Viral News: ಹಠಕ್ಕೆ ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ

Viral News In Kannada: ವಯಸ್ಸಿನ ಅಂತರದಿಂದ ನಮ್ಮನ್ನು ತಪ್ಪು ಮಾಡಿದವರಂತೆ ನೋಡುತ್ತಿರುವುದು ಸರಿಯಲ್ಲ. ಎಲ್ಲರೂ ಆರಂಭದಲ್ಲಿ ವಿರೋಧಿಸಿಯೂ ನಮ್ಮ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದ್ದೇವೆ.

Viral News: ಹಠಕ್ಕೆ ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ
Shamshad-Asiya
Edited By:

Updated on: Dec 06, 2022 | 5:53 PM

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತ ಹಿರಿಯರು ಹೇಳುತ್ತಾರೆ. ಆದರೆ ಹೀಗೂ ದೇವರು ನಿಶ್ಚಯ ಮಾಡಿರುತ್ತಾರಾ ಎಂಬ ಪ್ರಶ್ನೆ ಮೂಡುವಂತೆ ಕೆಲವರು ಜೋಡಿಗಳಾಗಿರುತ್ತಾರೆ. ಅಂತಹದೊಂದು ಜೋಡಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಜೋಡಿಗಳ ಹೆಸರು ಶಂಶಾದ್ ಮತ್ತು ಆಸಿಯಾ. ಪಾಕಿಸ್ತಾನ್ ಮೂಲದ ಈ ಪ್ರೇಮಪಕ್ಷಿಗಳು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರಲ್ಲೇನು ವಿಶೇಷ ಎಂದರೆ, ಇಲ್ಲಿ ವಧುವಿನ ವಯಸ್ಸು 18 ಹಾಗೂ ವರನ ವಯಸ್ಸು ಬರೋಬ್ಬರಿ 61 ವರ್ಷ. ಈ ಜೋಡಿಗಳ ವಿವಾಹದ ಸುದ್ದಿ ವೈರಲ್ ಆಗುತ್ತಿದ್ದಂತೆ ಮತ್ತೊಮ್ಮೆ ಪ್ರೀತಿ ಕುರುಡು ಎನ್ನುವ ಕ್ಲೀಷೆ ಡೈಲಾಗ್​ ಕೇಳಿ ಬರಲಾರಂಭಿಸಿದೆ. ಇಲ್ಲಿ ಅಚ್ಚರಿಯ ಸಂಗತಿಯೆಂದರೆ ಶಂಶಾದ್​ರನ್ನು ಪ್ರೀತಿಸಿ ವಿವಾಹವಾಗಿದ್ದು ಆಸಿಯಾ ಎಂಬುದು. ಅಂದರೆ ಇದು ಒತ್ತಾಯದ ಮದುವೆಯಲ್ಲ. ಬದಲಾಗಿ ಯುವತಿಯೇ ದಂಬಾಲು ಬಿದ್ದು ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.

ರಾವಲ್ಪಿಂಡಿ ಮೂಲದ ಆಸಿಯಾ ತನಗಿಂತ 43 ವರ್ಷ ಹಿರಿಯ ವ್ಯಕ್ತಿಯೊಬ್ಬರಿಂದ ಆಕರ್ಷಿತರಾಗಿದ್ದರು. ಇದಕ್ಕೆ ಕಾರಣ ಶಂಶಾದ್ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು. ಶಂಶಾದ್ ಅವರು ರಾವಲ್ಪಿಂಡಿಯಾದ್ಯಂತ ಬಡ ಹುಡುಗಿಯರನ್ನು ಮದುವೆ ಮಾಡಿಸುತ್ತಿದ್ದರು. ಅಲ್ಲದೆ ಅನೇಕ ಬಡವರಿಗೆ ನೆರವಾಗುತ್ತಿದ್ದರು. ಹೀಗೆ ಆಸಿಯಾ ಅವರ ಊರಿನಲ್ಲೂ ಒಂದಷ್ಟು ಹೆಣ್ಣು ಮಕ್ಕಳ ವಿವಾಹ ಮಾಡಿಸಿದ್ದಾರೆ. ಶಂಶಾದ್ ಅವರ ಈ ಸಮಾಜ ಸೇವೆಯಿಂದ ಪುಳಕಿತರಾಗಿದ್ದ ಆಸಿಯಾಗೆ ಅವರ ಮೇಲೆ ಪ್ರೇಮಾಂಕುರವಾಗಿದೆ.

ಹೀಗಿರುವಾಗ ಒಂದೆರಡು ಬಾರಿ ಶಂಶಾದ್ ಅವರನ್ನು ಆಸಿಯಾ ಭೇಟಿಯಾಗಿದ್ದಾರೆ. ಅವರು ತುಂಬಾ ನಿರಾಳವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅಲ್ಲದೆ ಸ್ಥಳೀಯ ಜನರು ಸಹ ಅವರ ಗುಣಗಾನ ಮಾಡುತ್ತಿದ್ದರು. ಹೀಗೆ ಅವರ ಬಗ್ಗೆ ಎಲ್ಲೆಡೆಯುವ ಅತ್ಯುತ್ತಮ ಅಭಿಪ್ರಾಯವಿತ್ತು. ಹೀಗಾಗಿ ಆಸಿಯಾ ತನ್ನ ಮನದ ಇಂಗಿತವನ್ನು ಶಂಶಾದ್ ಅವರಿಗೆ ತಿಳಿಸಿದ್ದರು. ದಿನ ಕಳೆದಂತೆ ಇಬ್ಬರ ನಡುವೆಯೂ ಪ್ರೇಮಾಂಕುರವಾಗಿದೆ.

ಇದನ್ನೂ ಓದಿ
Lady Singham: ಕೊನೆಗೂ ಲೇಡಿ ಸಿಂಗಮ್ ಅರೆಸ್ಟ್​..!
Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!
Crime Story: ಪೊಲೀಸ್ ಮಗ, ಎಲ್​ಎಲ್​ಬಿ ಪದವೀಧರ: ಯಾರು ಈ ಡಾನ್ ಲಾರೆನ್ಸ್ ಬಿಷ್ಣೋಯ್?
Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

ಅಲ್ಲದೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಆದರೆ ಆರಂಭದಲ್ಲಿ ಆಸಿಯಾ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಇದಾಗ್ಯೂ ಹಠ ಮಾಡಿ 61 ವರ್ಷದ ಶಂಶಾದ್ ಅವರನ್ನೇ ಪತಿಯಾಗಿ ಪಡೆಯುವಲ್ಲಿ 18 ವರ್ಷದ ಆಸಿಯಾ ಯಶಸ್ವಿಯಾಗಿದ್ದಾರೆ. ಅದರಂತೆ ಇದೀಗ ನವಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ರಾರಾಜಿಸುತ್ತಿದ್ದಾರೆ.

ಮಗಳ ಪ್ರಾಯದ ಯುವತಿಯನ್ನು ಮದುವೆಯಾಗಿರುವ ಬಗ್ಗೆ ಮಾತನಾಡಿದ ಶಂಶಾದ್, ‘ಈ ವಯಸ್ಸಿನಲ್ಲೂ ನನಗೆ ಇಂತಹ ಕಾಳಜಿಯುಳ್ಳ ಜೀವನ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ. ನನ್ನ ಕರ್ಮದ ಫಲವಾಗಿ ಆಸಿಯಾ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ಎಲ್ಲವೂ ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಶಂಶಾದ್ ತಿಳಿಸಿದ್ದಾರೆ.

ಇನ್ನು ಶಂಶಾದ್ ಅವರ ಕಾಳಜಿಯನ್ನು ಹಾಡಿಹೊಗಳಿರುವ ಆಸಿಯಾ, ಆರಂಭದಲ್ಲಿ ನಮ್ಮ ವಿವಾಹಕ್ಕೆ ಸಂಬಂಧಿಕರು ಒಪ್ಪಿಗೆ ನೀಡಿರಲಿಲ್ಲ. ಇದೀಗ ನನ್ನ ಮದುವೆಯಿಂದ ಸಂತೋಷವಾಗಿದ್ದೇನೆ. ನನ್ನ ಪತ್ನಿ ನನ್ನನ್ನು ಮಾತ್ರವಲ್ಲದೆ, ನನ್ನ ಕುಟುಂಬದವರನ್ನು ಸಹ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಂತಹ ಪತಿಯನ್ನು ಪಡೆದಿರುವ ನಾನೇ ಅದೃಷ್ಟವಂತೆ ಎಂದು ಆಸಿಯಾ ಖುಷಿ ವ್ಯಕ್ತಪಡಿಸಿದ್ದಾರೆ.

ಇದಾಗ್ಯೂ ಸಮಾಜ ಕೇವಲ ವಯಸ್ಸಿನ ಅಂತರದಿಂದ ನಮ್ಮನ್ನು ತಪ್ಪು ಮಾಡಿದವರಂತೆ ನೋಡುತ್ತಿರುವುದು ಸರಿಯಲ್ಲ. ಎಲ್ಲರೂ ಆರಂಭದಲ್ಲಿ ವಿರೋಧಿಸಿಯೂ ನಮ್ಮ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದ್ದೇವೆ. ಹೀಗಾಗಿ ನಮ್ಮ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕೆಂದು ಆಸಿಯಾ ಹೇಳಿದ್ದಾರೆ. ಒಟ್ಟಿನಲ್ಲಿ 18 ವರ್ಷದ ಆಸಿಯಾ 61 ವರ್ಷದ ವ್ಯಕ್ತಿಯನ್ನು ಮದುವೆಯಾಗಿ ಇದೀಗ ಸೋಷಿಯಲ್ ಮೀಡಿಯಾ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾಳೆ.

 

Published On - 7:47 pm, Sat, 2 July 22