಮುಂದೆ ನಿಮಗೆ OTP ಮೆಸೇಜ್ ತಡವಾಗಿ ಬರುತ್ತೆ: ಟ್ರಾಯ್ನಿಂದ ಬಂದಿದೆ ಹೊಸ ನಿಯಮ
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 1 ರಿಂದ ನಕಲಿ ಕರೆಗಳು ಮತ್ತು ಸಂದೇಶಗಳನ್ನು ತಡೆಯಲು ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ಪರಿಣಾಮವಾಗಿ, OTP ಸಂದೇಶಗಳು ವಿಳಂಬವಾಗುತ್ತವೆ.
ಆನ್‌ಲೈನ್ ವಹಿವಾಟುಗಳ ಹೆಚ್ಚಳದಿಂದಾಗಿ OTP ಬಹಳ ಮಹತ್ವದ್ದಾಗಿದೆ. ಬ್ಯಾಂಕ್ ವ್ಯವಹಾರ, ಫುಡ್ ಡೆಲಿವರಿ, ಕೊರಿಯರ್ ಸೇವೆಗಳಿಗೆ OTP ಗಳು ಕಡ್ಡಾಯವಾಗಿದೆ. ಸರ್ಕಾರದ ಅನೇಕ ಸೇವೆಗಳನ್ನು ಕೂಡ OTP ಮೂಲಕ ಮಾಡಲಾಗುತ್ತದೆ. ಇದು ಗ್ರಾಹಕರ ಸುರಕ್ಷತೆಗೆ ಉಪಯುಕ್ತವಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಇದು ದುರ್ಬಳಕೆಯಾಗುತ್ತಿದೆ ಎಂಬ ಆರೋಪವಿದೆ. ಇದರಿಂದ ಸಾಕಷ್ಟು ಮಂದಿ ಹಣ ಕಳೆದುಕೊಂಡಿದ್ದಾರೆ. OTP ಹೇಳಿ ಹಣ ಕಳೆದುಕೊಂಡ ಪ್ರಕರಣ ಪ್ರತಿ ದಿನ ನಾವು ಕೇಳುತ್ತಲೇ ಇರುತ್ತೇವೆ.
ಈ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮಹತ್ವದ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 1 ರಿಂದ ನಕಲಿ ಕರೆಗಳು ಮತ್ತು ಸಂದೇಶಗಳನ್ನು ತಡೆಯಲು ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ಪರಿಣಾಮವಾಗಿ, OTP ಸಂದೇಶಗಳು ವಿಳಂಬವಾಗುತ್ತವೆ. ಒಮ್ಮೆ ಈ ನಿಯಮ ಜಾರಿಗೆ ಬಂದರೆ ಅನಗತ್ಯ ಕರೆಗಳ ಸಮಸ್ಯೆ ನಿವಾರಣೆಯಾಗಲಿದೆ.
ಇದಲ್ಲದೇ ನಕಲಿ ಸಂದೇಶಗಳು ಮತ್ತು ಕರೆಗಳನ್ನು ಫಿಲ್ಟರ್ ಮಾಡುವಲ್ಲಿ ಬ್ಯಾಂಕಿಂಗ್ ಸಂದೇಶಗಳು ಮತ್ತು OTP ಗಳನ್ನು ಪಡೆಯುವಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. OTP ಗಳು ಸ್ಥಗಿತಗೊಂಡರೆ ನೀವು ಯಾವುದೇ ವಹಿವಾಟುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆನ್‌ಲೈನ್‌ನಲ್ಲಿ ಏನನ್ನಾದರೂ ಆರ್ಡರ್ ಮಾಡಿದ ನಂತರ ನೀವು ಡೆಲಿವರಿ ಸಮಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆಗೆ OTP ಅನ್ನು ಸ್ವೀಕರಿಸುತ್ತೀರಿ. ಆ OTP ಅನ್ನು ನಮೂದಿಸಿದ ನಂತರವೇ ನಿಮ್ಮ ಉತ್ಪನ್ನವನ್ನು ನೀವು ಸ್ವೀಕರಿಸುತ್ತೀರಿ. ಇದೀಗ OTP ಗಳನ್ನು ಸ್ವೀಕರಿಸದೆ ವಿಳಂಬವಾದರೆ ಆನ್‌ಲೈನ್ ಪಾರ್ಸಲ್ ತೆಗೆದುಕೊಳ್ಳಲಾಗುವುದಿಲ್ಲ.
ತನ್ನ ಮಾನದಂಡಗಳನ್ನು ಅನುಸರಿಸದ ಎಸ್ ಎಮ್ ಎಸ್ ಅಥವಾ ಆಂಡ್ರಾಯ್ಡ್ ಅಪ್ಲಿಕೇಶನ್ APK ಫೈಲ್‌ಗಳನ್ನು ನಿರ್ಬಂಧಿಸಲು ಟ್ರಾಯ್ ನಿರ್ಧರಿಸಿದೆ. ಕೆಲವು ಲಿಂಕ್ ಅಥವಾ ಸಂದೇಶವನ್ನು ಕ್ಲಿಕ್ ಮಾಡುವ ಮೂಲಕ, ಹ್ಯಾಕರ್‌ಗಳು ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿ ಮತ್ತು ಹಣವನ್ನು ಕದಿಯುತ್ತಾರೆ. ಇಂತಹ ವಂಚನೆಗಳು ನಡೆಯದಂತೆ ಟ್ರಾಯ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ OTP ಆಧಾರದ ಮೇಲೆ ಕಾರ್ಯನಿರ್ವಹಿಸುವ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಕಳುಹಿಸಿದ ಸಂದೇಶ ಅಥವಾ OTP ಗ್ರಾಹಕರ ಫೋನ್‌ಗೆ ತಲುಪುವುದಿಲ್ಲ ಎಂದು ಹೇಳಿದೆ.
ಬ್ಯಾಂಕ್‌ಗಳು ಮತ್ತು ಪಾವತಿ ಆಪರೇಟರ್‌ಗಳಿಂದ ಹಿಡಿದು ಝೊಮೆಟೊ ಮತ್ತು ಊಬರ್ ನಂತಹ ಅಪ್ಲಿಕೇಶನ್‌ಗಳಿಗೆ ಈ ನಿಯಮವೂ ಅನ್ವಯಿಸುತ್ತದೆ. ಯುಆರ್ಎಲ್ ಗಳು, ಓಟಿಟಿ ಲಿಂಕ್‌ಗಳು, APK ಗಳು (Android ಅಪ್ಲಿಕೇಶನ್ ಪ್ಯಾಕೇಜ್‌ಗಳು) ಅಥವಾ ಕಾಲ್ ಬ್ಯಾಕ್ ಸಂಖ್ಯೆಗಳನ್ನು ಹೊಂದಿರುವ ಸಂದೇಶಗಳನ್ನು ನಿರ್ಬಂಧಿಸಲು ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ನಿಮ್ಮ ಫೋನ್ ಸ್ಟೋರೇಜ್ ಫುಲ್ ಆಗಲು ಪ್ರಮುಖ ಕಾರಣ ಈ ಆ್ಯಪ್: ತಕ್ಷಣ ಹೀಗೆ ಮಾಡಿ
ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಸಂದೇಶಗಳು, OTP ಟೆಂಪ್ಲೇಟ್‌ಗಳು ಮತ್ತು ವಿಷಯವನ್ನು ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ದಂತಹ ಟೆಲಿಕಾಂ ಆಪರೇಟರ್‌ಗಳೊಂದಿಗೆ ನವೆಂಬರ್ 31 ರೊಳಗೆ ನೋಂದಾಯಿಸಿಕೊಳ್ಳಬೇಕು.
ಟೆಲಿಕಾಂ ಕಂಪನಿಗಳು ಹಾಗೂ ಆಹಾರ ವಿತರಣಾ ಕಂಪನಿಗಳು ಟ್ರಾಯ್ ಮಾನದಂಡಗಳಿಗೆ ಅನುಗುಣವಾಗಿಲ್ಲದಿದ್ದರೆ OTP ಗಳನ್ನು ಬಳಸುವುದನ್ನು ನಿಲ್ಲಿಸುವ ಪರಿಸ್ಥಿತಿಯೂ ಇದೆ. ಒಟ್ಟಾರೆಯಾಗಿ, ಡಿಸೆಂಬರ್ 1 ರಿಂದ OTP ಸಂದೇಶವನ್ನು ಸ್ವೀಕರಿಸಲು ವಿಳಂಬವಾಗುತ್ತದೆ. ಇದೆಲ್ಲವೂ ಗ್ರಾಹಕರ ಸುರಕ್ಷತೆಗಾಗಿ ಎಂದು ಟ್ರಾಯ್ ಸ್ಪಷ್ಟಪಡಿಸಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ