ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆ ಇಂದು ಸಾಕಷ್ಟು ವಿಸ್ತಾರವಾಗಿದೆ. ತಿಂಗಳಿಗೆ ಕಡಿಮೆ ಎಂದರೂ ಐದರಿಂದ ಆರು ಮೊಬೈಲ್ಗಳು ಮಾರುಕಟ್ಟೆಗೆ ಪ್ರವೇಶಿಸುತ್ತದೆ. ಅದರಂತೆ ಈ ತಿಂಗಳು ಮಾರುಕಟ್ಟೆಯಲ್ಲಿ ನಥಿಂಗ್ ಫೋನ್ 2 (Nothing Phone 2), ಗ್ಯಾಲಕ್ಸಿ 5 ಫ್ಲಿಪ್ ಸೇರಿದಂತೆ ಕೆಲ ಮೊಬೈಲ್ಗಳು ಬಿಡುಗಡೆ ಆಗಿದೆ. ಆಗಸ್ಟ್ ತಿಂಗಳು ಕೂಡ ಟೆಕ್ ಜಗತ್ತಿನಲ್ಲಿ ಕೆಲವು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿದೆ. ಮುಂದಿನ ತಿಂಗಳು ಅನಾವರಣಗೊಳ್ಳಲಿರುವ ನಿರೀಕ್ಷಿತ ಫೋನ್‌ಗಳಲ್ಲಿ ವಿವೋ V29 (Vivo V29) ಮತ್ತು ರೆಡ್ಮಿ 12 5G ಸೇರಿವೆ. ಇದರ ಜೊತೆಗೆ ಇನ್ನೂ ಕೆಲ ಬಲಿಷ್ಠ ಸ್ಮಾರ್ಟ್‌ಫೋನ್‌ಗಳು ರಿಲೀಸ್ ಆಗಲಿದೆ. ಇಲ್ಲಿದೆ ನೋಡಿ ಆಗಸ್ಟ್ನಲ್ಲಿ ಬರಲಿರುವ ಸ್ಮಾರ್ಟ್ಫೋನ್ಗಳ ಪಟ್ಟಿ.
ವರದಿಯ ಪ್ರಕಾರ, ಶವೋಮಿ ಮುಂಬರುವ ಮಿಕ್ಸ್ ಫೋಲ್ಡ್ 3 ಈ ತಿಂಗಳು ಬಿಡುಗಡೆ ಆಗುವ ನಿರೀಕ್ಷೆಯಿದೆ. ಇದು ಸ್ಯಾಮ್ಸಂಗ್ ಗ್ಯಾಲಕ್ಸಿ Z Fold 5 ಫೋನ್ಗೆ ಕಠಿಣ ಪೈಪೋಟಿ ನೀಡಲಿದೆ. ಈ ಫೋನಿನ ಫೀಚರ್ಸ್, ಬೆಲೆ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ ಈ ಫೋನ್ ಅದ್ಭುತವಾದ ಕ್ಯಾಮೆರಾ ಆಯ್ಕೆಯೊಂದಿಗೆ ಬಿಡುಗಡೆ ಆಗಲಿದೆ ಎನ್ನಲಾಗಿದೆ.
ವಿವೋ ತನ್ನ V29 ಸರಣಿಯೊಂದಿಗೆ ಜಾಗತಿಕವಾಗಿ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಈ ಸರಣಿಯು ವಿವೋ V29 ಮತ್ತು ವಿವೋ V29 Pro ಅನ್ನು ಒಳಗೊಂಡಿದೆ. ಇದು ವಿವೋ S17 ಸರಣಿಯ ಮರುಬ್ರಾಂಡೆಡ್ ಆವೃತ್ತಿಯಾಗಿದ್ದು, ಈ ಹಿಂದೆ ಚೀನಾದಲ್ಲಿ ಬಿಡುಗಡೆಯಾಗಿತ್ತು. ಇದುಕೂಡ ಬಲಿಷ್ಠವಾದ ಬ್ಯಾಟರಿ, ಪ್ರೊಸೆಸರ್, ಕ್ಯಾಮೆರಾ ಆಯ್ಕೆಯೊಂದಿಗೆ ಬರಲಿದೆಯಂತೆ.
OnePlus 10 Pro 5G: ಧಮಾಕ ಆಫರ್: ಅರ್ಧ ಗಂಟೆಯಲ್ಲಿ ಫುಲ್ ಚಾರ್ಜ್ ಆಗುವ ಈ ಫೋನನ್ನು ಕಡಿಮೆ ಬೆಲೆಗೆ ಖರೀದಿಸಿ
ವರದಿಗಳ ಪ್ರಕಾರ, ರಿಯಲ್ ಮಿ 2023 ರ ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲು ತಯಾರಿ ನಡೆಸುತ್ತಿದೆ. ಅದುವೇ ರಿಯಲ್ ಮಿ GT 5. ಇದು ಶಕ್ತಿಯುತ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್, ಅದ್ಭುತವಾದ 144Hz OLED ಡಿಸ್ ಪ್ಲೇ ಮತ್ತು 50 MP ಟ್ರಿಪಲ್-ಕ್ಯಾಮೆರಾ ಸೆಟಪ್‌ನೊಂದಿಗೆ ಪ್ಯಾಕ್ ಮಾಡಲಾಗಿದೆ.
ಇನ್ಫಿನಿಕ್ಸ್ GT 10 ಪ್ರೊ ಸ್ಮಾರ್ಟ್‌ಫೋನ್ ಆಗಸ್ಟ್ 3 ರಂದು ಬಿಡುಗಡೆ ಆಗಲಿದೆ. ತನ್ನ ಆಕರ್ಷಕ ವಿನ್ಯಾಸದ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿರುವ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 108MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ.
ಶವೋಮಿ ತನ್ನ ಮುಂಬರುವ ರೆಡ್ಮಿ 12 5G ಬಿಡುಗಡೆಯನ್ನು ಘೋಷಿಸಿದೆ. ಈ ಫೋನ್ ಆಗಸ್ಟ್ 1 ರಂದು ಭಾರತದಲ್ಲಿ ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ. ಈ ಕೈಗೆಟುಕುವ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 4 ಜನ್ 2 ಚಿಪ್‌ಸೆಟ್, 90Hz FHD+ ಡಿಸ್ ಪ್ಲೇ, ಬಲವಾದ 5,000mAh ಬ್ಯಾಟರಿ ಮತ್ತು ಹೆಚ್ಚಿನ ರೆಸಲ್ಯೂಶನ್ 50 MP ಪ್ರಾಥಮಿಕ ಕ್ಯಾಮೆರಾ ಸಂವೇದಕವನ್ನು ಒಳಗೊಂಡಿರುತ್ತದೆ.
ಒನ್ಪ್ಲಸ್ ತನ್ನ ಚೊಚ್ಚಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಅದುವೇ ಒನ್ಪ್ಲಸ್ ಓಪನ್. ಇದು ಬಲಿಷ್ಠವಾದ ಸ್ನಾಪ್‌ಡ್ರಾಗನ್ 8 Gen 2 SoC, 2K AMOLED ಪ್ರೈಮರಿ ಡಿಸ್ ಪ್ಲೇ ಮತ್ತು ಟ್ರಿಪಲ್-ಕ್ಯಾಮೆರಾ ಸೆಟಪ್ ನೀಡಲಾಗಿದೆ. ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ಶವೋಮಿ ಮತ್ತು ಸ್ಯಾಮ್ಸಂಗ್ಗೆ ಪೈಪೋಟಿ ನೀಡಲಾಗಿದೆ. ಇದು ಆಗಸ್ಟ್ 29 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:14 pm, Mon, 31 July 23