Viral Video: ಏಕಾಏಕಿ ಎಲೆಕ್ಟ್ರಾನಿಕ್ ರಿಪೇರಿ ಶಾಪ್ ಒಳಗೆ ನುಗ್ಗಿದ ಗೂಳಿ; ಹೆದರಿ ಹೈರಾಣಾದ ಅಂಗಡಿ ಮಾಲೀಕ
ಸೋಷಿಯಲ್ ಮಿಡಿಯಾದಲ್ಲಿ ಪ್ರತಿನಿತ್ಯ ತರಹೇವಾರಿ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ವಿಡಿಯೋ ದೃಶ್ಯಾವಳಿಗಳಂತೂ ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸದ್ಯ ಅಂತಹದ್ದೊಂದು ಫನ್ನಿ ವಿಡಿಯೋ ವೈರಲ್ ಆಗಿದ್ದು, ಕೋಪಗೊಂಡ ಗೂಳಿಯೊಂದು ಇದಕ್ಕಿದ್ದಂತೆ ಎಲೆಕ್ಟ್ರಾನಿಕ್ ರಿಪೇರಿ ಶಾಪ್ ಒಳಗೆ ನುಗ್ಗಿದೆ. ಗೂಳಿ ನುಗ್ಗಿದ ತಕ್ಷಣ ಅಲ್ಲಿಂದ ಹೊರಬರಲಾರದೆ ಅಂಗಡಿ ಮಾಲೀಕ ಪೇಚಿಗೆ ಸಿಲುಕಿದ್ದಾರೆ.
ಯಾವುದೇ ಪ್ರಾಣಿಗಳಾಗಿರಲಿ ಹೆಚ್ಚಿನ ಸಂದರ್ಭಗಳಲ್ಲಿ ಅವುಗಳು ಯಾರಿಗೂ ತೊಂದರೆ ಕೊಡದೆ ತಮ್ಮ ಪಾಡಿಗೆ ಇದ್ದು ಬಿಡುತ್ತವೆ. ಕೆಲವೊಮ್ಮೆ ಅವುಗಳಿಗೆ ಮದವೇರಿದಾಗ, ಸಿಟ್ಟು ಬಂದಾಗ ರಂಪ ರಾಮಾಯಣವನ್ನೇ ನಡೆಸುತ್ತವೆ. ಹೀಗೆ ಪ್ರಾಣಿಗಳ ಸಿಟ್ಟಿಗೆ ಗುರಿಯಾಗಿ ಪೇಚಿಗೆ ಸಿಲುಕಿದಂತವರ ಕಥೆಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಸದ್ಯ ಅದೇ ರೀತಿಯ ಇದೀಗ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿಟ್ಟಿಗೆದ್ದ ಗೂಳಿಯೊಂದು ಏಕಾಏಕಿ ಎಲೆಕ್ಟ್ರಾನಿಕ್ ರಿಪೇರಿ ಶಾಪ್ ಒಳಗೆ ನುಗ್ಗಿದ್ದು, ಗೂಳಿಯ ವರ್ತನೆಯಿಂದ ಅಂಗಡಿಯೊಳಗಿದ್ದ ಯುವಕರಿಬ್ಬರು ಪಜೀತಿಗೆ ಸಿಲುಕಿದ್ದಾರೆ.
ಈ ಕುರಿತ ವಿಡಿಯೋವನ್ನು ಚಿರಾಗ್ (@chiragbarjathya) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಎಲೆಕ್ಟ್ರಾನಿಕ್ ರಿಪೇರಿ ಶಾಪ್ ಒಂದರಲ್ಲಿ ಯುವಕರಿಬ್ಬರು ತಮ್ಮ ಪಾಡಿಗೆ ಕೆಲಸ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಕೆಲಸ ಮಾಡುತ್ತಿರುವ ವೇಳೆ ಏನೋ ಸದ್ದು ಕೇಳಿಸುತ್ತಿದೆಯಲ್ವಾ ಎಂದು ಎದ್ದು ಈಚೆ ನೋಡುತ್ತಿರುವ ವೇಳೆಯಲ್ಲಿ ಏಕಾಏಕಿ ಗೂಳಿಯೊಂದು ಬಂದು ಇವರ ಅಂಗಡಿಯೊಳಗೆ ನುಗ್ಗಿ ಬಿಡುತ್ತದೆ. ಅಯ್ಯೋ ದೇವ್ರೆ ಈ ಗೂಳಿಯ ಕೈಗೆ ಸಿಕ್ರೆ ನಮ್ ಕಥೆ ಗೋವಿಂದ ಎಂದು ಆ ಯುವಕರಿಬ್ಬರು ಗೂಳಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಹಾಗೂ ಗೂಳಿ ಕೂಡಾ ಇಲ್ಲಿಂದ ಹೇಗಪ್ಪಾ ಹೊರ ಹೋಗೋದು ಎಂದು ಪರದಾಡುತ್ತೆ. ಆ ಸಂದರ್ಭದಲ್ಲಿ ಹೊರಗಿದ್ದವರು ಗೂಳಿ ಹೊರ ಬರಲು ದಾರಿಯನ್ನು ಮಾಡಿಕೊಡುತ್ತಾರೆ.
Question: “What is your wildest dream?”
Answer: pic.twitter.com/3t0YW5XZ3f
— Chirag Barjatya (@chiragbarjatyaa) April 23, 2024
ಇದನ್ನೂ ಓದಿ: ಗೋಧಿ ಕಟಾವು ಮಷಿನ್ ಒಳಗೆ ಸಿಲುಕಿ 14ರ ಬಾಲಕ ಸಾವು; ಛಿದ್ರಗೊಂಡ ದೇಹ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ದೇವ್ರೆ ಇದೆಂಥಾ ವಿಚಿತ್ರ ಘಟನೆಯಪ್ಪಾ ಎಂದು ನೆಟ್ಟಿಗರು ಈ ವಿಡಿಯೋ ದೃಶ್ಯಾವಳಿಯನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ