ವಿಚ್ಛೇದನದ ಬಳಿಕ ಪತಿ ತನ್ನ ಮಾಜಿ ಪತ್ನಿಗೆ ಜೀವನ ಸಾಗಿಸಲು ಇಂತಿಷ್ಟು ಜೀವನಾಂಶ ನೀಡಲೇಬೇಕು. ಈ ಕಾನೂನುನನ್ನೇ ದುರುಪಯೋಗಪಡಿಸಿಕೊಂಡ ಮಹಿಳೆಯೊಬ್ಬಳು ಬ್ರಾಂಡೆಡ್ ಬಟ್ಟೆ, ಐಷಾರಾಮಿ ಜೀವನಕ್ಕಾಗಿ ಮಾಜಿ ಪತಿ ತಿಂಗಳಿಗೆ ರೂ 6 ಲಕ್ಷ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾಳೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಮಹಿಳೆಯ ಪರ ವಕೀಲರು ವಾದ ಮಂಡಿಸಿದ್ದು, ವಾದವನ್ನು ಆಲಿಸಿದ ನ್ಯಾಯಾಧೀಶರು ಅವಳ ಖರ್ಚಿಗೆ ಹಣ ಬೇಕಾದರೆ ಅವಳೇ ಸಂಪಾದಿಸಲಿ, ಗಂಡನಿಂದ ಕೇಳೋದಲ್ಲ ಎಂದು ಮಹಿಳೆ ಮತ್ತು ಆಕೆಯ ಪರ ವಾದಿಸಿದ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ವಿಚ್ಛೇದನ ಪ್ರಕ್ರಿಯೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ತನ್ನ ಮಾಜಿ ಪತಿಯಿಂದ ತಿಂಗಳಿಗೆ 6 ಲಕ್ಷ ರೂ ಜೀವನಾಂಶಕ್ಕಾಗಿ ಬೇಡಿಕೆ ಇಟ್ಟಿದ್ದನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ನ್ಯಾಯಾಧೀಶರ ಈ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮಹಿಳೆಯ ಪರ ವಾದ ಮಂದಿಸಿದ ವಕೀಲರು, ನನ್ನ ಕಕ್ಷಿದಾರರಿಗೆ ಅವರ ಮಾಜಿ ಪತಿ ತಿಂಗಳಿಗೆ 6 ಲಕ್ಷ ರೂ. ಜೀವನಾಂಶ ನೀಡಬೇಕು ಎಂದು ಹೇಳಿದ್ದಾರೆ. ಆಕೆಯ ಮೊಣಕಾಲು ನೋವಿನ ಚಿಕಿತ್ಸೆ, ಫಿಸಿಯೋಥೆರಪಿ , ಔಷಧಗಳು ಮತ್ತು ಇತರೆ ವೆಚ್ಚಗಳಿಗೆ ತಿಂಗಳಿಗೆ ₹ 4 ರಿಂದ 5 ಲಕ್ಷ ಬೇಕಾಗುತ್ತದೆ ಮತ್ತು ಬಳೆಗಳು, ಬ್ರಾಂಡೆಡ್ ಬಟ್ಟೆಗಳು, ಚಪ್ಪಲಿ ಇತ್ಯಾದಿ ಮೂಲಭೂತ ಅಗತ್ಯಗಳಿಗಾಗಿ 50 ಸಾವಿರ ಹಾಗೂ ಪೌಷ್ಟಿಕ ಆಹಾರಕ್ಕಾಗಿ 60 ಸಾವಿರ ಬೇಕಾಗುತ್ತದೆ. ಹೀಗೆ ಒಟ್ಟಾಗಿ ಪ್ರತಿ ತಿಂಗಳು 6,16,300ರೂ. ಮಾಸಿಕ ಜೀವನಾಂಶ ನೀಡಬೇಕು ಎಂದು ವಾದ ಮಂಡಿಸಿದ್ದಾರೆ.
భార్య మెయింటెనెన్స్గా నెలకు ₹6,16,300 అడుగుతారు..మరియు ఆమె న్యాయవాది సమర్థించడానికి ప్రయత్నిస్తున్నారు.
న్యాయమూర్తి – “ఆమె ఇంత ఖర్చు చేయాలనుకుంటే, ఆమె సంపాదించనివ్వండి, భర్తపై కాదు”
Wife ask for ₹6,16,300 per month as Maintenance
And her advocate is trying to justify.… pic.twitter.com/iIXkFXrTmp— CEO Voice (@CeoVoice_) August 21, 2024
ವಾದವನ್ನು ಆಲಿಸಿದ ನ್ಯಾಯಾಧೀಶರು “ತಿಂಗಳಿಗೆ 6,16,300 ರೂ.? ಯಾರಾದರೂ ಇಷ್ಟು ಖರ್ಚು ಮಾಡುತ್ತಾರೆಯೇ? ಆಕೆ ಅಷ್ಟು ಹಣ ಖರ್ಚು ಮಾಡಲೇಬೇಕೆಂದು ಬಯಸಿದರೆ, ಅವಳೇ ಸಂಪಾದಿಸಲಿ. ಗಂಡನ ಮೇಲೆ ಏಕೆ ಅವಲಂಬಿತವಾಗಬೇಕು. ಆಕೆಗೆ ಕುಟುಂಬದ ಬೇರೆ ಯಾವುದೇ ಜವಾಬ್ದಾರಿ ಇಲ್ಲ. ಮಕ್ಕಳನ್ನು ನೋಡಿಕೊಳ್ಳಬೇಕಾಗಿಲ್ಲ. ಸ್ವಂತ ಖರ್ಚಿಗೆ ಇಷ್ಟು ಹಣ ಕೇಳುತ್ತಿದ್ದಾಳೆ. ನಿಜಕ್ಕೂ ಇದು ಅಸಮಂಜಸವಾಗಿದೆ. ಜೀವನಾಂಶವು ಯಾವುದೇ ಕಾರಣಕ್ಕೂ ಗಂಡನಿಗೆ ಶಿಕ್ಷೆಯಾಗಬಾರದು” ಎಂದು ಹೇಳಿ ನ್ಯಾಯಾಧೀಶರು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಮಹಿಳೆ ಮತ್ತು ಆಕೆಯ ಪರ ವಾದಿಸಿದ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ನಮ್ಮಪ್ಪನನ್ನು ಜೈಲಿಗೆ ಹಾಕಿ, ತಂದೆಯ ವಿರುದ್ಧ ದೂರು ನೀಡಲು ಠಾಣೆಗೆ ಬಂದ 5 ವರ್ಷದ ಬಾಲಕ
ಈ ಕುರಿತ ಪೋಸ್ಟ್ ಒಂದನ್ನು CeoVoice ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಅಷ್ಟು ಹಣ ಬೇಕಿದ್ರೆ ಆಕೆಯೇ ಸಂಪಾದನೆ ಮಾಡಲಿ ಎಂದು ಗಂಡನಿಂದ ತಿಂಗಳಿಗೆ 6 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆಯಿಟ್ಟ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ದೃಶ್ಯವನ್ನು ಕಾಣಬಹುದು.
ಆಗಸ್ಟ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಈ ನ್ಯಾಯಾಧೀಶರಿಗೆ ನನ್ನ ನಮನಗಳು ಸರಿಯಾದ ಜಡ್ಜ್ಮೆಂಟ್ ಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದ್ದರೆ ಇಂತಹ ನ್ಯಾಯಾಧೀಶರಿರಬೇಕು’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ