Crocodile: ಕ್ಯಾಸಿಯಸ್ (Cassius) ಎಂಬ ಹೆಸರಿನ ಈ ದೈತ್ಯ ಮೊಸಳೆ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಗ್ರೀನ್ ಐಲ್ಯಾಂಡ್ನಲ್ಲಿರುವ ಮರೀನ್ಲ್ಯಾಂಡ್ ಕ್ರೊಕೊಡೈಲ್ ಪಾರ್ಕ್ನಲ್ಲಿ ವಾಸವಾಗಿದೆ (Marineland Crocodile Park on Green Island in Australia Queensland). 18 ಅಡಿ ಉದ್ದದ ಈ ದೈತ್ಯ ಎರಡು ದಿನಗಳ ಹಿಂದೆ 120ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಇದಕ್ಕೆ ಚಿಕನ್ ಮತ್ತು ಟ್ಯೂನಾ ಫಿಷ್ ಖಾದ್ಯಗಳನ್ನು ಕೊಟ್ಟು ಖುಷಿಪಡಿಸಲಾಗಿದೆ. ಈ ಮೊಸಳೆಯು 1987ರಿಂದಲೂ ಇದೇ ಉದ್ಯಾನವದಲ್ಲಿ ವಾಸಿಸುತ್ತಿದ್ದು ಗಿನ್ನೀಸ್ ವರ್ಲ್ಡ್ ರಿಕಾರ್ಡ್ನಲ್ಲಿಯೂ ಇದರ ಹೆಸರು ದಾಖಲಾಗಿದೆ.
ಕ್ಯಾಸಿಯಸ್ ವಯಸ್ಸಿನ ಹಂಗಿಲ್ಲದೇ ಚೈತನ್ಯಶೀಲವಾಗಿದೆ. ಉದ್ಯಾನದಲ್ಲಿ ಅತ್ಯುತ್ಸಾಹದಿಂದ ಇತರೇ ಮೊಸಳೆಗಳೊಂದಿಗೆ ಬೆರೆಯುತ್ತದೆ ಮತ್ತು ಎಲ್ಲರಿಗಿಂತ ಆಕರ್ಷಕವಾಗಿ ಕಾಣುತ್ತದೆ. ‘ಸಾಮಾನ್ಯವಾಗಿ ವಯಸ್ಸಾದಂತೆ ಮೊಸಳೆಗಳು ವಿಧೇಯ ಮತ್ತು ನಿರಾಸಕ್ತಿಯಿಂದ ವರ್ತಿಸುತ್ತವೆ. ಆದರೆ ಕ್ಯಾಸಿಯಸ್ ಈಗಲೂ ಉತ್ಸುಕನಾಗಿರುತ್ತದೆ. ಯಾರಾದರೂ ಅದರೆಡೆ ಲಕ್ಷ್ಯಕೊಟ್ಟರೆ ಉತ್ಸಾಹದಿಂದ ಹತ್ತಿರ ಬರಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ಅವನ ಹೊಳೆಯುವ ಕಣ್ಣುಗಳನ್ನು ನೋಡುವುದೇ ಛಂದ’ ಎಂದು 1987ರಲ್ಲಿ ಈ ದೈತ್ಯನನ್ನು ಗ್ರೀನ್ ಲ್ಯಾಂಡ್ಗೆ ಕರೆತಂದ ಸಂಶೋಧಕ ಟೂಡಿ ಸ್ಕಾಟ್ ಹೇಳಿದ್ದಾರೆ.
ಇದನ್ನೂ ಓದಿ : Viral Video: ಸ್ವಯಂವಿವಾಹಿತೆ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ
1984ರಲ್ಲಿ ಆಸ್ಟ್ರೇಲಿಯಾದ ಉತ್ತರ ಭಾಗದ ಫಿನ್ನೀಸ್ ನದಿಯಲ್ಲಿ ಕ್ಯಾಸಿಯಸ್ ಅನ್ನು ಬಂಧಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೊಸಳೇ ಸಂಶೋಧಕ ಗ್ರೇಮ್ ವೆಬ್, ‘ಈ ಮೊಸಳೆಯನ್ನು ಹಿಡಿಯುವುದು ಸುಲಭವಾಗಿರಲಿಲ್ಲ. ಈಗಲೂ ಆ ದೃಶ್ಯಗಳು ಕಣ್ಣಮುಂದಿವೆ. ಆಗ ಬರೋಬರೀ 16 ಅಡಿ, 10 ಇಂಚುಗಳಷ್ಟು ಉದ್ದವಿತ್ತು’ ಎಂದು ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ವರ್ಷ ಹೀಗೆ ಚೈತನ್ಯಯುತವಾಗಿ ಬಾಳು ಕ್ಯಾಸಿಯಸ್, ಹುಟ್ಟುಹಬ್ಬದ ಶುಭಾಶಯಗಳು!
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:21 pm, Sat, 10 June 23