ಕೊಚ್ಚಿ: ಎಲ್ಲಾ ವಯೋಮಾನದವರಿಗೂ ಈಜು ಕಲಿಯಲು ಉತ್ತೇಜನ ನೀಡಲು ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಈಜು ಸ್ಪರ್ಧೆಯನ್ನು ಆಯೋಜಿಸಿತ್ತು. 70 ವರ್ಷದ ಮಹಿಳೆಯೊಬ್ಬರು 780 ಮೀಟರ್ ಅಗಲದ ಪೆರಿಯಾರ್ ನದಿಯಲ್ಲಿ ಕೈಗಳನ್ನು ಕಟ್ಟಿಕೊಂಡು ಈಜಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. ಮನಸ್ಸಿದರೆ ಯಾವುದೇ ಕೆಲಸವನ್ನು ಮಾಡಬಹುದು ಎಂಬುದಕ್ಕೆ ಆರಿಫಾ ವಿಕೆ ಮಾದರಿಯಾಗಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂಬುದನ್ನು ಇವರು ಸಾಬೀತು ಮಾಡಿದ್ದಾರೆ. ಈ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ತೈಕ್ಕಾಟ್ಟುಕರದ ಆರಿಫಾ ವಿಕೆ, ಕುನ್ನೂಂಪುರಂನ 11 ವರ್ಷದ ಭರತ್ ಕೃಷ್ಣ ಮತ್ತು ಅಶೋಕಪುರಂನ 38 ವರ್ಷದ ಧನ್ಯಾ ಕೆ.ಜಿ ಮಡಪಂ ಕಡವುನಿಂದ ಮಣಪ್ಪುರಂ ದೇಸೋಮ್ ಕಡವುವರೆಗೆ ಈಜಿದರು.
ಅಕಾಡೆಮಿಯಲ್ಲಿ ತರಬೇತಿ ಪಡೆದ ನನ್ನ ಮಕ್ಕಳನ್ನು ನೋಡಿ ನಾನು ಈಜು ಕಲಿಯಲು ನಿರ್ಧರಿಸಿದೆ. ನನ್ನ ಕುಟುಂಬದ ಒಂಬತ್ತು ಮಂದಿಗೆ ಈಜು ಗೊತ್ತು. ನನ್ನ ತರಬೇತುದಾರರಾದ ಸಾಜಿ ವಳಸ್ಸೆರಿ ಅವರು ನನ್ನ ಕೈಗಳನ್ನು ಕಟ್ಟಿಕೊಂಡು ಈಜಲು ಹೇಳಿ, ನನ್ನಲ್ಲಿ ಆತ್ಮವಿಶ್ವಾಸ ನೀಡಿದ್ದಾರೆ. ಇದರಿಂದ ನಾನು ಕಲಿತಾ ಪಾಠ ಮತ್ತು ನಾನು ಈ ಬಗ್ಗೆ ಹೇಳಲು ಬಯಸುವುದು ಎಲ್ಲರೂ ಈಜುವುದನ್ನು ಕಲಿಯಬೇಕು. ಏಕೆಂದರೆ ನೀರಿನಲ್ಲಿ ಕೊಚ್ಚಿ ಹೋದ ಅಥವಾ ಈಜಲು ಬರದೇ ನೀರಿನಲ್ಲಿ ಮುಳುಗಿ ಹೋದ ಪ್ರಕರಣಗಳನ್ನು ನೋಡಿದಾಗ ಈಜಲು ಕಲಿಬೇಕು ಮತ್ತು ಜನರು ಹಿಂಜರಿಯಬಾರದು ಎಂದು ಹೇಳಿದ್ದಾರೆ.
ಮೂವರೂ ಈಜುಪಟುಗಳಿಗೆ ಕಳೆದ ವಾರದಿಂದ ಸಾಜಿ ಮತ್ತು ಅವರ ತಂಡ ವಿಶೇಷ ತರಬೇತಿ ನೀಡಿತ್ತು. ಈಜು ಕಲಿಯುವ ಮುನ್ನ ಎಲ್ಲ ರೀತಿ ಕ್ರಮಗಳನ್ನು ತೆಗೆದುಕೊಂಡಿದ್ದರು. ಸುರಕ್ಷತೆ ಕ್ರಮಗಳು ಸರಿಯಾಗಿದೆ ಎಂದು ಪರಿಶೀಲನೆ ನಡೆಸಲು ಮತ್ತು ಅವರಿಗೆ ರಕ್ಷಣೆಯನ್ನು ನೀಡಲು ಸುರಕ್ಷತಾ ಸಿಬ್ಬಂದಿಗಳು ಅವರನ್ನು ದೋಣಿಗಳಲ್ಲಿ ಹಿಂಬಾಲಿಸಿತು. ಬೆಳಿಗ್ಗೆ 8 ಗಂಟೆ ಸುಮಾರಿಗೆ ಈಜಲು ಪ್ರಾರಂಭಿಸಿದರು ಮತ್ತು 8.45 ರ ಸುಮಾರಿಗೆ ಯಶಸ್ವಿಯಾಗಿ ದಾಟಿದರು. “ಜನರಿಗೆ ಈಜು ಕಲಿಯಲು ವಯಸ್ಸು ಅಡ್ಡಿಯಾಗುವುದಿಲ್ಲ. ಈ ಸಂದೇಶವನ್ನು ಸಾರುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಜು ಬರದೇ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದರು, ಇದರಲ್ಲಿ ಮಕ್ಕಳು ಹೆಚ್ಚು ಪ್ರಾಣ ಕಳೆದುಕೊಂಡ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಸಾಜಿ ಹೇಳಿದರು.
ಇದನ್ನು ಓದಿ: ಕ್ಯಾಮಾರಾ ಕಣ್ಣಿಗೆ ಬಿದ್ದ ‘ಚಿನ್ನದ ಸರ ಸಾಗಾಣಿಕದಾರರು’: ಇರುವೆಗಳ ಸಾಹಸದ ವಿಡಿಯೋ ವೈರಲ್
ಪೆರಿಯಾರ್ ಸ್ಟ್ರೆಚ್ ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ಅವರು ಇದಕ್ಕೆ ಮಾರ್ಗದರ್ಶವನ್ನು ನೀಡಿದ್ದಾರೆ. ಅವರು ತಿಳಿಸಿರುವಂತೆ ಕಳೆದ ವರ್ಷ 102 ಜನರು ಈಜು ಬರದೇ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 77 ಅಪಘಾತಗಳಿಂದ ಪ್ರಾಣ ಕಳೆದುಕೊಂಡರೆ, ಇನ್ನೂ 25 ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕಸ್ಮಿಕವಾಗಿ ಮುಳುಗಿದ ಘಟನೆಗಳಲ್ಲಿ 62 ಪುರುಷರು ಮತ್ತು 15 ಮಹಿಳೆಯರು.
ವಲಸ್ಸೆರಿ ರಿವರ್ ಸ್ವಿಮ್ಮಿಂಗ್ ಕ್ಲಬ್ ಅನ್ನು 2010 ರಲ್ಲಿ ಆಲುವಾ ಮೂಲದ ಸಾಜಿ ವಲಸ್ಸೆರಿ ಅವರು ಪ್ರಾರಂಭಿಸಿದರು. ಅವರು 2009 ರ ತೆಕ್ಕಡಿ ದೋಣಿ ದುರಂತದಿಂದ ಸುಮಾರು 45 ಜನರು ಪ್ರಾಣ ಕಳೆದುಕೊಂಡರು. ಇದನ್ನು ಕಂಡು ಜನರಿಗೆ ಈಜಲು ಕಲಿಸಬೇಕು ಎಂದು ನಿರ್ಧಾರ ಮಾಡಿದರು. ಇವರು 5,700 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ತರಬೇತಿ ನೀಡಿದ್ದಾರೆ, ಅವರಲ್ಲಿ 700 ಮಂದಿ ವಿಕಲಚೇತನರು ಮತ್ತು ಹಿರಿಯ ನಾಗರಿಕರು. ಈ ವರ್ಷದ ಬೇಸಿಗೆ ರಜೆಯಲ್ಲಿ, 720 ಜನರು ಸಜಿ ಅವರಿಂದ ಈಜು ಕಲಿತರು ಮತ್ತು ಅವರಲ್ಲಿ 130 ಜನರು ಪೆರಿಯಾರ್ ದಾಟಲು ಕಲಿಯುತ್ತಿದ್ದಾರೆ.
Published On - 12:04 pm, Thu, 30 June 22