AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Power: ಎಐ ಟೆಕ್ನಾಲಜಿಯಿಂದ ಮನುಷ್ಯ ಸಾವಿರ ವರ್ಷ ಬದುಕಲು ಸಾಧ್ಯವಾ? ಸ್ಟಾನ್​ಫೋರ್ಡ್ ವಿವಿ ಪ್ರೊಫಸರ್ ಹೇಳೋದಿದು

WITT 2024: ಕೃತಕ ಬುದ್ಧಿಮತ್ತೆ (AI) ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಬಹುದೇ? ಇದು AI ಯ ಸಾಧ್ಯತೆಗಳೇನು ಎಂದು ತಿಳಿಯುವ ಪ್ರಯತ್ನ. ಟಿವಿ9 ಪ್ಲಾಟ್​ಫಾರ್ಮ್​ನಲ್ಲಿ ಡಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಾವೇಶದ ಭಾಗವಾಗಿ ಎಐ ಬಗ್ಗೆ ನಡೆದ ವಿಚಾರ ಮಂಥನದಲ್ಲಿ ಸ್ಟಾನ್​ಫೋರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅನುರಾಗ್ ಮೈರಾಲ್ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

AI Power: ಎಐ ಟೆಕ್ನಾಲಜಿಯಿಂದ ಮನುಷ್ಯ ಸಾವಿರ ವರ್ಷ ಬದುಕಲು ಸಾಧ್ಯವಾ? ಸ್ಟಾನ್​ಫೋರ್ಡ್ ವಿವಿ ಪ್ರೊಫಸರ್ ಹೇಳೋದಿದು
ಸ್ಟ್ಯಾನ್‌ಫೋರ್ಡ್ ಪ್ರೊಫೆಸರ್ ಅನುರಾಗ್ ಮೈರಲ್
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Feb 26, 2024 | 4:20 PM

Share

ಟಿವಿ9 ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಸಮಾವೇಶದ (What India Thinks Today global summit) ಎರಡನೇ ದಿನದಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI- Artificial Intelligence) ವಿಚಾರವಾಗಿ ಬಹಳ ವ್ಯಾಪಕ ಚರ್ಚೆ ಆಯಿತು. ಇಂಟರ್ನೆಟ್, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ AI ಅನ್ನು ಬಳಸಲಾಗುತ್ತಿದೆ. ಮಾನವ ಅಂಗಾಂಗ ಕಸಿ ಮತ್ತು 3D ಪ್ರಿಂಟಿಂಗ್​ನಲ್ಲಿ AI ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಾನವರು 60-70 ವರ್ಷಗಳ ಬದಲಿಗೆ AI ಮೂಲಕ 100-150 ವರ್ಷ ಅಥವಾ ಸಾವಿರ ವರ್ಷಗಳವರೆಗೂ ಬದುಕಲು ಸಾಧ್ಯವಾಗುತ್ತದೆ? ಇದು AI ಸಾಮರ್ಥ್ಯಕ್ಕೆ ಬಹಳ ಮುಖ್ಯವಾದ ಪ್ರಶ್ನೆ.

ಟಿವಿ9 ವೇದಿಕೆಯಲ್ಲಿ ಉಪಸ್ಥಿತರಿದ್ದ ಸ್ಟ್ಯಾನ್‌ಫೋರ್ಡ್ ಪ್ರೊಫೆಸರ್ ಅನುರಾಗ್ ಮೈರಲ್, ಆರೋಗ್ಯ ವ್ಯವಸ್ಥೆಯಲ್ಲಿ AI ಪಾತ್ರದ ಕುರಿತು ಮಾತನಾಡಿದರು. AI ಮೂಲಕ ಪ್ರಪಂಚದಾದ್ಯಂತ ಆರೋಗ್ಯ ವ್ಯವಸ್ಥೆಯನ್ನು ಹೇಗೆ ಸುಧಾರಿಸಬಹುದು ಎಂದು ಹೇಳಿದ ಅವರು, ಇದು ಮಾನವರ ಜೀವನವನ್ನು ಸುಧಾರಿಸುತ್ತದೆ ಮತ್ತು ಜೀವನ ಮಟ್ಟದೊಂದಿಗೆ ಸರಾಸರಿ ವಯಸ್ಸು ಕೂಡ ಹೇಗೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಮನುಷ್ಯರು 1000 ವರ್ಷಗಳ ಕಾಲ ಬದುಕುತ್ತಾರೆಯೇ?

27 ವರ್ಷಗಳ ಹಿಂದೆ ಫ್ಯೂಚರ್ ಟಾಕ್ ವೆಬ್‌ನಲ್ಲಿ ಓದುಗರು ತಂತ್ರಜ್ಞಾನದ ಮೂಲಕ ನಾವು 150 ವರ್ಷಗಳ ಕಾಲ ಬದುಕಬಹುದು ಎಂದು ಹೇಳುತ್ತಿದ್ದರು. ಈಗ ಇರುವ ಮತ್ತು ಇನ್ನೆರಡು ವರ್ಷಗಳಲ್ಲಿ ಸಿಗಲಿರುವ ತಂತ್ರಜ್ಞಾನದಿಂದ ನಾವು ಸಾವಿರ ವರ್ಷ ಬದುಕಲು ಸಾಧ್ಯವಾಗುತ್ತದೆ. ಆದರೆ ಮನುಷ್ಯ ಈಗ ಬದುಕುತ್ತಿರುವ ರೀತಿ ಹಾಗೆಯೇ ಇರುತ್ತದೆ ಎಂದರ್ಥವೇ? ಇದರ ಸತ್ಯಾಸತ್ಯತೆ ಇನ್ನೂ ತಿಳಿದುಬಂದಿಲ್ಲ ಎಂದು ಅನುರಾಗ್ ಮೈರಲ್ ಹೇಳಿದರು.

ಇದನ್ನೂ ಓದಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮನುಷ್ಯನಿಗೆ ಮಾರಕವಾ, ಪ್ರಯೋಜನಕಾರಿಯಾ?; ಐಐ ಪರಿಣಿತರು ಹೇಳಿದ್ದಿದು

AI ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಆರೋಗ್ಯ ಕ್ಷೇತ್ರದಲ್ಲಿ AI ಕುರಿತು ಮಾತನಾಡಿದ ಪ್ರೊಫೆಸರ್ ಮೈರಾಲ್, ಇದು ಆರೋಗ್ಯ ಸೇವೆಯನ್ನು ಸುಧಾರಿಸಿದೆ ಎಂದು ಹೇಳಿದರು.

ವಿಶ್ವದ 500 ಕೋಟಿ ಜನರಿಗೆ ಉತ್ತಮ ಚಿಕಿತ್ಸೆ ಲಭ್ಯವಿಲ್ಲ. ಆದರೆ ಆಯುಷ್ಮಾನ್ ಭಾರತ್ ಯೋಜನೆ ಭಾರತದಲ್ಲಿ ಚೆನ್ನಾಗಿ ಕೆಲಸ ಮಾಡಿದೆ. AI ಸಹಾಯದಿಂದ ಆರೋಗ್ಯ ಸೇವೆಗಳು ಜನರನ್ನು ತಲುಪಿವೆ. AI ಮೂಲಕ ನಾವು ವೈದ್ಯಕೀಯ ಕ್ಷೇತ್ರವನ್ನು ಇನ್ನಷ್ಟು ಸುಧಾರಿಸಬಹುದು ಎಂದರು.

ಕೊರೊನಾ ಎರಡನೇ ಅಲೆಯಲ್ಲಿ ಭಾರತದಲ್ಲಿ ಅನೇಕ ಜನರು ತೊಂದರೆಗೀಡಾಗಿದ್ದರು. ಆದರೆ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ತಳಮಟ್ಟದಲ್ಲಿ ಕೆಲಸ ಮಾಡಿದರು. AI ಅನ್ನು ಸರಿಯಾಗಿ ಬಳಸಿದರೆ, ಜನರ ಮನೆಗಳಿಗೆ ಆರೋಗ್ಯ ಸೇವೆಗಳನ್ನು ತಲುಪಿಸಬಹುದು. ರೋಗಗಳನ್ನು ಪತ್ತೆಹಚ್ಚಲು ಮತ್ತು ಪ್ರಾಥಮಿಕ ಆರೈಕೆಯನ್ನು ಒದಗಿಸಲು AI ಸಹಾಯ ಮಾಡುತ್ತದೆ ಎಂದು ಸ್ಟಾನ್​ಫೋರ್ಡ್ ವಿವಿ ಪ್ರೊಫೆಸರ್ ತಿಳಿಸಿದರು.

ಇದನ್ನೂ ಓದಿ: ಯುಪಿಐ ಆಗಲೀ ಎಐ ಆಗಲೀ, ನಿಬಂಧನೆಗಳ ನಡುವೆಯೂ ನಾವೀನ್ಯತೆ ಸಾಧಿಸಿ ತೋರಿಸಿದ್ದೇವೆ: ಸಚಿವ ಎ ವೈಷ್ಣವ್

AI ನಿಂದ ಡೇಟಾ ಸಂಗ್ರಹಣೆ

ಆರೋಗ್ಯ ಕಾರ್ಯಕರ್ತರು ಶೇಕಡಾ 80 ರಿಂದ 90 ರಷ್ಟು ಜನರನ್ನು ತಲುಪಿದರೆ, ಅವರು ಐಸಿಯು ಅಥವಾ ದೊಡ್ಡ ಆಸ್ಪತ್ರೆಗಳಿಗೆ ಹೋಗಬೇಕಾಗಿಲ್ಲ. AI ತಂತ್ರಜ್ಞಾನದೊಂದಿಗೆ ಡೇಟಾ ಸಂಗ್ರಹಣೆಯನ್ನು ಸುಧಾರಿಸಬಹುದು. ಇದು ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ರೋಗಗಳನ್ನು ಸರಿ ಸಮಯಕ್ಕೆ ಪತ್ತೆ ಮಾಡುತ್ತದೆ. AI ಆರೋಗ್ಯ ವ್ಯವಸ್ಥೆಯನ್ನು ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ, ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಪ್ರೊ. ಅನುರಾಗ್ ಮೈರಾಲ್ ಹೇಳಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
Wimbledon 2025: ನೊವಾಕ್ ನಾಗಾಲೋಟಕ್ಕೆ ಸಿನ್ನರ್ ಬ್ರೇಕ್
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಕೇಂದ್ರ ನೀಡುವ 5 ಕೇಜಿ ಅಕ್ಕಿ ಹಂಚುವ ಯೋಗ್ಯತೆ ರಾಜ್ಯ ಸರ್ಕಾರಕ್ಕಿಲ್ಲ: ಜೋಶಿ
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಪತಿಯನ್ನು ನದಿಗೆ ತಳ್ಳಿದ ಪತ್ನಿ, ಆಮೇಲೆ ನಡೆಯಿತು ಯಾರೂ ಊಹಿಸದ ಘಟನೆ!
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ಶಿವರಾಜ್​ಕುಮಾರ್ ಜನ್ಮದಿನ; ಮಧ್ಯರಾತ್ರಿ ಅಭಿಮಾನಿಗಳ ಜೊತೆ ಕೇಕ್ ಕಟ್
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ