AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Features: ಈ ಐದು ವಾಟ್ಸ್​​ಆ್ಯಪ್​ ಫೀಚರ್​ ಬಗ್ಗೆ ನೀವು ತಿಳಿದಿರಲೇಬೇಕು

ಪ್ರತಿ ಬಾರಿಯೂ ಹೊಸ ಹೊಸ ಅಪ್​ಡೇಟ್​ಗಳನ್ನು ಬಿಡುವ ಮೂಲಕ ತನ್ನ ಬಳಕೆದಾರರಿಗೆ ಸುಲಭವಾಗುವಂತೆ ಮಾಡುತ್ತಿದೆ ವಾಟ್ಸಾಪ್​. ಹಾಗಾದರೆ ವಾಟ್ಸ್​​​ಆ್ಯಪ್​​ನಲ್ಲಿರುವ ಹಿಡೆನ್​ ಫೀಚರ್​ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

WhatsApp Features: ಈ ಐದು ವಾಟ್ಸ್​​ಆ್ಯಪ್​ ಫೀಚರ್​ ಬಗ್ಗೆ ನೀವು ತಿಳಿದಿರಲೇಬೇಕು
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Mar 02, 2021 | 8:06 PM

Share

ಗೌಪ್ಯತಾ ನೀತಿ ಬದಲಾವಣೆ ನಿರ್ಧಾರದಿಂದ ವಾಟ್ಸ್​​​ಆ್ಯಪ್​​ ಒಂದಷ್ಟು ಬಳಕೆದಾರರನ್ನು ಕಳೆದುಕೊಂಡಿದ್ದಂತೂ ಸತ್ಯ. ಆದರೆ, ಇದು ವಾಟ್ಸ್​ಆ್ಯಪ್​ಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿಲ್ಲ. ವಾಟ್ಸ್​ಆ್ಯಪ್​ ವಿಶ್ವಾದ್ಯಂತ ಬರೋಬ್ಬರಿ 200 ಕೋಟಿ ಬಳಕೆದಾರರನ್ನು ಹೊಂದಿದೆ. ಪ್ರತಿ ಬಾರಿಯೂ ಹೊಸ ಹೊಸ ಅಪ್​ಡೇಟ್​ಗಳನ್ನು ಬಿಡುವ ಮೂಲಕ ತನ್ನ ಬಳಕೆದಾರರಿಗೆ ಸುಲಭವಾಗುವಂತೆ ಮಾಡುತ್ತಿದೆ ವಾಟ್ಸ್​ಆ್ಯಪ್​​. ಹಾಗಾದರೆ ವಾಟ್ಸ್​​​ಆ್ಯಪ್​​ನಲ್ಲಿರುವ ಹಿಡೆನ್​ ಫೀಚರ್​ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಬ್ಲ್ಯೂ ಟಿಕ್​ ಹೈಡ್​ ವಾಟ್ಸ್​​​ಆ್ಯಪ್​ನಲ್ಲಿ ನೀವು ಕಳುಹಿಸಿದ ಮೆಸೇಜ್​ ಅನ್ನು ಮತ್ತೊಂದು ಕಡೆಯಲ್ಲಿದ್ದವರು ಓದಿದರೆ ಬ್ಲ್ಯೂ ಟಿಕ್​ ಬರುತ್ತದೆ. ಕೆಲವೊಮ್ಮೆ ಕಳುಹಿಸಿದ ಮೆಸೇಜ್​ಗೆ ಬ್ಲ್ಯೂ ಟಿಕ್​ ಬಂದರೂ ರಿಪ್ಲೈ ಮಾಡುತ್ತಿಲ್ಲ ಎಂದು ಜಗಳ ಮಾಡಿದ ಉದಾಹರಣೆ ಇರಬಹುದು. ಹೀಗಾಗಿ ಬ್ಲ್ಯೂ ಟಿಕ್​ ತೆಗೆದು ಬಿಟ್ಟರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹಾಗಾದರೆ ಇದನ್ನು ತೆಗೆಯೋದು ಹೆಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ವಾಟ್ಸ್​​ಆ್ಯಪ್​ ಸೆಟ್ಟಿಂಗ್​​ > ಅಕೌಂಟ್​​​ > ಪ್ರವೈಸಿ > ​Read Receipts ಅನ್ನು ಅನ್​ಟಿಕ್​ ಮಾಡಿ. (ಇದು ಗ್ರೂಪ್​ ಚ್ಯಾಟ್​ಗೆ ಅಪ್ಲೈ ಆಗುವುದಿಲ್ಲ)

ಪ್ರೊಫೈಲ್​ ಪಿಕ್ಚರ್​ ಹೈಡ್ ಮಾಡೋದು ಹೇಗೆ? ನೀವು ಕೆಲವೊಮ್ಮೆ ಪ್ರೊಫೈಲ್​ ಪಿಕ್ಚರ್​ ತೆಗೆಯದೆಯೂ ಅದನ್ನು ಹೈಡ್​ ಮಾಡಬಹುದು. ಅದು ಹೇಗೆ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಅದಕ್ಕೆ ನೀವು ಹೀಗೆ ಮಾಡಿ. ಸೆಟ್ಟಿಂಗ್​ > ಅಕೌಂಟ್​ > ಪ್ರೈವೆಸಿ > ಪ್ರೊಫೈಲ್​ ಫೋಟೊಗೆ ಹೋಗಿ. ಈ ವೇಳೆ ನಿಮಗೆ ಎವರಿವನ್​, ಮೈ ಕಾಂಟ್ಯಾಕ್ಟ್ಸ್​​, ನೋಬಡಿ ಎನ್ನುವ ಆಯ್ಕೆ ಸಿಗುತ್ತದೆ. ಈ ವೇಳೆ ನೋಬಡಿ ಎನ್ನುವ ಆಯ್ಕೆ ಕ್ಲಿಕ್​ ಮಾಡಿದರೆ ಪ್ರೊಫೈಲ್​ ಪಿಕ್ಚರ್​ ಯಾರಿಗೂ ಕಾಣುವುದಿಲ್ಲ.

ಗ್ರೂಪ್​ ಮೆಸೇಜ್​ಗಳಿಗೆ ಪ್ರೈವೇಟ್​ ಆಗಿ ರಿಪ್ಲೈ ಮಾಡೋದು ಹೇಗೆ? ಯಾರೋ ಏನನ್ನೋ ಗ್ರೂಪ್​ನಲ್ಲಿ ಹಾಕುತ್ತಾರೆ. ಅದರ ಬಗ್ಗೆ ನಿಮಗೆ ಗ್ರೂಪ್​ನಲ್ಲೇ ರಿಪ್ಲೈ ಮಾಡಲು ಇಷ್ಟವಿರುವುದಿಲ್ಲ. ಈ ವೇಳೆ ಸಹಾಯಕ್ಕೆ ಬರುವುದೇ ಖಾಸಗಿಯಾಗಿ ಉತ್ತರಿಸಿ (Reply Privately) ಎನ್ನುವ ಆಯ್ಕೆ. ಗ್ರೂಪ್​ನಲ್ಲಿ ಬಂದ ಚ್ಯಾಟ್​ ಮೇಲೆ ಕ್ಲಿಕ್​ ಮಾಡಿ. ಈ ವೇಳೆ ಅಲ್ಲಿ Reply Privately ಎನ್ನುವ ಆಯ್ಕೆ ಸಿಗುತ್ತದೆ.

ಆಟೋ ಡೌನ್​ಲೋಡ್​ ಕೆಲ ಗ್ರೂಪ್​ಗಳಲ್ಲಿ ನೀವು ಅನಿವಾರ್ಯವಾಗಿ ಇರಬೇಕಾಗುತ್ತದೆ. ಆದರೆ, ಮೀಡಿಯಾ ಆಟೋ ಡೌನ್​ಲೋಡ್​ ಆಯ್ಕೆಯಿಂದ ಈ ಗ್ರೂಪ್​ನ ಮೀಡಿಯಾ ಡೌನ್​ಲೋಡ್​ ಆಗುತ್ತದೆ. ಇದರಿಂದ ನಿಮ್ಮ ಸ್ಟೋರೇಜ್​ಗೆ ಸಮಸ್ಯೆ ಉಂಟಾಗಬಹುದು. ಈ ಆಟೋ ಡೌನ್​ಲೋಡ್​ ಆಯ್ಕೆಯನ್ನು ತೆಗೆದು ಹಾಕಬಹುದು. ವಾಟ್ಸ್​​ಆ್ಯಪ್​ ಸೆಟ್ಟಿಂಗ್ > ಮೀಡಿಯಾ ಆಟೋ ಡೌನ್​ಲೋಡ್​ > ಆಟೋ ಡೌನ್​ಲೋಡ್​ ಡಿಸೇಬಲ್​

ಬ್ಲಾಕ್​ ಮಾಡುವುದು ಹೇಗೆ? ನಿಮಗೆ ಸಂಬಂಧ ಇಲ್ಲದವರು ವಾಟ್ಸ್​​ ಆ್ಯಪ್​ನಲ್ಲಿ ನಿಮಗೆ ತೊಂದರೆ ಕೊಡುತ್ತಿದ್ದಾರೆ ಎಂದಾದರೆ ಆಗ ಸಿಗುವ ಆಯ್ಕೆಯೇ ಬ್ಲಾಕ್​. ನಿಮಗೆ ಯಾವ ಕಾಂಟ್ಯಾಕ್ಟ್​ ಬ್ಲಾಕ್​ ಮಾಡಬೇಕೋ ಅಲ್ಲಿಗೆ ತೆರಳಿ. ಅಲ್ಲಿ ಕಾಂಟ್ಯಾಕ್ಟ್​ ಬ್ಲಾಕ್​ ಆಯ್ಕೆಯನ್ನು ಒತ್ತಿ.

ಇದನ್ನೂ ಓದಿ: WhatsApp Privacy: ವಾಟ್ಸ್ಆ್ಯಪ್ ಗೌಪ್ಯತೆ ನೀತಿಯನ್ನು ಗ್ರಾಹಕರು ಪಾಲಿಸದೇ ಇದ್ದರೆ ಏನಾಗುತ್ತೆ?

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ