
ಮರಿಯಾನೆಗಳು (baby elephant) ಏನು ಮಾಡಿದ್ರೂ ನೋಡೋಕೆ ಖುಷಿ ಎನಿಸುತ್ತದೆ. ಕೆಲವೊಮ್ಮೆ ತನ್ನ ಆಟ ತುಂಟಾಟಗಳಿಂದಲೇ ಗಮನ ಸೆಳೆಯುತ್ತವೆ. ಪಾರಿವಾಳವನ್ನು ಕಂಡೊಡನೆ ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಮರಿಯಾನೆ ಬೆನ್ನಟ್ಟಿಕೊಂಡು ಓಡಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ದೃಶ್ಯ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಅನಿಮಲ್ ಟ್ರಾವೆಲ್ ಅಡ್ವೇಚರ್ (Animal travel adventures) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮರಿಯಾನೆ ಪಾರಿವಾಳ ಕಂಡೊಡನೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಅಟ್ಟಾಡಿಸಿಕೊಂಡು ಹೋಗಿದೆ. ಈ ಆನೆ ಮರಿ ಬೆನ್ನಟ್ಟಿ ಬರುವುದನ್ನು ಕಂಡ ಪಾರಿವಾಳ ಓಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಖುಷಿ ಖುಷಿಯಾಗಿ ಚೆಂಡಾಟ ಆಡಿದ ಮರಿಯಾನೆ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ದೃಶ್ಯ ಎಂದರೆ, ಮತ್ತೊಬ್ಬರು ಪ್ಲೇ ಸ್ಕೂಲ್ ಬೇಬಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ