Tech Tips: ವಾಟ್ಸ್ಆ್ಯಪ್ನಲ್ಲಿ ನಿಮ್ಮ DP ಕೆಲವೇ ಜನರಿಗೆ ಕಾಣುವಂತೆ ಮಾಡೋದು ಹೇಗೆ?, ಇಲ್ಲಿದೆ ಟ್ರಿಕ್
ವಾಟ್ಸ್ಆ್ಯಪ್ನಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಮರೆಮಾಡುವುದು. ನೀವು ಬಯಸುವ ವ್ಯಕ್ತಿ ಮಾತ್ರ ನಿಮ್ಮ ಪ್ರೊಫೈಲ್ ಫೋಟೋವನ್ನು ನೋಡಬಹುದಾದ ಆಯ್ಕೆ ವಾಟ್ಸ್ಆ್ಯಪ್ ನೀಡಿದೆ. ಆದರೆ, ಇದು ಅನೇಕರಿಗೆ ತಿಳಿದಿಲ್ಲ. ಈ ಟ್ರಿಕ್ ಮೂಲಕ ನೀವು ಯಾರಿಂದಲೂ ನಿಮ್ಮ ಪ್ರೊಫೈಲ್ ಫೋಟೋವನ್ನು ಸುಲಭವಾಗಿ ಮರೆಮಾಡಬಹುದು.

ವಾಟ್ಸ್ಆ್ಯಪ್ ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಷನ್ ಆಗಿದೆ. ಭಾರತದಲ್ಲಿ ಇದಕ್ಕೆ ಕೋಟ್ಯಾಂತರ ಬಳಕೆದಾರರಿದ್ದಾರೆ. ಜನರ ಅಗತ್ಯಕ್ಕೆ ಅನುಗುಣವಾಗಿ ಪ್ರತಿ ತಿಂಗಳು ಒಂದಲ್ಲ ಒಂದು ಅಪ್ಡೇಟ್ಗಳನ್ನು ವಾಟ್ಸ್ಆ್ಯಪ್ ನೀಡುತ್ತಲೇ ಬರುತ್ತಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ನೀವು ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಆದರೆ, ಇದರೊಳಗೆ ಅಡಕವಾಗಿರುವ ಅನೇಕ ಫೀಚರ್ಸ್ ಕೆಲವೇ ಜನರಿಗೆ ತಿಳಿದಿದೆ. ಅಂತಹ ಒಂದು ವೈಶಿಷ್ಟ್ಯವೆಂದರೆ ಡಿಪಿ ಹೈಡ್ ಮಾಡುವುದು.
ಅಂದರೆ ನಿಮ್ಮ ಪ್ರೊಫೈಲ್ ಫೋಟೋವನ್ನು ಮರೆಮಾಡುವುದು. ನೀವು ಬಯಸುವ ವ್ಯಕ್ತಿ ಮಾತ್ರ ನಿಮ್ಮ ಪ್ರೊಫೈಲ್ ಫೋಟೋವನ್ನು ನೋಡಬಹುದಾದ ಆಯ್ಕೆ ವಾಟ್ಸ್ಆ್ಯಪ್ ನೀಡಿದೆ. ಆದರೆ, ಇದು ಅನೇಕರಿಗೆ ತಿಳಿದಿಲ್ಲ. ಈ ಟ್ರಿಕ್ ಮೂಲಕ ನೀವು ಯಾರಿಂದಲೂ ನಿಮ್ಮ ಪ್ರೊಫೈಲ್ ಫೋಟೋವನ್ನು ಸುಲಭವಾಗಿ ಮರೆಮಾಡಬಹುದು.
- ಇದಕ್ಕಾಗಿ ನೀವು ಸೆಟ್ಟಿಂಗ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಮೊದಲು ನೀವು ವಾಟ್ಸ್ಆ್ಯಪ್ ಅನ್ನು ತೆರೆಯಬೇಕು. ಇದರ ನಂತರ ನೀವು ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಬೇಕು.
- ಈಗ ನೀವು ಸೆಟ್ಟಿಂಗ್‌ಗಳಿಗೆ ಹೋಗಬೇಕು. ಇಲ್ಲಿ ನೀವು ಅನೇಕ ಆಯ್ಕೆಗಳನ್ನು ನೋಡುತ್ತೀರಿ, ಇದರಲ್ಲಿ ನೀವು ಪ್ರೈವಸಿ ಮೇಲೆ ಕ್ಲಿಕ್ ಮಾಡಿದ ತಕ್ಷಣ, ನೀವು ಅನೇಕ ಗೌಪ್ಯತೆ ಆಯ್ಕೆಗಳನ್ನು ನೋಡುತ್ತೀರಿ, ಅದರಲ್ಲಿ ನೀವು ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ, ಅಬೌಟ್ ಮತ್ತು ಇತರ ವಿವರಗಳನ್ನು ಕಾಣುತ್ತೀರಿ.
- ಪ್ರೊಫೈಲ್ ಫೋಟೋ ಅಥವಾ ಡಿಪಿ ಮರೆಮಾಡಲು, ನೀವು ಪ್ರೊಫೈಲ್ ಫೋಟೋ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ನೀವು 4 ಆಯ್ಕೆಗಳನ್ನು ಪಡೆಯುತ್ತೀರಿ. ಮೊದಲ ಆಯ್ಕೆಯೆಂದರೆ ಎವರಿವನ್, ಮೈ ಕಾಂಟೆಕ್ಟ್, ಮೈ ಕಾಂಟೆಕ್ಟ್ ಹೊರತುಪಡಿಸಿ, ಮತ್ತು ನೋಬಡಿ.
- ನೀವು ಕೆಲವು ನಿರ್ದಿಷ್ಟ ವ್ಯಕ್ತಿಗಳಿಂದ ನಿಮ್ಮ ಪ್ರೊಫೈಲ್ ಅನ್ನು ಮರೆಮಾಡಲು ಬಯಸಿದರೆ, ನೀವು ಮೈ ಕಾಂಟೆಕ್ಟ್ ಹೊರತುಪಡಿಸಿ ಆಯ್ಕೆ ಮಾಡಬೇಕು. ಇಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ತೋರಿಸಲು ಬಯಸದ ಜನರನ್ನು ಆಯ್ಕೆ ಮಾಡಬಹುದು.
Tech Tips: ಇನ್ಸ್ಟಾದಲ್ಲಿ ಏನೇ ಅಪ್ಲೋಡ್ ಮಾಡಿದ್ರೂ ಅದು ಫೇಸ್ಬುಕ್ನಲ್ಲಿ ಬರುತ್ತಾ?: ಬಾರದಿರಲು ಹೀಗೆ ಮಾಡಿ
ವಾಟ್ಸ್ಆ್ಯಪ್ನಲ್ಲಿ ಬೆರಗುಗೊಳಿಸುವ ವೈಶಿಷ್ಟ್ಯ:
ಇನ್ಮುಂದೆ ವಿವಿಧ ಸಂಖ್ಯೆಗಳಿಂದ ವಾಟ್ಸ್ಆ್ಯಪ್ಅನ್ನು ಬಳಸಲು ನೀವು ಮತ್ತೊಂದು ಸ್ಮಾರ್ಟ್ಫೋನ್ ಅನ್ನು ಬಳಸಬೇಕಾಗಿಲ್ಲ. ನೀವು ಒಂದು ಫೋನ್ನಲ್ಲಿ ವಿಭಿನ್ನ ಸಂಖ್ಯೆಗಳಿಂದ ವಾಟ್ಸ್ಆ್ಯಪ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಹೊಸ ವೈಶಿಷ್ಟ್ಯದಿಂದ ಐಒಎಸ್ ಬಳಕೆದಾರರು ಮೊದಲು ಪ್ರಯೋಜನ ಪಡೆಯುತ್ತಾರೆ. WaBetaInfo ಪ್ರಕಾರ, ಈ ವೈಶಿಷ್ಟ್ಯವನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ. ಮುಂಬರುವ ಸಮಯದಲ್ಲಿ ಐಫೋನ್ ಬಳಕೆದಾರರಿಗೆ ಪ್ರಾರಂಭವಾಗಲಿದೆ. ಇದರಲ್ಲಿ, ಬಳಕೆದಾರರು ಒಂದೇ ಸಾಧನದಲ್ಲಿ ಬಹು ವಾಟ್ಸ್ಆ್ಯಪ್ ಖಾತೆಗಳ ನಡುವೆ ಬದಲಾಯಿಸಲು ಸಾಧ್ಯವಾಗುತ್ತದೆ. ನೀವು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಬಹು ಖಾತೆಗಳನ್ನು ನಿರ್ವಹಿಸುವಂತೆಯೇ, ಮುಂದಿನ ದಿನಗಳಲ್ಲಿ ವಾಟ್ಸ್ಆ್ಯಪ್ ಖಾತೆಗಳಿಗೆ ಬದಲಾಯಿಸಲು ಸಾಧ್ಯವಾಗುತ್ತದೆ. ಹೊಸ ವೈಶಿಷ್ಟ್ಯದ ಮೂಲಕ, ನೀವು ನೇರವಾಗಿ ಒಂದು ವಾಟ್ಸ್ಆ್ಯಪ್ ಖಾತೆಯಿಂದ ಮತ್ತೊಂದು ವಾಟ್ಸ್ಆ್ಯಪ್ ಖಾತೆಗೆ ಹೋಗಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ